ಕಲಬುರಗಿ: ರಾಜ್ಯ ವಕ್ಫ ಬೋರ್ಡ್ ಅಧ್ಯಕ್ಷರಾಗಿ ಮೊಹಮ್ಮದ್ ಶಫೀ ಸಅದಿ ಆಯ್ಕೆಯಾಗಿದ್ದು, ಸಅದಿ ಆಯ್ಕೆ ಬಿಜೆಪಿ ಹಿರಿಯ ಮುಖಂಡ ಕೆ.ಎಮ್ ಬಾರಿ ಹಾಗೂ ಕೆ.ಎಮ್.ಡಿ.ಸಿ ನಾಮನಿರ್ದೇಶಿತ ನಿರ್ದೇಶಕರಾದ ಸದ್ದಾಮ್ ಹುಸೇನ್ ವಜಿರಗಾಂವು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಸಮುದಾಯದ ಏಳಿಗೆ ಹಾಗೂ ವಕ್ಫ ಇಲಾಖೆಯ ಸುಧಾರಣೆಯಲ್ಲಿ ಅತ್ಯುತ್ತಮ ಕೆಲಸ ಮಾಡಿ ಸಮಾಜದ ಅಭಿವೃದ್ಧಿಗೆ ನಾಂದಿ ಹಾಡಿ ಜನರಲ್ಲಿ ಹೊಸ ವಿಶ್ವಾಸ ಗಳಿಸಬೇಕೆಂದು ಹರ್ಷ ವ್ಯಕ್ತಪಡಿಸಿ ಅಭಿಪ್ರಾಯಪಟ್ಟರು.