ಮಹರ್ಷಿ ಶ್ರೀ ಯಾಜ್ಞವಲ್ಕ್ಯರ ಜಯಂತೋತ್ಸವ

0
21

ಯಾದಗಿರಿ: ನಗರದ ಹೊಸಳ್ಳಿ ಕ್ರಾಸ್ ಹತ್ತಿರವಿರುವ ಶ್ರೀಕೃಷ್ಣ ಮಂದಿರ ಸ್ಥಾಪಕರಾದ ಬಾಬು ರಾವ್ ಕುಲಕರ್ಣಿ ಮೂಕಿಯಾಳ ಮತ್ತು ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿ ವತಿಯಿಂದ ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಯಾಜ್ಞವಲ್ಕ್ಯರು ಚತುರ್ವೇದ ಪಂಡಿತರು, ಭಾರತೀಯ ವೈದಿಕ ಪರಂಪರೆಗೆ ವಿಶೇಷ ಕೊಡುಗೆಯನಿತ್ತ ಶ್ರೇಷ್ಠ ಬ್ರಹ್ಮರ್ಷಿಗಳು, ಸ್ಮೃತಿಕಾರರು, ಇಡೀ ಮಾನವ ಕುಲಕ್ಕೆ ಮಾರ್ಗದರ್ಶಿಯಾದ ಧರ್ಮಸಿಂಧು, ಯಾಜ್ಞವಲ್ಕ್ಯ ಸ್ಮೃತಿ, ಯೋಗಯಾಜ್ಞವಲ್ಕ್ಯ ಗ್ರಂಥಗಳನ್ನು ರಚಿಸಿದವರು.

Contact Your\'s Advertisement; 9902492681

ಆಂಜನೇಯ ಸೂರ್ಯದೇವನ ಮೊದಲ ಶಿಷ್ಯ, ಯಾಜ್ಞವಲ್ಕ್ಯರು ಆತನಸ್ಟೇ ಶ್ರೇಷ್ಠನಾದ ದ್ವಿತೀಯ ಶಿಷ್ಯರಾಗಿದ್ದರು, ಕಠಿಣ ಸಾಧನೆ, ದೀರ್ಘ ತಪಸ್ಸುಗಳಿಂದ ಭಗವಂತನಾದ ಭಾಸ್ಕರನ ಅನುಗ್ರಹದಿಂದ ವೇದವನ್ನು ಗ್ರಹಿಸಿ ಶುಕ್ಲಯಜುರ್ವೇದವನ್ನು ಭೂಮಿಗೆ ತಂದು ಕೊಟ್ಟ ಮಹರ್ಷಿಗಳು, ಭೂಲೋಕದಲ್ಲಿ ಅವರು ಜನ್ಮತಾಳಿದ ದಿನವನ್ನು ವೇದಾಭಿಮಾನಿಗಳು ಶಾಖಾಬಾಂಧವರು ಜಯಂತಿಯನ್ನಾಗಿ ಆಚರಿಸುತ್ತಾರೆ.

ಜಯಂತಿಯ ದಿನವಾದ ಗುರುವಾರ ಬೆಳಿಗ್ಗೆ ಸಮಿತಿಯ ವತಿಯಿಂದ ವಿಷ್ಣುಸಹಸ್ರನಾಮ ವಾಯುಸ್ತುತಿ ಯಾಜ್ಞವಲ್ಕ್ಯ ಅಷ್ಟೋತ್ತರ ಗುರು ರಾಯರ ಅಷ್ಟೋತ್ತರ ಮಾಡಿದರು. ನಂತರ ಶ್ರೀ ಸತ್ಯನಾರಾಯಣ ಪೂಜೆ ಮಹಿಳಾ ಮಂಡಳಿಯಿಂದ ಯಾಜ್ಞವಲ್ಕ್ಯರ ಹಾಡು ಭಜನೆ ತೊಟ್ಟಿಲು ಸೇವೆ ಮಾಡಿದರು.

ಶ್ರೀ ಯಾಜ್ಞವಲ್ಕ್ಯರ ಮೂರ್ತಿಗೆ ಅನಿಲ್ ದೇಶಪಾಂಡೆ ಅವರಿಂದ ಪಂಚಾಮೃತ ಅಭಿಷೇಕ ವಿಶೇಷವಾದ ಪುಷ್ಪಾಲಂಕಾರ, ಮುಖ್ಯಪ್ರಾಣ ದೇವರಿಗೆ ವಾಯುಸ್ತುತಿ ಸಹಿತ ಜಲಾಭಿಷೇಕ ಮಾಡಲಾಯಿತು, ಭಕ್ತವೃಂದಕ್ಕೆ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಜಯಂತೋತ್ಸವ ಯಶಸ್ಸಿಗೆ ಸೇವಾ ಸಮಿತಿಯ ಗೌರವಾಧ್ಯಕ್ಷ ಬಿಂದುರಾವ್ ಕುಳಗೇರಿ ಅಧ್ಯಕ್ಷರಾದ ನರೇಂದ್ರ ಜೋಶಿ ಕಾರ್ಯದರ್ಶಿಗಳಾದ ದಿನೇಶ್ ಜೋಷಿ,ವೆಂಕಟೇಶ್ ದೇಶಪಾಂಡೆ, ಖಜಾಂಚಿ ಸತೀಶ್ ಕುಲಕರ್ಣಿ. ಶ್ರೀಕಾಂತ್ ಕುಲಕರ್ಣಿ ವಿಶೇಷ ಶ್ರಮವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಸನ್ನ ಮೂಕಿಯಾಳ, ಅಖಿಲ ಭಾರತ ಕಣ್ವ ಪರಿಷತ್ತಿನ ಪ್ರತಿನಿಧಿ ವಿನುತ.ಎಸ್.ಜೋಶಿ, ಹರ್ಷ ದೇಶಪಾಂಡೆ ಹಾಗೂ ಸಮಸ್ತ ಶಾಖಾಬಾಂಧವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here