ಕಲಬುರಗಿ, ನ. ೧೨- ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ‘ಅಮ್ಮ ಪ್ರಶಸ್ತಿ’ಗೆ ಅಥಣಿಯ ಪ್ರಭುಚೆನ್ನಬಸವ ಸ್ವಾಮೀಜಿ, ಕಾದಂಬರಿಕಾರ ಡಾ.ಭೈರಮಂಗಲ ರಾಮೇಗೌಡ, ಲೇಖಕಿ ಕಾವ್ಯಶ್ರೀ ಮಹಾಗಾಂವಕರ್, ಡಾ.ಆನಂದ ಋಗ್ವೇದಿ, ಸುನೀತಾ ಕುಶಾಲನಗರ, ಭಾರತಿ ಬಿ ವಿ, ಡಾ.ಅಶೋಕ ನರೋಡೆ, ಚೇತನ್ ಸೋಮೇಶ್ವರ, ಲಕ್ಷ್ಮಿಶಂಕರ ಜೋಶಿ, ಡಾ.ಕೆ.ಆರ್.ಸಂಧ್ಯಾರೆಡ್ಡಿ, ಡಾ.ಶ್ರುತಿ ಬಿ ಆರ್, ನಂದಿನಿ ಹೆದ್ದುರ್ಗ, ಶ್ರೀದೇವಿ ಕೆರೆಮನೆ, ನಿರ್ಮಲಾ ಶೆಟ್ಟರ್ ಹಾಗೂ ಸಹದೇವ ಯರಗೊಪ್ಪ ಅವರ ಕೃತಿಗಳು ಆಯ್ಕೆಯಾಗಿವೆ ಎಂದು ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಕಾದಂಬರಿ : ಮಾಯಾಕಿನ್ನರಿ(ಡಾ.ಭೈರಮಂಗಲ ರಾಮೇಗೌಡ)- ಒಳ್ಕಲ್ಲ ಒಡಲು (ಕಾವ್ಯಶ್ರೀ ಮಹಾಗಾಂವಕರ್)
ಕಥೆ : ಕರಕೀಯ ಕುಡಿ (ಡಾ.ಆನಂದ ಋಗ್ವೇದಿ)-ಇಂಜಿಲಗೆರೆ ಪೋಸ್ಟ್ (ಸುನೀತಾ ಕುಶಾಲನಗರ)
ಪ್ರವಾಸ : ನಕ್ಷತ್ರಗಳ ಸುಟ್ಟ ನಾಡಿನಲ್ಲಿ (ಭಾರತಿ ಬಿ ವಿ)-ಕೋಟಿ (ಡಾ.ಅಶೋಕ ನರೋಡೆ)
ಸಂಕೀರ್ಣ: ಮಹಾತ್ಮರ ಚರಿತಾಮೃತ (ಪ್ರಭು ಚೆನ್ನಬಸವ ಸ್ವಾಮೀಜಿ ಅಥಣಿ), ಕರೋನಾ ಮುಕ್ತೆಯ ಕಥನ (ಡಾ.ಕೆ.ಆರ್.ಸಂಧ್ಯಾರೆಡ್ಡಿ)
ಸಂಶೋಧನೆ: ಲೋಕರೂಢಿಯ ಮೀರಿ (ಚೇತನ್ ಸೋಮೇಶ್ವರ), ಹಿಂದೂಸ್ತಾನಿ ಸಂಗೀತ ವಾಹಿನಿ (ಲಕ್ಷ್ಮಿಶಂಕರ ಜೋಶಿ)
ಕಾವ್ಯ : ಜೀರೋ ಬ್ಯಾಲೆನ್ಸ್ (ಡಾ.ಶ್ರುತಿ ಬಿ ಆರ್), ರತಿಯ ಕಂಬನಿ (ನಂದಿನಿ ಹೆದ್ದುರ್ಗ), ಮೈ ಮುಚ್ಚಲೊಂದು ತುಂಡುಬಟ್ಟೆ (ಶ್ರೀದೇವಿ ಕೆರೆಮನೆ), ಸರಹದ್ದುಗಳಿಲ್ಲದ ಭೂಮಿಯ ಕನಸು (ನಿರ್ಮಲಾ ಶೆಟ್ಟರ್), ಬಿರಿದ ನೆಲದ ಧ್ಯಾನ (ಸಹದೇವ ಯರಗೊಪ್ಪ).
