ಮಳೆಗಾಗಿ ಗ್ರಾಮಸ್ಥರಿಂದ ಬುಟ್ಟೆ ಜಾತ್ರೆ

0
102

ಚಿಂಚೋಳಿ: ಮಳೆಗಾಗಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಬುಟ್ಟೆ ಜಾತ್ರೆ ನಡೆಸಿ ವರುಣ ದೇವನ ಮೊರೆ ಹೋಗಿದ್ದಾರೆ.

ಕಲಬುರಗಿ ಜಿಲ್ಲೆಯ ಯಲ್ಲಿ ಮಳೆ ಕೊರತೆಯಾಗಿ ರೈತರು ಸಂಕಷ್ಟದಲ್ಲಿದ್ದು ಅದೆ ರೀತಿ ನೀರಿನ‌ ಮೂಲಗಳು ಬತ್ತಿ ಹೋಗಿವೆ.ಮುಂಗಾರು ಆರಂಭವಾದರು ಮಳೆ ಕೈಕೊಟ್ಟಿದ್ದು ಇದರಿಂದ ಜಿಲ್ಲೆಯ ಜನರು ವರುಣ ದೇವನ ಆಗಮನಕ್ಕಾಗಿ ದೇವರ ಮೋರೆ ಹೋಗಿದ್ದಾರೆ.ಅದರಂತೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಮಳೆಗಾಗಿ ಬುಟ್ಟೆ ಜಾತ್ರೆ ನಡೆಸಿ ವರುಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

Contact Your\'s Advertisement; 9902492681

ಗ್ರಾಮಸ್ಥೆರೆಲ್ಲರು ಅಮರೇಶ್ವರಮಠದಿಂದ ಗುಡ್ಡದಲ್ಲಿರುವ ಬಸವೇಶ್ವರ ಮಂದಿರದವರಗೆ ಭಜನೆ ಮಾಡುತ್ತಾ ತೆರಳಿದರು. ಗ್ರಾಮಸ್ಥರು ಮನೆಯಿಂದ ನೀರು ಹಾಗೂ ವಿವಿಧ ನಮೂನೆಯ ತಿನಿಸುಗಳನ್ನು ಬುಟ್ಟೆಯಲ್ಲಿ ತೆಗೆದುಕೊಂಡು ಬಸವೇಶ್ವರ ಮಂದಿರದ ವರಗೆ ಭಜನೆ ಮಾಡುತ್ತಾ ತೆರಳಿದರು.

ನಂತರ ಬಸವೇಶ್ವರ ಮಂದಿರದಲ್ಲಿ ಜಲಾಭೀಷಕ ಹಾಗೂ ವಿಶೇಷ ಪೂಜೆ ನಡೆಸಿ ಮಳೆರಾಯನಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದಾರೆ.ನಂತರ ಭೋಜನ ಸವಿದರು. ಗ್ರಾಮಸ್ಥರ ಪ್ರಾರ್ಥನೆಗೆ ಮಳೆ ಬಂದಿದ್ದು ಖುಷಿ‌ ಕೊಟ್ಟಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here