ಕೃಷಿಯ ಸುಧಾರಣೆಯಿಂದ ರಾಷ್ಟ್ರ ಅಭಿವೃದ್ಧಿ ಸಾಧ್ಯ: ನಿಂಗಪ್ಪ

0
22

ಆಳಂದ: ಭಾರತ ದೇಶ ಕೃಷಿ, ರೈತರು, ಹಳ್ಳಿಗಳಿಂದ ಕೂಡಿರುವ ರಾಷ್ಟ್ರವಾಗಿದೆ. ಇಂದಿಗೂ ಕೂಡಾ ದೇಶದ ಹೆಚ್ಚಿನ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಕೃಷಿ ಕ್ಷೇತ್ರ, ರೈತನ ಸ್ಥಿತಿ ಸುಧಾರಣೆ ಆದರೆ ಮಾತ್ರ ರಾಷ್ಟ್ರ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ನರೋಣಾ ಗ್ರಾಮದ ಪ್ರಗತಿಪರ ರೈತ ಸುಭಾಶ್ಚಂದ್ರ ಆರ್.ವಾಲಿ ಅವರ ತೋಟದಲ್ಲಿ ಬುಧವಾರ ದೀಪಾವಳಿ ದಿನದಂದು ಜರುಗಿದ ಗದ್ದೆ ಪೂಜೆಯಲ್ಲಿ ಭಾಗವಹಿಸಿ ಪರಿಷತ್ ವತಿಯಿಂದ ಪ್ರಗತಿಪರ ರೈತರಿಗೆ ಸತ್ಕಾರ ಮತ್ತು ರೈತ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಭೂತಾಯಿಯನ್ನೇ ಅವಲಂಬಿಸಿ ಬದುಕು ಸಾಗಿಸುವ ರೈತನು, ಭೂಮಿಯನ್ನು ದೇವರೆಂದು ಆರಾಧಿಸುವ, ಪೂಜಿಸುವ ಸಂಸ್ಕೃತಿ ಬಹಳ ಪುರಾತನವಾದದ್ದು. ಹಗಲು-ರಾತ್ರಿ, ಮಳೆ-ಚಳಿ ಲೆಕ್ಕಿಸದೆ ಕಷ್ಟಪಟ್ಟು ದುಡಿದು ಅನ್ನವನ್ನು ನೀಡುವ ಕೃಷಿ ಸಂಸ್ಕೃತಿಯಿಂದ ದೂರಸರಿಯಬಾರದು ಎಂದು ಮಾರ್ಮಿಕವಾಗಿ ನುಡಿದರು.

ಸತ್ಕಾರ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ರೈತ ಸುಭಾಶ್ಚಂದ್ರ ಆರ್.ವಾಲಿ, ರೈತ ನಿರಂತರವಾಗಿ ದುಡಿಮೆ ಮಾಡಬೇಕು. ತನ್ನ ಕಾಯಕವನ್ನು ಅತ್ಯಂತ ಶೃದ್ಧೆ, ನಿಷ್ಠೆಯಿಂದ ಮಾಡಿದರೆ ಅದಕ್ಕೆ ಪ್ರತಿಫಲ ಖಂಡಿತ ದೊರೆಯುತ್ತದೆ. ಆಧುನೀಕರಣಕ್ಕೆ ಒಳಗಾಗಿ ನಗರ ಪ್ರದೇಶಕ್ಕೆ ವ್ಯಾಪಕ ವಲಸೆ ಹೋಗುತ್ತಿರುವುದು, ಕೃಷಿಯಲ್ಲಿ ನಿರಾಸಕ್ತಿ ಬೇಡ. ಇದು ರಾಷ್ಟ್ರದ ಬೆಳವಣಿಗೆಗೆ ಪೂರಕವಲ್ಲ. ಕೃಷಿ ಸಂಸ್ಕೃತಿಯಿಂದ ವಿಚಲಿವಾಗಬಾರದು. ಮರೆಯಾಗುತ್ತಿರುವ ಇಂತಹ ಗ್ರಾಮೀಣ ಸೊಗಡನ್ನು ಬಿಂಬಿಸುವ ಜಾನಪದ ಸಂಸ್ಕೃತಿ ಉಳಿಸುವುದು ಪ್ರಸ್ತುತ ಸಂದರ್ಭಗಳಲ್ಲಿ ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.

ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಪ್ರಮುಖರಾದ ರಾಚಣ್ಣ ವಾಲಿ, ಶಿವಾನಂದ ವಾಲಿ, ದತ್ತು, ದಯಾನಂದ, ಬಸವರಾಜ, ಶ್ರೀಶೈಲ್, ಕಾಶಿನಾಥ ಸಾವಳಗಿ, ನಿಂಗರಾಜ, ವೀರೇಶ ಬೋಳಶೆಟ್ಟಿ, ಶರಣು, ಹೇಮಾ ಗುಗ್ಗಳೆ, ಪ್ರಿತಿ, ಸುವರ್ಣ, ಶಶಾಂಕ್, ಆದಿತ್ಯ, ತುಳಜಾರಾಮ ಜಮಾದಾರ, ರಾಮಯ್ಯ ಗುತ್ತೇದಾರ, ಗುರುಲಿಂಗಪ್ಪ ಮಾಲಿಪಾಟೀಲ, ನಾಗಣ್ಣ ಮರತೂರ, ಭದ್ರಪ್ಪ ವಾಲಿ, ಭದ್ರಪ್ಪ ಸಾವಳಗಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here