ಶಹಾಪುರ: 108 ಅಂಬುಲೆನ್ಸ್ ನಲ್ಲಿ ಹೆರಿಗೆಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಬಾಣಂತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಸಾದ್ಯಾಪುರ ಕ್ರಾಸ್ ಹತ್ತಿರ ಜರುಗಿದೆ.
ಸುರಪುರ ತಾಲೂಕಿನ ಆಲ್ದಾಳ ಗ್ರಾಮದ ಕವಿತಾ ಎಂಬುವರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ, ಪ್ರಥಮದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಾಗ ಸುರಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಬಾಣಂತಿಯ ಹೆರಿಗೆಯ ನೋವು ಜಾಸ್ತಿ ಕಾಣಿಸಿಕೊಂಡಾಗ ಅವಳಿ ಮಕ್ಕಳಿರುವುದು ಪತ್ತೆ ಹಚ್ಚಿದ ವೈದ್ಯರ ತಂಡವೊಂದು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗುವಂತೆ ಆದೇಶಿಸಿದರು. ಅಂಬುಲೆನ್ಸ್ ನಲ್ಲಿ ಬಾಣಂತಿಯನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಸಾದ್ಯಪುರ ಕ್ರಾಸ್ ಹತ್ತಿರ ಅವಳಿ ಮಕ್ಕಳ ಸುರಕ್ಷಿತವಾಗಿ ಹೆರಿಗೆ ಆಯಿತು.
ಮೇಲಿನ ವೈದ್ಯಾಧಿಕಾರಿಗಳ ಸಲಹೆಯಂತೆ ಸಮೀಪದ ಶಹಾಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅವಳಿ ಮಕ್ಕಳು ಹಾಗೂ ಬಾಣಂತಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದೇವೆ ಎಂದು ಸ್ಟಾಫ್ ನರ್ಸ್ ಸುರೇಶ್ ಹಾಗೂ ವಾಹನದ ಪೈಲೆಟ್ ಲಾಲ್ ಸಾಬ್ ಹೇಳಿದರು.
ಯಾವುದೇ ತೊಂದರೆ ಇಲ್ಲದೆ ಅವಳಿ ಮಕ್ಕಳು ಹಾಗೂ ಬಾಣಂತಿ ಕವಿತಾ ಆರೋಗ್ಯ ಚೆನ್ನಾಗಿದೆ ಎಂದು ವೈದ್ಯರು ಹೇಳಿದ್ದಾರೆ.
Good masege I think
Good