ಬಿಲ್ ಕಲೆಕ್ಟರ್ ವಿರುದ್ಧ ಕ್ರಮಕೈಗೊಳ್ಳಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ

0
163

ಶಹಾಬಾದ : ತಾಲೂಕಿನ ಹೊನಗುಂಟಾ ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್ ಗ್ರಾಮಸ್ಥರ ಹಣ ದುರುಪಯೋಗಪಡಿಸಿಕೊಂಡಿರುಗ ಬಗ್ಗೆ ದೂರು ಸಲ್ಲಿಸಿದರೂ, ಅವನ ಮೇಲೆ ಯಾವುದೇ ಕ್ರಮಕೈಗೊಳ್ಳದಿರುವುದನ್ನು ಖಂಡಿಸಿ ಸೋಮವಾರ ನಗರದ ತಾಪಂ ಕಚೇರಿ ಎದುರುಗಡೆ ಹೊನಗುಂಟಾ, ವಡ್ಡರವಾಡಿ ಹಾಗೂ ಕಡೆಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಹೊನಗುಂಟಾ ಗ್ರಾಪಂಯ ಬಿಲ್ ಕಲೆಕ್ಟರ್ ಗ್ರಾಮಸ್ಥರ ಹತ್ತಿರ ಆಸ್ತಿ ವರ್ಗಾವಣೆಗೋಸ್ಕರ್ ಸುಮಾರು ಒಬ್ಬರಿಂದ 5ಸಾವಿರದಿಂದ 20 ಸಾವಿರದವರೆಗೆ ಹಣವನ್ನು ಪಡೆದು, ಅಧಿಕಾರಿಗಳ ಸಹಿಯ ಹಾಗೇ ನಕಲಿ ಸಹಿ ಮಾಡಿ, ಹೊನಗುಂಟಾ, ವಡ್ಡರವಾಡಿ ಹಾಗೂ ಕಡೆಹಳ್ಳಿ ಗ್ರಾಮಸ್ಥರ ಹಣವನ್ನು ಲಪಟಾಯಿಸಿದ್ದಾನೆ.ಅಲ್ಲದೇ ಗ್ರಾಪಂಗೆ ಹಣವನ್ನು ಕಟ್ಟದೇ ಮೋಸ ಮಾಡಿದ್ದಾನೆ. ಸುಮಾರು ಜನರ ಹಣವನ್ನು ಪಡೆದುಕೊಂಡು ಮೋಸ ಮಾಡಿರುತ್ತಾನೆ.ಆದ್ದರಿಂದ ಗ್ರಾಪಂ ಬಿಲ್ ಕಲೆಕ್ಟರ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಕಠಿಣ ಮ್ರಮ ತೆಗೆದುಕೊಳ್ಳಬೇಕು.ಅಲ್ಲದೇ ಅವನ್ನನ್ನು ಅಮಾನತು ಮಾಡಿ, ಅವನಿಂದ ದುರುಯೋಗಪಡಿಸಿಕೊಂಡ ಹಣವನ್ನು ವಸೂಲಾತಿ ಮಾಡಬೇಕು ಎಂದು ಕಳೆದ ತಿಂಗಳಿನಲ್ಲಿ ದೂರು ಸಲ್ಲಿಸಲಾಗಿತ್ತು.

Contact Your\'s Advertisement; 9902492681

ಆದರೆ ಪಿಡಿಓ ಹಾಗೂ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಬಿಲ್ ಕಲೆಕ್ಟರ್‍ನ ಒತ್ತಡಕ್ಕೆ ಮಣಿದು ವಿಳಂಬ ನೀತಿ ಅನುಸರಿಸುತ್ತಿದ್ದಾರೆ.ಅಲ್ಲದೇ ಬಿಲ್ ಕಲೆಕ್ಟರ್ ಒಂದು ತಿಂಳಿನಿಂದ ಕಚೇರಿಗೂ ಬರುತ್ತಿಲ್ಲ. ಕೂಡಲೇ ಬಿಲ್ ಕಲೆಕ್ಟರ್ ವಿರುದ್ಧ ತನಿಖೆ ನಡೆಸಿ, ಅವನ ವಿರುದ್ಧ ವೇಳೆ ಕ್ರಮ ಕೈಗೊಳ್ಳದಿದ್ದರೇ ಗ್ರಾಮಸ್ಥರು ಸೇರಿಕೊಂಡು ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶರಣಬಸಪ್ಪ ಹಲಕರ್ಟಿ, ಶರಣು ಕೊಡಸಾ, ಭೀಮಣ್ಣ ಗೆಜ್ಜಿ,ಶರಣಬಸಪ್ಪ ಶ್ರೀಪತಿ, ಗಂಗಣ್ಣ ಚಾಕ್ರಿ, ದೇವಪ್ಪ ಪೂಜಾರಿ, ಚಂದ್ರು ಮರಗೋಳ, ಮೌನೇಶ ರಾಜೋಳ, ಸಾಬು ಇಜೇರಿ, ವಜ್ರಪ್ಪ ಭಂಗಿ, ನಾಗು ಸುಣಗಾರ, ಸಾಬಣ್ಣ ಬನ್ನೆಪ್ಪ, ಪ್ರಭು ಕಂಡ್ರು, ಮೈಲಾರಿ ಆಡಿನ್, ರಾಜು ಸಣಮೋ, ಭಾಗಪ್ಪ ಕೊಡಸಾ, ಗಣಪತರಾವ ಮಾನೆ,ರಾಜೇಂದ್ರ ಅತನೂರ, ತಿಮ್ಮಯ್ಯ ಮಾನೆ, ನೀಲಕಂಠ ಹುಲಿ, ತುಳಜಾರಾಮ.ಎನ್.ಕೆ, ಕಿರಣ.ಜಿ ಇತರರು ಇದ್ದರು.ಸೇರಿದಂತೆ ಐವತ್ತಕ್ಕೂ ಹೆಚ್ಚು ಜನರು ಪತ್ರಕ್ಕೆ ಸಹಿ ಹಾಕಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here