ಆಳಂದ: ನ.21ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಯ ಅಭ್ಯರ್ಥಿ ಬಿ.ಎಚ್. ನಿರಗುಡಿ ಅವರು ತಾಲೂಕಿನ ಹಲವಡೆ ತಮ್ಮ ಬೆಂಬಲಿಗರೊಂದಿಗೆ ಮತದಾರರ ಮನೆ, ಮನೆಗೆ ತೆರಳಿ ಬಿರುಸಿನ ಪ್ರಚಾರ ಕೈಗೊಂಡು ಮತಯಾಚನೆ ನಡೆಸಿದರು.
ಸರಸಂಬಾ, ಕಿಣ್ಣಿಸುಲ್ತಾನ್, ಸಕ್ಕರಗಾ, ಖಜೂರಿ, ಆಳಂದ ಪಟ್ಟಣ ಸೇರಿ ಮತ್ತಿತರ ಕಡೆ ಕಸಾಪ ಮತದಾರರಲ್ಲಿ ತೆರಳಿದ ನಿರಗುಡಿ ಅವರು ಇದೊಂದು ಬಾರಿ ಜಿಲ್ಲಾ ಕಸಾಪ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಅಭ್ಯರ್ಥಿ ಬಿ.ಎಚ್. ನಿರಗುಡಿ ಅವರು, ಜಿಲ್ಲೆಯಾದ್ಯಂತ 3ನೇ ಹಂತದ ಪ್ರವಾಸ ಕೈಗೊಂಡಿದ್ದು, ಮತದಾರರು ಹೆಚ್ಚಿನ ಮತಗಳನ್ನು ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿ ಆಳಂದ ತಾಲೂಕಿನಿಂದ ಹೆಚ್ಚಿನ ಮತಗಳ ಪಡೆದು ಗೆಲವು ಆಸೆಯಿದೆ. ಇದಕ್ಕೆ ತಾಲೂಕಿನ ಮತದಾರರು ಸಹ ಹುಮ್ಮಸ್ಸು ತೋರಿಸಿದ್ದಾದ್ದು ಗೆಲುವು ನಿಶ್ಚಿತವಾಗಿದೆ ಎಂದರು.
ಸರಸಂಬಾ ಗ್ರಾಮದಲ್ಲಿ ಸಹಕಾರಿ ಧುರೀಣ ಹಾಗೂ ಪಸಾನ ಸದಸ್ಯ ಮಹಾಂತಪ್ಪ ಆಲೂರ, ಪ್ರಕಾಶ ಕುಂಬಾರ, ವಿಜಯಕುಮಾರ ಗುಂಜೋಟಿ, ಶಿವಲಿಂಗಪ್ಪ ಕುಂಬಾರ, ಪರಮೇಶ್ವರ ಗೌಂಡಿ, ಸುರೇಶ ಕಾಳೆ, ನಾಮದೇವ ಶಖಾಪೂರೆ ಮತ್ತಿತರ ಮತ ನೀಡಿ ಬೆಂಬಲಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಮುಖ ರಾಜೇಂದ್ರ ಯರನಾಳೆ, ಜಿ.ಎಸ್. ಮಾಲಿಪಾಟೀಲ, ಶರಣಗೌಡ ಪಾಳಾ, ಲಾಡಪ್ಪ ಮೂಲಗೆ, ಸಿದ್ರಾಮ ಬೇತಾಳೆ ಮತ್ತಿತರು ಜೊತೆಯಲ್ಲಿದ್ದರು.