ಕಲಬುರಗಿ: -ನಗರದಿ೦ದ ಪ್ರಕಟವಾಗುತ್ತಿರುವ ಬಹಮನಿ ನ್ಯೂಸ್ ಉರ್ದು ಪತ್ರಿಕೆಯ ಸಂಪಾದಕರಾದ ಅಜೀಜುಲ್ದಾ ಸರಮಸ್ತ್ ಅವರ ಪುತ್ರಿ ಸಯೀದಾ ನೂರ್ -ಉಜ್-ಜಿಯಾ ಅವರಿಗೆ ಕರ್ನಾಟಕ ಅಕ್ಕಮಹಾದೇವಿ ವಿವಿಯ ಸಮೂಹ ಮಾಧ್ಯಮ ಸ್ಮಾತ್ರಕೊತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಕರ್ನಾಟಕ ಅಕ್ಕಮಹಾದೇವಿ ವಿವಿಯ ಕುಲಸಚಿವರು ಈ ಮಾಹಿತಿ ನೀಡಿದ್ದುವಿಜಯಪುರದ ವಿವಿಯ ಆವರಣದಲ್ಲಿ ಹಮ್ಮಿಕೊಂಡಿರುವ 12ನೇ ಘಟಿಕೋತ್ಸವ ಸಮಾರಂಭದಲ್ಲಿ ಸಯೀದಾ ನೂರ್ ಅವರಿಗೆ ಚಿನ್ನದ ಪದಕ, ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದೆ೦ದು ಆಹ್ವಾನ ಪತ್ರದಲ್ಲಿ ತಿಳಿಸಿದ್ದಾರೆ
ಸಯೀದಾ ನೂರ್ ಕುರಿತು:-ದಕ್ಷಿಣ ಭಾರತದ ಪ್ರಥಮ ಶೂಫಿ ಸಂತ್ ಶಹಾಪುರ ತಾಲೂಕಿನ ಸಗರ ಗ್ರಾಮದ ಹಜರತ್ ಶೂಫಿ ಸರಮಸ್ತ ವಂಶಸ್ಥ ಬಹಮನಿ ನ್ಯೂಸ್ ಪತ್ರಿಕೆಯ ಸಂಪಾದಕ ಅಜೀಜುಲ್ಲಾ ಸರಮಸ್ತ್ ಅವರ ಸುಪುತ್ರಿ.
ನಗರದ ಖ್ಹಾಜಾ ಶಿಕ್ಷಣ ಸಂಸ್ಥೆಯ ಬೀ ಬೀ ರರಭಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾದ ಸಯೀದಾ ನೂರ್ ಅವರು ಸಮೂಹ ಮಾಧ್ಯಮದ ವಿಷಯದಲ್ಲಿ ಮಹಿಳಾ ವಿಶ್ವ ವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಪಡೆದಿದ್ದಾರೆ.
“ನಮ್ಮ ಸರಮಸ್ತ್ ಶೂಫಿ ವಂಶದ ಇತಿಹಾಸದಲ್ಲಿಯೇ ಮಹಿಳೆಯೊಬ್ಬಳು ಪ್ರಥಮ ರ್ಯಾಂಕನೊಂದಿಗೆ ಚಿನ್ನದ ಪದಕ ಪಡೆಯುತ್ತಿರುವುದು ಪ್ರಥಮ ಈ ಸಾಧನೆಯಿ೦ದ ಹರ್ಷಭರಿತಯರಾಗಿದ್ದೇವೆ ”” ಎಂದು ಹಿರಿಯ ಪತ್ರಕರ್ತ ಬಹಮನಿ ನ್ಯೂಸ್ ಪತ್ರಿಕೆ ಸಂಪಾದಕರಾದ ಅಜೀಜುಲ್ಹಾ ಸರಮಸ್ತ್ ಪ್ರತಿಕ್ರಿಯಿಸಿದ್ದಾರೆ.