ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಪಂಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 2019 ರಿಂದ 2022ನೇ ಸಾಲಿನಲ್ಲಿ ಅವ್ಯವಹಾರ ನಡೆದಿದ್ದು, ಇದರಲ್ಲಿ ಭಾಗಿಯಾದ ಕಂಪ್ಯೂಟರ್ ಆಪರೇಟರ್‍ನನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ತೊನಸನಹಳ್ಳಿಯ ಗ್ರಾಮದ ಅಲ್ಲಮಪ್ರಭು ಸೀಬಾ ಸೋಮವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ದೂರು ಸಲ್ಲಿಸಿದರು.
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2019ರಿಂದ 2022ನೇ ಸಾಲಿನಲ್ಲಿ ಸಾಕಷ್ಟು ಗ್ರಾಪಂಯಲ್ಲಿ ಅವ್ಯವಹಾರವಾಗಿದೆ. ಈಗಾಗಲೇ ಕಂಪ್ಯೂಟರ್ ಆಪರೇಟರ್ ಮೇಲೆ ಕ್ರಮಕೈಗೊಳ್ಳಬೇಕೆಂದು ದೂರು ಸಲ್ಲಿಸಲಾಗಿತ್ತು.ಅದಕ್ಕೆ ಸಂಬಂಧಿಸಿದಂತೆ ಕಲಬುರಗಿ ಒಂಬುಡ್ಸಮನ್ ಜಿಪಂ ಅವರು ಈ ಬಗ್ಗೆ ತನಿಖೆ ಕೈಗೊಂಡು ವರದ ನೀಡಲು ತಾಪಂ ಕಾರ್ಯನಿರ್ವಾಹಕ ಅಧಕಾರಿಗಳಿಗೆ ಆದೇಶಿಸಿದ್ದರು.
ಆದರೆ ಯಾವುದೇ ಕ್ರಮಕೈಗೊಳ್ಳದ ಕಾರಣ, ಕೂಡಲೇ ತನಿಖೆ ನಡೆಸಿ, ಕಂಪ್ಯೂಟರ್ ಆಪರೇಟರ್‍ನನ್ನು ಅಮಾನತು ಮಾಡಬೇಕು.ಇಲ್ಲದಿದ್ದರೇ ಗ್ರಾಪಂ ಎದುರುಗಡೆ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.