ಜೇವರ್ಗಿ: ”ನಮ್ಮ ನಡೆ ಶಿಕ್ಷಕರ ಕಡೆ ,ಶಿಕ್ಷಕರ ನಡೆ ಗುಣಾತ್ಮಕ ಶಿಕ್ಷಣದ ಕಡೆ” ಎನ್ನುವ ಘೋಷ ವಾಣಿಯಂತೆ, ಪಾಠ ಬೋಧನೆ ಬಿಟ್ಟು ಅನೇಕ ಬಾರಿ ಶಿಕ್ಷಕರು ಕಾರ್ಯಾಲಯಕ್ಕೆ ಅಲೆದಾಡುವ ಅನಿವಾರ್ಯತೆ ಹಾಗೂ ಸಮಯದ ಅಪವ್ಯಯವನ್ನು ತಪ್ಪಿಸುವಲ್ಲಿ ಕರ್ನಾಟಕ ರಾಜ್ಯದಲ್ಲಿ ತಾಲ್ಲೂಕಿನ ಶಿಕ್ಷಣಾಧಿಕಾರಿಗಳಾದ ವೆಂಕಯ್ಯ ಇನಾಮದಾರ ಕಾರ್ಯವು ಶಿಕ್ಷಕರ ಕ್ಷೇತ್ರದಲ್ಲಿ ಪ್ರಶಂಸೆಗೆ ಕಾರಣವಾಗಿದ್ದು,
ಇದು ಶಿಕ್ಷಕರಿಗೆ ಅತಿ ಉಪಯುಕ್ತ ಕಾರ್ಯಕ್ರಮ ಎಂದು ಕರ್ನಾಟಕ ರಾಜ್ಯ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರ ಶಶೀಲ್ ಜಿ ನಮೋಶಿ ತಿಳಿಸಿದ್ದಾರೆ.
ಈ ಕುರಿತಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ರಾಜ್ಯ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರಿಗೆ ಪತ್ರದ ಮುಖಾಂತರ ಜೇವರ್ಗಿ ತಾಲೂಕಿನ ಶಿಕ್ಷಣಾಧಿಕಾರಿಗಳ ಕಾರ್ಯವೈಖರಿ ರಾಜ್ಯಕ್ಕೆ ಮಾದರಿಯಾಗಿದೆ ಎಂದಿದ್ದಾರೆ.
ಅಲ್ಲದೆ ಇದನ್ನು ರಾಜ್ಯದ ಇತರ ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳಲ್ಲಿ ವ್ಯಾಪಕವಾಗಿ ಪ್ರಚಾರ ಹಾಗೂ ಬಳಕೆ ಸಲಹೆಯನ್ನೂ ನೀಡಿದ್ದಾರೆ, ಇದರ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಪತ್ರದ ಮೂಲಕ ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದಾರೆ.