ಹುಚ್ಚು ಮನದ
ನುಚ್ಚು ನೂರು ನೆನಕೆಗಳ
ಹುಚ್ಚು ಹೃದಯದ
ಹತ್ತಾರು ಹರಿಕೆಗಳ
ಹೃದಯದೊಳಗಣ ಮನದ
ಮನದೊಳಗಣ ಮರೀಚಿಕೆಯಾದ
ಮಮತೆಯ ಮಂದಿರದ
ಪೂಜ್ಯ ದೇವತೆ ಅವಳಾದದ್ದು
ಎನ್ನ ಮನದೊಳಗಣ
ಹೃದಯದ, ಹೃದಯದೊಳಗಣ
ಮನದ ಮನವರಿಕೆಗೆ ನಿಲುಕದೇ
ಇದ್ದದ್ದು ನನಗೀಗ
ಸೋಜಿಗ..!
ಭಯಮಿಶ್ರೀತ ಅಭಯದ
ದುಃಖ ಸಹಿತ ಸಂತಸದ
ಅಪರಿಮಿತ ಪರಮಾಶ್ಚರ್ಯ
ಹೃದಯಂಗಣಕೆ ಲಗ್ಗೆಯಿಟ್ಡು
ನುಗ್ಗಿದ ಬಟ್ಡಲುಗಣ್ಣಿನ ಅವಳ
ಕುಡಿನೋಟ ಮಾಯೇ
ಓರಿಗೆಯ ಎನ್ನ ಕಂಗಳ
ಓರೆನೋಟದ ಮುಖಾಮುಖಿಯೊಂದಿಗೆ
ಶುರುವಾದದ್ದು
ಹೃದಯ–ಹೃದಯಗಳ ಅಪ್ಪುಗೆಗೆ
ಮನ–ಮನದ ಬೆಸುಗೆಗೆ
ನಾಂದಿಯಾದದ್ದು
ನನ್ನನ್ನು ನಾನು ಮತ್ತು ಅವಳನ್ನು ಅವಳು
ಕಳೆದುಕೊಂಡಿದೆಂದು
ಈಚೀಚೆಗೆ ತಿಳಿಯುತ್ತಿದ್ದದ್ದು
ಇನ್ನೂ ಮುಜಗರ..!
ನಾನು ಅವಳಲ್ಲಿ, ಅವಳು ನನ್ನಲ್ಲಿ
ಕೆದುಕಿ ಬೆದುಕ್ಕಿತ್ತಿರುವುದು
ಬೆದುಕುತ್ತಾ ಕೆದಕುತ್ತಿರುವುದು
ಇನ್ನೂ ಸೋಜಿಗ
ಈ ಸೋಜಿಗದ ಸಂಗತಿ
ಕೊನೆಗೆ ಪರಿಣಾಮ
ಅವಳಿಗೆ ನಾ ಬೇಕು, ನನಗೆ ಅವಳು ಬೇಕು
ಎಂಬ ದಿಟ್ಟ ಹೆಜ್ಜೆಯ
ಕಟ್ಟಕಡೆಯ ಸತ್ಯಾಸತ್ತ್ಯೆಯ ಸಾರ
ಸಾಗುತ್ತಿದ್ದಂತೆ
ಬೆಕ್ಕಸ ಬೆರಗಾಗಿಸಿತ್ತು
ಬಚ್ಚಲು ನೀರಿನ ಮನದ
ಮನುಮಕ್ಕಳೇ ತುಂಬಿ ತೇಲಾಡುವ
ಜಾತಿ ಹೊತ್ತು ಸತ್ತಿರುವ ಬುವಿಯ..!
- # ಕೆ.ಶಿವು.ಲಕ್ಕಣ್ಣವರ