ಸೇಡಂ: ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ , ನೃಪತುಂಗ ಪದವಿ ಮಹಾವಿದ್ಯಾಲಯ ಹಾಗೂ ಎಂ.ಕಾಂ. ಸ್ನಾತಕೋತ್ತರ ಕೇಂದ್ರದ ವತಿಯಿಂದ ನವೆಂಬರ 19, ಮಂಗಳವಾರ ದಂದು ಎಚ್.ಡಿ.ಎಫ್.ಸಿ. ಬ್ಯಾಂಕ ಸಹಯೋಗದೊಂದಿಗೆ ನೇಮಕಾತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಎಚ್.ಡಿ.ಎಫ್.ಸಿ. ಬ್ಯಾಂಕನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪದವಿ ಪೂರೈಸಿದ ಅರ್ಹ ಅಭ್ಯರ್ಥಿಗಳಿಗಾಗಿ ಸಂದರ್ಶನವನ್ನು ಕಾಲೇಜಿನ ಕ್ಯಾಂಪಸನಲ್ಲಿ ಏರ್ಪಡಿಸಲಾಗಿತ್ತು. ಸದರಿ ಅಭಿಯಾನದ ಉದ್ಘಟನೆಯಲ್ಲಿ ನೃಪತುಂಗ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥರಾದ ಡಾ: ರೇವಣಸಿದ್ದಯ್ಯಾ ಮಠ, ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಅಭ್ಯರ್ಥಿಗಳಿಗೆ ಸಂದರ್ಶನ ಕುರಿತು ಮಾಹಿತಿ ನೀಡಿದರು.
ಎಚ್.ಡಿ.ಎಫ್.ಸಿ. ಬ್ಯಾಂಕ ಕಲಬುರ್ಗಿ ವಿಭಾಗದ ಹಿರಿಯ ಪ್ರಬಂಧಕರಾದ ಅನೀಲಕುಮಾರ ಪಟವಾಡೆ ಅವರು ಮಾತನಾಡಿ ಭಾರತದಲ್ಲಿ ಬ್ಯಾಂಕಿಂಗ ವ್ಯವಸ್ಥೆ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಸಂಸ್ಥೆಯ ಸಹ ಕಾರ್ಯದರ್ಶಿಗಳಾದ ಡಾ: ಸದಾನಂದ ಬೂದಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಮಾತನಾಡಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ನೃಪತುಂಗ ಮಹಾವಿದ್ಯಾಲದ ಪ್ರಾಚಾರ್ಯ ಪ್ರೊ: ಶಾಮಸುಂದರ್.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಾಣಿಜ್ಯ ವಿಭಾಗದ ರತ್ನಕುಮರ ನಿರ್ವಹಿಸಿ ವಂದಿಸಿದರು. ಸದರಿ ನೇಮಕಾತಿ ಅಭಿಯಾನದಲ್ಲಿ ೪೨ ಅರ್ಹ ಅಭ್ಯರ್ಥಿಗಳು ನೊಂದಾಯಿಸಿಕೊಂಡು ಸಂದರ್ಶನಕ್ಕೆ ಹಾಜರಾದರು. ಎಚ್.ಡಿ.ಎಫ್.ಸಿ. ಬ್ಯಾಂಕನ ಹಿರಿಯ ಅಧಿಕಾರಿಗಳಾದ ಸುನೀಲಕುಮಾರ ರಾಠೋಡ, ಹಾಗೂ ಸುನೀಲ ಬಬಲಾದಿ ಹಾಜರಿದ್ದು ಅಭ್ಯರ್ಥಿಗಳಿಗೆ ಸಂದರ್ಶನವನ್ನು ತೆಗೆದುಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ವಿಜಯಶಂಕರ ಹೊಸಪೇಟ, ಮಯೂರ ಕ್ಷೀರಸಾಗರ, ಜಗದೇವ ಸಾಲಳ್ಳಿ, ನಾಗರಾಜ ನಿರ್ಣಾ ಹಾಗೂ ಇತರ ಸಿಬ್ಬಂದಿ ವರ್ಗ ಹಾಜರಿದ್ದು ಅಭಿಯಾನವನ್ನು ಯಶಸ್ವಿಯಾಗಲು ಸಹಕರಿಸಿದರು.