ಕೃಷಿಯ ದುಬಾರಿಯ ವೆಚ್ಚದ ನಡುವೆಯೂ ಭರದಿಂದ ಸಾಗಿದ ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ

0
12

ಆಳಂದ: ಪ್ರಸಕ್ತ ಸಾಲಿನ ಅತಿಯಾದ ಮಳೆಯಿಂದಾಗಿ ಬೆಳೆ ಕೈಗೆ ಬಾರದ ಖಾಲಿ ಹೊಲದಲ್ಲಿ ಹಾಗೂ ಹಂಗಾಮಿಗೆ ಕಾಯ್ದಿಟ್ಟ ಜಮೀನಿನಲ್ಲಿ ತಾಲೂಕಿನಾದ್ಯಂತ ಎಲ್ಲಡೆ ಹಿಂಗಾರು ಗಂಗಾಮಿನ ಬಿತ್ತನೆ ಭರದಿಂದ ಸಾಗಿದೆ.

ಹಿಂಗಾರು ಹಂಗಾಮಿನ ಪ್ರಮುಖವಾಗಿ ಖುಷ್ಕಿ ಪ್ರದೇಶದಲ್ಲಿ ಜೋಳ, ಕಡಲೆ, ಕುಸಬೆ ಹೀಗೆ ಇನ್ನಿತರ ಬಿತ್ತನೆ ಕಾರ್ಯ ಕೆಲವರು ಕೈಗೊಂಡಿದ್ದು ಇನ್ನೂ ಕೆಲವು ರೈತರು ಬಿತ್ತನೆಯಲ್ಲಿ ತೊಡಗಿದ್ದು ಸಾಮಾನ್ಯವಾಗಿ ಕಂಡಿದೆ.

Contact Your\'s Advertisement; 9902492681

ಹಿಂಗಾರಿನ ನೀರಾವರಿ ಬೆಳೆ ಶೇಂಗಾ, ಕಡಲೆ, ಕುಸಬೇ ಗೋಧಿಯೂ ಬಿತ್ತನೆಗೆ ಮುಂದಾಗಿದ್ದು, ಈ ಬಾರಿಯಾದರೂ ಹಿಂಗಾರಿನ ಬೆಳೆ ಉತ್ತಮವಾಗಿ ಬೆಳೆದು ಫಸಲು ಕೈಸೇರಲಿ ಎಂಬ ಆಶಾಭಾವನೆಯೊಂದಿಗೆ ಕಸರತು ಆರಂಭಿಸಿರುವ ರೈತರು ಬಿತ್ತನೆಗೆ ಹೆಜ್ಜೆ ಹಾಕಿದ್ದಾರೆ.

ಈಗಾಗಲೇ ಕೃಷಿ ಇಲಾಖೆಯ ಅಂದಾಜಿನಂತೆ ಅತಿಯಾದ ಮಳೆ ಹಾಗೂ ಆರಂಭದಲ್ಲಿ ಮಳೆಯ ಕೊರತೆಯಿಂದ ಸುಮಾರು 43 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ತೊಗರಿ, ಉದ್ದು,ಹೆಸರು ಸೋಯಾಭಿನ್, ಕಬ್ಬು ಸೇರಿದಂತೆ ತೋಟಗಾರಿಕೆಯ ಬಾಳೆ, ಪಪಾಯಿ, ಹಣ್ಣು ತರಕಾರಿ ಬೆಳೆಗಳು ಹಾನಿಗೀಡಾಗಿವೆ. ಹಾನಿಯ ಪರಿಹಾರದ ನಿರೀಕ್ಷೆಯಲ್ಲಿರುವ ರೈತರು, ಹಿಂಗಾರು ಬಿತ್ತನೆಗೆ ಬೀಜ, ಗೊಬ್ಬರ ಕೂಲಿಯಾಳಿಗೆ ಮತ್ತು ತಮ್ಮ ಹಬ್ಬ ಹರಿದಿನಗಳ ಹೀಗೆ ಕುಟುಂಬದ ಆರ್ಥಿಕ ವೆಚ್ಚ ನಿರ್ವಾಹಣೆಗಾಗಿ ಸರ್ಕಾರಿ, ಸಹೂಕಾರಿ ಹಾಗೂ ಖಾಸಗಿ ಬ್ಯಾಂಕ್‍ಗಳ ಸಾಲಕ್ಕಾಗಿ ಮೋರೆ ಹೋಗಿದ್ದಾರೆ.