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾದಂಬರಿ : ಮಾಯಾಕಿನ್ನರಿ (ಡಾ.ಭೈರಮಂಗಲ ರಾಮೇಗೌಡ)- ಒಳ್ಕಲ್ಲ ಒಡಲು(ಕಾವ್ಯಶ್ರೀ ಮಹಾಗಾಂವಕರ್), ಕಥೆ : ಕರಕೀಯ ಕುಡಿ(ಡಾ.ಆನಂದ ಋಗ್ವೇದಿ)-ಇಂಜಿಲಗೆರೆ ಪೋಸ್ಟ್ (ಸುನೀತಾ ಕುಶಾಲನಗರ), ಪ್ರವಾಸ : ನಕ್ಷತ್ರಗಳ ಸುಟ್ಟ ನಾಡಿನಲ್ಲಿ(ಭಾರತಿ ಬಿ ವಿ)-ಕೋಟಿ(ಡಾ.ಅಶೋಕ ನರೋಡೆ), ಸಂಕೀರ್ಣ: ಮಹಾತ್ಮರ ಚರಿತಾಮೃತ (ಪ್ರಭು ಚೆನ್ನಬಸವ ಸ್ವಾಮೀಜಿ ಅಥಣಿ – ಕರೋನಾ ಮುಕ್ತೆಯ ಕಥನ ( ಡಾ.ಕೆ.ಆರ್.ಸಂಧ್ಯಾರೆಡ್ಡಿ), ಸಂಶೋಧನೆ: ಲೋಕರೂಢಿಯ ಮೀರಿ (ಚೇತನ್ ಸೋಮೇಶ್ವರ), ಹಿಂದೂಸ್ತಾನಿ ಸಂಗೀತ ವಾಹಿನಿ (ಲಕ್ಷ್ಮಿಶಂಕರ ಜೋಶಿ), ಕಾವ್ಯ : ಜೀರೋ ಬ್ಯಾಲೆನ್ಸ್ (ಡಾ.ಶ್ರುತಿ ಬಿ ಆರ್), ರತಿಯ ಕಂಬನಿ(ನಂದಿನಿ ಹೆದ್ದುರ್ಗ), ಮೈ ಮುಚ್ಚಲೊಂದು ತುಂಡುಬಟ್ಟೆ (ಶ್ರೀದೇವಿ ಕೆರೆಮನೆ), ಸರಹದ್ದುಗಳಿಲ್ಲದ ಭೂಮಿಯ ಕನಸು ( ನಿರ್ಮಲಾ ಶೆಟ್ಟರ್), ಬಿರಿದ ನೆಲದ ಧ್ಯಾನ (ಸಹದೇವ ಯರಗೊಪ್ಪ) ಕೃತಿಗಳನ್ನು ೨೧ ನೇ ವರ್ಷದ ‘ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಪ್ರತಿ ವಿಭಾಗದಲ್ಲಿ ತಲಾ ೫೦೦೦ ರೂ.ರಂತೆ ನಗದು ಪುರಸ್ಕಾರ ನೀಡಲಾಗುತ್ತಿತ್ತು. ಈ ಬಾರಿ ಕಾದಂಬರಿ, ಕಥೆ, ಪ್ರವಾಸ, ಸಂಕೀರ್ಣ ಮತ್ತು ಸಂಶೋಧನೆ ವಿಭಾಗದಲ್ಲಿ ಪ್ರಶಸ್ತಿ ಮೊತ್ತವನ್ನು ಇಬ್ಬಿಬ್ಬರಿಗೆ ಹಂಚಿಕೆ ಮಾಡಲಾಗುತ್ತಿದೆ. ಜೊತೆಗೆ, ಕಾವ್ಯ ವಿಭಾಗದಲ್ಲಿ ಐವರು ಪ್ರಶಸ್ತಿಗೆ ಭಾಜನರಾಗಿದ್ದು, ಅದರಲ್ಲೂ ಐವರಿಗೆ ಹಂಚಿಕೆ ಮಾಡಲಾಗುವುದು. ಪ್ರತಿ ವರ್ಷ ೨೫ ಸಾವಿರ ರು.ನಗದು ಪುರಸ್ಕಾರ ನೀಡುವುದನ್ನು ಈ ಬಾರಿ ೩೦ ಸಾವಿರಕ್ಕೆ ಏರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ನವೆಂಬರ್ ೨೬ ರಂದು ಸಂಜೆ ೫.೩೦ಕ್ಕೆ ಸೇಡಂ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ‘ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಮ್ಮ ಪ್ರಶಸ್ತಿಗೆ ೨೧ನೇ ವರ್ಷದ ಸಂಭ್ರಮ : ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ‘ಅಮ್ಮ ಪ್ರಶಸ್ತಿ’ಗೆ ಈಗ ೨೧ ನೇ ವರ್ಷದ ಸಂಭ್ರಮ. ಕನ್ನಡದ ಪ್ರತಿಭಾವಂತ ಬರಹಗಾರರು ‘ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ. ಈ ಬಾರಿ ೫೨೪ ಕೃತಿಗಳು ಬಂದಿದ್ದವು.
ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ‘ಅಮ್ಮ ಪ್ರಶಸ್ತಿ’ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.