ಅಕ್ಷರದೊಂದಿಗೆ ಸಂಸ್ಕಾರವೂ ಮುಖ್ಯ: ಅನಿತಾ

0
234

ಕಲಬುರಗಿ: ಮನುಷ್ಯನಿಗೆ ಸೋಲು, ಅವಮಾನ, ಬಡತನದ ಹೊಡೆತ ಬಿದ್ದಾಗಲೆ ಬದಲಾವಣೆಯಾಗುತ್ತಾನೆ ಎಂದು ಶಿವಮೊಗ್ಗ ಸೆಂಟ್ರಲ್ ಜೇಲ್ ಸಹಾಯಕ ನಿರೀಕ್ಷಕರಾದ  ಅನಿತಾ ಹಿರೇಮನಿ ಹೇಳಿದರು.

ತಾಜಸುಲ್ತಾನಪುರದ ಚಿನ್ನದಕಂತಿ ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದಲ್ಲಿ ಕಾರ್ತಿಕ ಮಾಸದ ನಿಮಿತ್ಯ  ದೀಪೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಜನ್ಮ ಕೊಟ್ಟ ತಂದೆ- ತಾಯಿಯ ಋಣ ಹಾಗೂ ಹುಟ್ಟಿದ ಊರಿನ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ.ಇಂದಿನ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದೊಂದಿಗೆ ಸಂಸ್ಕಾರದ  ಸಮಾಜ ನಿರ್ಮಿಸುವ ಕಾರ್ಯ ಮಾಡಲೆಂದು ಯುವಜನತೆಗೆ ಕರೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಮಠದ ಪರಮ ಪೂಜ್ಯರಾದ ಡಾ. ರೇವಣಸಿದ್ದ ಶಿವಾಚಾರ್ಯರು ಆಶೀರ್ವಚನ ನೀಡುತ್ತ ನೀರಿನಿಂದ ಸ್ನಾನ ಮಾಡಿದ ವ್ಯಕ್ತಿ  ಬಟ್ಟೆಗಳನ್ನು ಬದಲಾಯಿಸುತ್ತಾನೆ, ಆದರೆ ಬೆವರಿನಿಂದ ಸ್ನಾನ ಮಾಡಿದ ವ್ಯಕ್ತಿ ಇತಿಹಾಸವನ್ನೆ ಸೃಷ್ಟಿ ಮಾಡುತ್ತಾನೆ. ಬರುವ ದಿನಗಳಲ್ಲಿ ಸರ್ವರ ಬಾಳಿನಲ್ಲಿ ಒಳ್ಳೆಯ ದಿನ ಬರುವುದರೊಂದಿಗೆ ನಂದದ  ಆನಂದದ ಜ್ಯೋತಿಯಾಗಿ ಸೇವೆ ಗೈಯ್ಯಲೆಂದು  ಹಾರೈಸಿದರು. ಮಠಕ್ಕೆ ಲಕ್ಷ ಲಕ್ಷ ಕೊಡೋದು ಬೇಡ, ಮಠದ ಕಡೆ ಲಕ್ಷ್ಯವಿದ್ದರೆ ಸಾಕು ಮಠ ತಾನಾಗಿಯೆ ಬೆಳೆಯುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ದೊಡ್ಡಪ್ಪ ಅಪ್ಪಾ ಇಂಜಿನಿಯರಿಂಗ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಬಾಬುರಾವ ಶೇರಿಕಾರ, ಯುವ ಮುಖಂಡರಾದ ಕಾಳಿದಾಸ ಪೂಜಾರಿ,ಶಿಕ್ಷಣ ಪ್ರೇಮಿಗಳಾದ ಕಲ್ಯಾಣ ರಾವ ಶೀಲವಂತ, ವಿದ್ಯಾಸಾಗರ ದೇಶಮುಖ,ಉದ್ದಿಮೆದಾರರಾದ ಜಗದೀಶ ಮರಪಳ್ಳಿ, 4 ಚಕ್ರದ ಮುಖ್ಯಸ್ಥರಾದ ಮಾಲಾ ಕಣ್ಣಿ, ಮಾಲಾ ಡೊಣ್ಣುರ,ಶಿಕ್ಷಕರಾದ ಪ್ರಭುಲಿಂಗ ಮೂಲಗೆ ಆಗಮಿಸಿದರು.

ಕಾರ್ಯಕ್ರಮದಲ್ಲಿ ಶಿವಲಿಂಗಪ್ಪ ಮಾಳಾ,ಶಿವಶರಣಪ್ಪ ಹಿರೇಮನಿ, ವೀರಯ್ಯ ಬಾಳಿ, ನಾಗೇಂದ್ರ ದೇಗಲಮಡ್ಡಿ,  ಅನ್ನಪೂರ್ಣ ಸಂಗೊಳಗಿ, ರೇವಣಸಿದ್ದಯ್ಯ ಬೇಲೂರ,ಮಲ್ಲಿಕಾರ್ಜುನ ಮುದ್ದಾಳ, ಬಸವರಾಜ ಶೀಲವಂತ,ಇತರರು ಭಾಗವಹಿಸಿದ್ದರು.

ಸಾಹಿತಿ ನಾಗೇಂದ್ರ ಮಾಡ್ಯಾಳೆ ಪ್ರಾರ್ಥಿಸಿದರು, ರವಿಕೂಮಾರ ಶಹಾಪುರಕರ ನಿರೂಪಿಸಿದರು, ನ್ಯಾಯವಾದಿ ಹಣಮಂತರಾಯ ಅಟ್ಟೂರ ಸ್ವಾಗತಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here