ಫಲತವತ್ತಾಗಿ ಬೆ¼ಯುವ ನೀರಿಕ್ಷೆಯಲ್ಲಿದ್ದ ತೊಗರಿ ಬೆಳೆ ಅತಿಯಾದ ಮಳೆಗೆ ಸಿಲ್ಲುಕಿ ಇಳುವರಿಯಲ್ಲಿ ಕುಂಠಿತವಾಗುವ ಭೀತಿ ಕಾಡತೊಡಗಿದೆ. ಅಲ್ಲದೆ

ಶೇ 40ರಷ್ಟು ಮಂದಿಯ ಕಳೆದ ಸಾಲಿನಲ್ಲಿ ಉತ್ಪಾದನೆಯಾದ ತೊಗರಿಗೆ ನಿರೀಕ್ಷಿತ ಬೆಲೆ ಇಲ್ಲವೆಂಬ ಕಾರಣಕ್ಕೆ ಮನೆಯಲ್ಲೇ ಇಟ್ಟುಕೊಂಡಿದ್ದು, ಜೊತೆಗೆ ಈ ಬಾರಿ ಬೆಳೆದ ಸೋಯಾಬೀನ್ ಧಾನ್ಯಕ್ಕೂ ಬೆಲೆಯ ಕೈಗೆಟ್ಟುಕದೆ ಬೆಳೆದ ಧಾನ್ಯವೂ ಮನೆಯಲ್ಲೇ ಇಟ್ಟುಕೊಂಡು ನಷ್ಟ ನಡುವೆ. ವಿಧಿಯಿಲ್ಲದೆ, ಹಿಂಗಾರು ಹಂಗಾಮಿನೆ ಕೈಗೊಳ್ಳುತ್ತಿದ್ದಾರೆ.

ಕೃಷಿ ಚಟುವಟಿಕೆಯ ವೆಚ್ಚ ದುಬಾರಿಯಾದ ಹಿನ್ನೆಲೆಯಲ್ಲಿ ಎತ್ತುಗಳ ಮೂಲಕವಿದ್ದ ಕೃಷಿಗೆ ಬಹುತೇಕರು ವಿದಾಯ ಹೇಳಿದ್ದು, ಈಗ ಟ್ರ್ಯಾಕ್ಟರಗಳ ಮೂಲಕ ಬಿತ್ತನೆ ಹಾಗೂ ರಾಶಿಗೆ ಮೋರೆ ಹೋಗಿದ್ದು, ಇದರಿಂದಲೂ ಖರ್ಚಿನ ವೆಚ್ಚದ ದುಬಾರಿಯೇ ಆಗಿದ್ದರಿಂದ ಎಷ್ಟೇ ಬೆಳೆದರು ಸಹ ರೈತರಿಗೆ ಕೊನೆಯಲ್ಲಿ ಬರಿಗೈಯಿಂದಲೇ ದಿನದೊಡುವಂತಾಗಿದೆ ಎಂದು ರೈತರು ಹೇಳಿಕೊಂಡಿದ್ದಾರೆ.

ಶೇ 88ರಷ್ಟ ಬಿತ್ತನೆ ಕ್ಷೇತ್ರ: ತಾಲೂಕಿನ ಐದು ಹೋಬಳಿ ಕೇಂದ್ರ ಒಟ್ಟು ಹಿಂಗಾರು 70913 ಹೆಕ್ಟೇರ್ ಗುರಿಯ ಪೈಕಿ 62156 ಹೆಕ್ಟೇರ್ ಬಿತ್ತನೆಯಾಗಿದ್ದು, ಇದುವರೆಗೂ ಶೇ 88ರಷ್ಟು ಪ್ರಮುಖವಾಗಿ ಜೋಳ, ಮೆಕ್ಕೆಜೋಳ, ಗೋಧಿ, ಕಡಲೆ, ಸೂರ್ಯಕಾಂತಿ, ಕುಸಬೆ, ಶೇಂಗಾ ಬಿತ್ತನೆಯಾಗಿದೆ.

