ಕಲ್ಯಾಣ ಕರ್ನಾಟಕ ಕಲ್ಯಾಣಕ್ಕೆ ಸಂಘಟಿತ ರಾಜಕೀಯ ಇಚ್ಛಾಶಕ್ತಿಗೆ ಸಭೆ

0
19

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿ ಮತ್ತು 371ನೇj ಕಲಂ ತಿದ್ದುಪಡಿಯ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ಆಯಾ ಜಿಲ್ಲಾವಾರು ಪ್ರಮುಖ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಘಟಿತ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿಸುವದು  ಅತಿ ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ  ಹಾಲಿ ಸಂಸದರು ಶಾಸಕರು ಸೇರಿದಂತೆ ಮಾಜಿ ಜನಪ್ರತಿನಿಧಿಗಳನ್ನು ಸಂಘಟಿಸುವದು ಅವಶ್ಯವಾಗಿದೆ. ಮೊದಲನೇ ಹಂತವಾಗಿ ಮಾಜಿ ಸಂಸದರು ಶಾಸಕರುಗಳ ಸಭೆಗಳು  ನಡೆಸಲು ನಿರ್ಧರಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಜನಪರ ಹೋರಾಟ ಸಮಿತಿಯ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.

12 ರಂದು ಶುಕ್ರವಾರ ಬೆಳಿಗ್ಗೆ 11.30 ಗಂಟೆಗೆ ಬೀದರ ಜಿಲ್ಲೆಯ ಮಾಜಿ ಸಂಸದರ,ಶಾಸಕರ ಸಭೆ ನಿಯೋಜಿಸಲಾಗಿದೆ. ಈ ಸಭೆಯಲ್ಲಿ ನಮ್ಮ ಪ್ರದೇಶದ ಕಲ್ಯಾಣದ ಬಗ್ಗೆ ಸಂಘಟಿತ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿವ ಕುರಿತು ಅದರಂತೆ ಪಕ್ಷಾತೀತವಾಗಿ ನಡೆಸುವ ಈ ಕಾರ್ಯದ ಸಮನ್ವಯ ಒಕ್ಕೂಟ ರಚನೆಯ ಬಗ್ಗೆ ನಿರ್ಧಾರ ಸೇರಿದಂತೆ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗುವುದು.

Contact Your\'s Advertisement; 9902492681

ಸದರಿ ಈ ಮಹತ್ವದ ಸಭೆಯಲ್ಲಿ ಮಾಜಿ ಸಂಸದರಾದ ಶಾಸಕರುಗಳಾದ ನರಸಿಂಗರಾವ ಸೂರ್ಯವಂಶಿ, ಪ್ರಕಾಶ ಖಂಡ್ರೆ, ಸುಭಾಷ ಕಲ್ಲೂರ, ಗುಂಡಪ್ಪ ವಕೀಲರು, ಖಾಜಿ ಹರ್ಷದ ಅಲಿ, ಮಲ್ಲಿಕಾರ್ಜುನ ಖುಭಾ, ಪುಂಡಲೀಕರಾವ, ಎಂ. ಜಿ.ಮೂಳೆ,ಅಮರನಾಥ ಪಾಟೀಲ ಭಾಗವಹಿಸುತ್ತಿದ್ದಾರೆ.

ಎಂದು ಸಭೆಯ ಸಂಯೋಜಕರು ಪಕ್ಷಾತೀತ ಹೋರಾಟಗಾರರಾದ ಲಕ್ಷ್ಮಣ ದಸ್ತಿ, ಸಂಘಟಕರಾದ ಶ್ಯಾಮರಾವ ಪ್ಯಾಟಿ, ಶಾಮ ನಾಟಿಕರ,ಜ್ಞಾನಮಿತ್ರ, ಅನಂತ ರೆಡ್ಡಿ, ರೂಹನ ಕುಮಾರ ಜಂಟಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here