ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಶಾಸಕರ ಸಹೋದರ ಹಲ್ಲೆ ಆರೋಪ: ಕ್ರಮಕ್ಕೆ ರಾಜಾ ವೆಂಕಟಪ್ಪ ನಾಯಕ ಒತ್ತಾಯ

0
21

ಸುರಪುರ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಶಾಸಕರ ಸಹೋದರ ಮತ್ತವರ ಜೊತೆಗಾರರು ಹಲ್ಲೆ ನಡೆಸುತ್ತಿದ್ದು,ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರ ಬರೆದು, ನನ್ನ ಮತ ಕ್ಷೇತ್ರದ ವ್ಯಾಪ್ತಿಯ ಕೊಡೇಕಲ್ ಗ್ರಾಮದಲ್ಲಿ ಮತ್ತು ಸುತ್ತಲಿನ ಗ್ರಾಮಗಳ ನಮ್ಮ ಕಾಂಗ್ರೆಸ ಪಕ್ಷದ ಕಾರ್ಯಕರ್ತರ ಮೇಲೆ ಸುರಪುರ ಶಾಸಕರ ಸಹೋದರನಾದ ಹಣಮಂತನಾಯಕ (ಬಬ್ಲುಗೌಡ) ಮತ್ತು ಅವನ ಸಹಚರರು ಪದೇ ಪದೇ ಹಲ್ಲೆಯನ್ನು ಎಸಗುತ್ತಿದ್ದಾರೆ. ಈತನ ಕುಮ್ಮಕ್ಕಿನಿಂದ ಅವ್ಯಾಹತವಾಗಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಹಲವು ಬಾರಿ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದರೂ ಆ ಪುಂಡರುಗಳನ್ನು ನಿಗ್ರಹಿಸುವಲ್ಲಿ ತಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಾವುದೆ ಕ್ರಮ ಜರುಗಿಸದೆ ಇರುವುದನ್ನು ಗಮನಿಸಿದರೆ ಆರೋಪಿತ ಪುಂಡರೊಂದಿಗೆ ನಿಮ್ಮ ಇಲಾಖೆಯವರು ಶಾಮೀಲಾಗಿ ಆರೋಪಿಗಳನ್ನು ರಕ್ಷಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

Contact Your\'s Advertisement; 9902492681

ಸಇದೇ ನವೆಂಬರ್ ೦೮ ರಂದು ರಾಯನಪಾಳ್ಯ ಗ್ರಾಮದ ಪರಶುರಾಮ ಎನ್ನುವ ಕಾಂಗ್ರೆಸ್ ಕಾರ್ಯಕರ್ತ ಯುವಕನ ಮೇಲೆ ಕೊಡೇಕಲ್ ಗ್ರಾಮದಲ್ಲಿ ಹಲ್ಲೆ ಘಟನೆ ನಡೆದಿದೆ ಮತ್ತು ಕಳೆದ ಸೆಪ್ಟೆಂಬರ ತಿಂಗಳಲ್ಲಿ ಸುರಪುರ ಶಾಸಕರು ಮತ್ತು ಅವರ ಸಹೋದರ ಇಬ್ಬರು ಖುದ್ದಾಗಿ ನಿಂತು ಟಗರು ಕಾಳಗವನ್ನು ಆಯೋಜಿಸಿದ್ದಾರೆ ತಾವುಗಳು ಮತ್ತು ಜಿಲ್ಲಾಧಿಕಾರಿಗಳು ಟಗರು ಕಾಳಗವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ ಸಹ ಇದ್ಯಾವುದನ್ನು ಪರಿಗಣಿಸದೆ ತಮ್ಮ ಆದೇಶವನ್ನು ಉಲ್ಲಂಘಿಸಿ ಟಗರು ಕಾಳಗವನ್ನು ನಡೆಸಿರುವುದು ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿರುವುದು ತಮ್ಮ ಗಮನಕ್ಕೆ ಬಂದಿರಬಹುದು.

