ಆಳಂದ: ವಿದ್ಯೆ ಕಲಿತು ಉನ್ನತ ಹುದ್ದೇಗೆರಿದರೆ ಸಾಲದು ಕಲಿಸಿದ ಗುರುಗಳಿಗೆ ಹಿಂದುರುಗಿ ಗೌರವಾರ್ಥವಾಗಿ ಶಾಲೆಗೆ ಬಂದು ಸನ್ಮಾನಿಸಿ ಗೌರವಿಸುವ ಕಾರ್ಯ ಮಾಡಿದರೆ, ಅದುವೇ ನಾವು ಸಮಾಜಕ್ಕೆ ಕೊಡುವ ಗೌರವ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಹೇಳಿದರು.
ಪಟ್ಟಣದ ಜೀವನ ಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ತಡಕಲ್‍ನ ಪ್ರತಿಷ್ಠಿತ ಎಂಎಆರ್‍ಜಿಸಿ ಪ್ರೌಢಶಾಲೆಯ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶಾಸಕರು ಮಾತನಾಡಿದರು.
ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯಂತ ಅವಶಕತೆ ಇದೆ. ಶಿಕ್ಷಣವೇ ಸರ್ವಸ್ವವಾಗಿದೆ. ವಿದ್ಯಾರ್ಥಿಯ ಶಿಕ್ಷಣ ತಳಪಾಯಕ್ಕೆ ಮುನ್ನೂಡಿ ಬರೆಯುವ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರನ್ನು ವಿದ್ಯಾರ್ಥಿಗಳಾದವರು ಎಂದಿಗೂ ಮರೆಯುವುದಿಲ್ಲ. ಆದರೆ ಬರೀ ಸ್ಮರಿಸುವುದಕ್ಕಿಂತ ಅವರಲ್ಲಿಗೆ ಬಂದು ಅವರನ್ನು ಗೌರವಿಸುವಂತ ಕೆಲಸ ಇಲ್ಲಿನ ಹಳೆಯ ವಿದ್ಯಾರ್ಥಿಗಳು ಮಾಡಿದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಶಿಕ್ಷಕರಿಗೆ ಸಮಾಜದಲ್ಲಿ ದೊಡ್ಡ ಗೌರವವಿದೆ. ಮಕ್ಕಳಿಗೆ ತಿಳಿಯುವ ಹಾಗೆ ಬೋಧಿಸುವ ಮೂಲಕ ಇದನ್ನು ಉಳಿಸಿ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಮಾದನಹಿಪ್ಪರಗಾ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳು ಲಕ್ಷಕೊಟ್ಟು ಕಲಿತರೆ ಮುಂದೊಂದು ದಿನ ಲಕ್ಷಾಧೀಶರರೆ ಆಗುತ್ತಾರೆ. ವಿದ್ಯೆ ಕಲಿಸುವ ಗುರುವಿಗೆ ಮರಳಿ ಬಂದು ಗೌರವಿಸುವ ಹಳೆಯ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು.
ಸಂಸ್ಥೆಯ ಕಾರ್ಯದರ್ಶಿ ಹರ್ಷಾನಂದ ಗುತ್ತೇದಾರ, ಆಡಳಿತಾಧಿಕಾರಿ ರಾಘವೇಂದ್ರ ಚಿಂಚನಸೂರ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮತ್ತಿತರು ಮಾತನಾಡಿದರು.
ಪ್ರಾಚಾರ್ಯ ಅಪ್ಪಾಸಾಬ ಬಿರಾದಾರ, ಅಶೋಕ ರೆಡ್ಡಿ, ಸಂತೋಷ ವೇದಪಾಠಕ, ಮಲ್ಲಿಕಾರ್ಜುನ ಬುಕ್ಕೆ, ಮಲ್ಲಿನಾಥ ತುಕಾಣೆ, ರಾಜೇಂದ್ರ ಭಾವಿ, ಸಂಜಯ ಮೋರೆ, ಶಿವಶರಣಪ್ಪ ಅಲ್ಮದ್, ಪಿ.ಡಿ.ಜೈನ್, ರಾಜೇಂದ್ರ ಬೋಳಶೆಟ್ಟಿ, ಇಶಾಕಾ ಅಲಿ ಗುತ್ತೇದಾರ, ಶಿವರಾಜ ಕಲಶೆಟ್ಟಿ, ಬಸವರಾಜ ಬಿರಾದಾರ ಶಿಕ್ಷಕ ವೃಂದ್ಧಕ್ಕೆ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅನುಬಂಧ-2021ರ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಶಿಕ್ಷಕ ಸಿದ್ಧರಾಮ ವಾಡೆದ ಸ್ವಾಗತಿಸಿದರು, ಕಾಶಿನಾಥ ಹಿರೇಮಠ ನಿರೂಪಿಸಿದರು. ಅನಿತಾ ಹತ್ತರಕಿ ವಂದಿಸಿದರು.