ಖಜೂರಿ ವಲಯದಲ್ಲಿ 14521 ಹೆಕ್ಟೇರ್ ಪೈಕಿ 12823 ಹೆಕ್ಟೇರ್, ಆಳಂದ 13976 ಹೆಕ್ಟೇರ್ ಪೈಕಿ 12216 ಹೆಕ್ಟೇರ್, ನಿಂಬರಗಾ 14218 ಹೆಕ್ಟೇರ್ ಪೈಕಿ 12381 ಹೆಕ್ಟೇರ್, ನರೋಣಾ 14506 ಹೆಕ್ಟೇರ್ ಪೈಕಿ 12733 ಹೆಕ್ಟೇರ್, ಮಾದನಹಿಪ್ಪರಗಾಅ ವಲಯ 13692 ಹೆಕ್ಟೇರ್ ಪೈಕಿ 12003 ಹೆಕ್ಟೇರ್ ಬಿತ್ತನೆ ಆಗಿದೆ. ಇನ್ನೂ ಶೇ 12ರಷ್ಟು ಬಿತ್ತನೆ ನಡೆಯಲಿದೆ.- ಶರಣಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕರು ಆಳಂದ.

ಕೃಷಿ ಕಾನೂನು ಒಳ್ಳೆದಿದೆ: ಸದ್ಯ ಕೃಷಿ ಅಧಾಯವಿಲ್ಲ. ತೊಗರಿ ಗೊಡ್ಡು ಬಿದ್ದಿವೆ ನೀರತ್ತಿಹೋಗಿವೆ. ಮುಂದಿನ ವರ್ಷಕ್ಕೆ ಮತ್ತೆ ಸಾಲಮಾಡಬೇಕು. ಸಾಲದಲ್ಲೇ ಸಾಯಬೇಕು. ಕಾರ್ಮಿಕರ ಕೂಲಿ ಹೆಚ್ಚಾಗಿದೆ. ಉದ್ಯೋಗ ಖಾತ್ರಿ ಕೂಲಿ ಹೆಚ್ಚಿದೆ, ರೈತರಿಗೆ ಈ ಕೂಲಿ ಕೊಡಲು ಆಗಲ್ಲ.

ಬೆಳೆದ ಬೆಳೆಗೆ ಬೆಲೆ ಸಿಕ್ಕರೆ ಹೆಚ್ಚಿನ ಕೂಲಿ ಕೊಡಬಹುದು. ಕೇಂದ್ರದ ಕೃಷಿ ಕಾನೂನು ಒಳ್ಳೆದೆ ಆಗಿದೆ. ಪೂರ್ಣ ಓದಿದ್ದೇನೆ. ಆದರೆ ಕಾಂಗ್ರೆಸ್ಸಿಗರು ವಿನಾಹ ಕಾರಣ ವಿರೋಧಿಸುತ್ತಿದ್ದಾರೆ. ಅಡತಗಳಲ್ಲಿ ಹೇಗೆ ಧಾನ್ಯಗಳು ಬಿಸಾಡುತ್ತಾರೆ. ಕಡಿತ ಮಾಡುತ್ತಾರೆ ತೋರಿಸುತ್ತೇನೆ. ರೈತರ ಹೊಲಗಳಿಗೆ ರಸ್ತೆ ಸಮಸ್ಯೆ ಆಗುತ್ತಿದೆ. ನನ್ನ ಬಾಳೆ ಹಾನಿಯಾಗಿದೆ. ಕಡಿಮೆ ಬೆಲೆ ಮಾರುತ್ತಿದೆ. ಕಬ್ಬು ಪೂರೈಕೆ ಗೊಂದಲವಿದೆ. ಕಟಾವಿಗೆ ಹಣಕೊಡಬೇಕು. -ಬಸವರಾಜ ಸಾಣಕ್ ನಿಂಬಾಳ ಹಿರಿಯ ರೈತ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here