ಈ ಹಿಂದೆ ೨೦೧೯ ರಲ್ಲಿ ನವೆಂಬರ ೨೨ ರಂದು ರಾತ್ರಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನನ್ನ ಅಭಿಮಾನಿಗಳು ಕಟ್ಟಿದ್ದ ಬ್ಯಾನರ್‌ಗಳನ್ನು ಹರಿದು ಹಾಕಿ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅವರ ದ್ವಿಚಕ್ರವಾಹನಗಳನ್ನು ಸುಟ್ಟುಹಾಕಿ ಕೊಡೇಕಲ್ ಗ್ರಾಮದದ್ಯಾಂತ ಮಾರಕಾಸ್ತ್ರಗಳನ್ನು ಹಿಡಿದು ಭಯದ ವಾತಾವರಣ ನಿರ್ಮಿಸಿದ ಕುರಿತು ತಮ್ಮ ಕಚೇರಿಗೆ ಮತ್ತು ಉನ್ನತ ಅಧಿಕಾರಿಗಳ ಕಚೇರಿಗೆ ಆ ಸಂದರ್ಭದಲ್ಲಿ ಗಮನಕ್ಕೆ ತಂದಿರುತ್ತೇನೆ.

ದಿನಾಂಕ:೧೮.೦೩.೨೦೨೧ ರಂದು ಕೊಡೇಕಲ್‌ನ ನಮ್ಮ ಪಕ್ಷದ ಕಾರ್ಯಕರ್ತರಾದ ಕನಕಪ್ಪ ಜಂಗಳಿ ಮತ್ತು ಇನ್ನೂ ಮೂರು ಜನರ ಮೇಲೆ ವಿನಾಕಾರಣ ಹಲ್ಲೆ ಮಾಡಿರುವ ಘಟನೆ ಸೇರಿದಂತೆ ಈ ಎಲ್ಲಾ ಪ್ರಕರಣಗಳೂ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಸಹ ಶಾಸಕರ ಸಹೋದರ ಮತ್ತು ಅವನ ಹಿಂಬಾಲಕರ ಮೇಲೆ ಇಲ್ಲಿಯವರೆಗೂ ಯಾವುದೆ ಕಾನೂನು ಕ್ರಮ ಜರುಗಿಸದೆ ಇರುವುದು ವಿಷಾದನೀಯ ಸಂಗತಿ. ಕೊಡೇಕಲ್ ಹಾಗೂ ಸುತ್ತಮುತ್ತಲಿನ ಗ್ರಾಮದ ಜನಸಾಮಾನ್ಯರು ಸೇರಿದಂತೆ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಾಲಿ ಶಾಸಕರ ಸಹೋದರ ಪುಂಡಾಟಿಕೆಗಳನ್ನು ಮೆರೆಯಲು ಹಾಗೂ ಹುಣಸಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಬಹಿರಂಗವಾಗಿ ಕೋಳಿ ಪಂದ್ಯ, ಮಟಕಾ, ಇಸ್ಪೀಟು ಹಾಗೂ ಇನ್ನಿತರ ಕಾನೂನು ಬಾಹಿರ ದಂಧೆಗಳು ನಡೆಯುತ್ತಿರುವುದರ ಹಿಂದೆ ಖುದ್ದಾಗಿ ಶಾಸಕರ ಸಹೋದರ ಬೆಂಗಾವಲಾಗಿ ನಿಂತಿರುತ್ತಾರೆ.

ನನ್ನ ಮತಕ್ಷೇತ್ರದಲ್ಲಿ ಇಷ್ಟೆಲ್ಲಾ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ನನ್ನ ಕಾರ್ಯಕರ್ತರ ಮೇಲೆ ವಿನಾಕಾರಣ ಹಲ್ಲೆವೆಸಗುತ್ತಿರುವ ಘಟನೆಗಳು ಪದೇ ಪದೇ ಸಂಭವಿಸುತ್ತಿದ್ದು ಜಿಲ್ಲೆಯಲ್ಲಿ ಅನೇಕ ಪ್ರಕರಣಗಳನ್ನು ಬೇಧಿಸಿ ಭಾಗಿಯಾದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಿದ ನಿಷ್ಠಾವಂತ ಮತ್ತು ದಕ್ಷ ಅಧಿಕಾರಿಗಳಾದ ತಾವುಗಳು ನನ್ನ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಹಲ್ಲೆ ಘಟನೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಿಗ್ರಹಿಸಲು ಕಠಿಣ ಕ್ರಮ ಕೈಗೊಳ್ಳುತ್ತಿರೆಂದು ತಮ್ಮ ಮೇಲೆ ವಿಶ್ವಾಸವಿಟ್ಟು ಈ ಮೂಲಕ ತಮ್ಮ ಗಮನಕ್ಕೆ ತರ ಬಯಸುತ್ತೇನೆ ಎಂದು ಈಶಾನ್ಯ ವಲಯ ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗು ಸುರಪುರ ಪೊಲೀಸ್ ಉಪ ವಿಭಾಗಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here