ಕಲಬುರಗಿಯಲ್ಲಿ ಹೆಚ್ಚುತ್ತಿರುವ ದರೋಡೆ, ಸುಲಿಗೆ ಪ್ರಕರಣಗಳು

0
184

ಕಲಬುರಗಿ: ನಗರದಲ್ಲಿ ಸುಲಿಗೆ ಹಾಗೂ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನುವುದಕ್ಕೆ ನನಗೆ ಇಂದು ಕಲಬುರಗಿ ಯಲ್ಲಿ ಆದ ಅನುಭವವನ್ನು ನಿಮ್ಮ ಮುಂದಿಡುತ್ತಿದ್ದೇನೆ ಎಂದು ಯಾದಗಿರಿ ಜಿಲ್ಲೆಯ ಶಹಾಪುರದ ಯುವ ಪತ್ರಕರ್ತ ಬಸವರಾಜ ಸಿನ್ನೂರ ತಿಳಿಸಿದ್ದಾರೆ.

ಅವರಿಗಾದ ಕಹಿ ಅನುಭವವನ್ನು ಅವರ ಮಾತುಗಳಲ್ಲೇ ಕೇಳಿ……..” ಇಂದು ಬೆಳಗ್ಗೆ 6 ಗಂಟೆಗೆ ಶಹಾಪುರದಿಂದ ಕಲ್ಬುರ್ಗಿಗೆ ಪಾಸ್ಪೋರ್ಟ್ ವೀಸಾ ಸಲುವಾಗಿ ಪ್ರಯಾಣ ಬೆಳೆಸಿದೆ. ಕಲಬುರಗಿ ಬಸ್ ನಿಲ್ದಾಣದಿಂದ ಖರ್ಗೆ ಪೆಟ್ರೋಲ್ ಬಂಕ್ ಹತ್ತಿರ ವಿರುವ ಪ್ರಾದೇಶಿಕ ಪಾಸ್ ಪೋರ್ಟ್ ಆಫೀಸಿಗೆ ಆಟೋ ಒಂದರಲ್ಲಿ ಬರುವ ಸಂದರ್ಭದಲ್ಲಿ ಅಂದರೆ ಬಸವೇಶ್ವರ ಆಸ್ಪತ್ರೆಯ ಹತ್ತಿರ ಆಟೋದಲ್ಲಿ ಒಬ್ಬ ವ್ಯಕ್ತಿ ನನ್ನ ಪಕ್ಕದಲ್ಲಿ ಕುಳಿತುಕೊಂಡ ತಕ್ಷಣವೇ ನನಗೆ ಬ್ಲೇಡ್ ತೋರಿಸಿ ದುಡ್ಡು ಕೇಳಿದ,ನಿನಗೇಕೆ ಕೊಡಬೇಕು ದುಡ್ಡು ಎಂದು ವಿರೋಧ ವ್ಯಕ್ತಪಡಿಸಿದಾಗ ಕೊಡದಿದ್ದರೆ ಬ್ಲೇಡ್ ಹಾಕುತ್ತೇನೆ ಇಲ್ಲದಿದ್ದರೆ ನಿನ್ನಿಷ್ಟ ಅಂತ ಜೀವ ಬೆದರಿಕೆ ಹಾಕಿದ.ತಕ್ಷಣವೇ ನನ್ನ ಜೇಬಿನಲ್ಲಿರುವ ಒಂಬೈ.ನೂರು ರೂಪಾಯಿಗಳನ್ನು ಕೊಟ್ಟೆ.ಆಗ ಕಳ್ಳ ಕೂಡಲೇ ಅಲ್ಲಿಂದ ಕಾಲ್ಕಿತ್ತ ಇಂಥ ಘಟನೆ ಬೇರಾರಿಗೂ ಆಗಬಾರದು ಎಂಬ ನನ್ನ ಸದುದ್ದೇಶ.ಏಕೆಂದರೆ ಬಡವರು’ನಿರ್ಗತಿಕರು,ಮಹಿಳೆಯರು ಅಲ್ಲದೆ ಹಳ್ಳಿಗಳಿಂದ ಕಷ್ಟಪಟ್ಟು ದುಡಿದು ಆಸ್ಪತ್ರೆಯಲ್ಲಿರುವ ರೋಗಿಗಳ ಆರೈಕೆಗೆ ಹಾಗೂ ಖರ್ಚು ವೆಚ್ಚಗಳಿಗೆ ಅಲ್ಪಸ್ವಲ್ಪ ಹಣ ಇಟ್ಟುಕೊಂಡು ಈ ರಸ್ತೆಯಲ್ಲಿ ಆಟೋದಲ್ಲಿ ಸಂಚರಿಸುತ್ತಿರುತ್ತಾರೆ.

Contact Your\'s Advertisement; 9902492681

ಈತ ಲೂಟಿಕೋರರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.ಇಂಥ ಘಟನೆಗಳು ಸುಮಾರು ಹತ್ತದಿನೈದು ವರ್ಷಗಳಿಂದಲೂ ನಡೆಯುತ್ತಲೇ ಬಂದಿವೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ ಆದರೆ ಪೊಲೀಸ್ ಇಲಾಖೆಯವರು ಏನು ಮಾಡುತ್ತಿದ್ದಾರೆಂಬುದು ಯೋಚಿಸಬೇಕಾಗಿದೆ.

ಆದ್ದರಿಂದ ಪೊಲೀಸ್ ಇಲಾಖೆಯವರು ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂಬ ನನ್ನ ಮನವಿ. ನಾನೊಬ್ಬ ಪತ್ರಕರ್ತನಾಗಿ ಈ ರೀತಿ ಅನ್ಯಾಯವಾಗಿದೆ ಎಂದರೆ ಸಾಮಾನ್ಯ ಜನರ ಪಾಡೇನು? ಕಲಬುರಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಇದನ್ನು ಕಾಳಜಿ ವಹಿಸಿ ಅಲ್ಲದೆ ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೊಂದು ಇತಿಶ್ರೀ ಹಾಡಬೇಕು ಮತ್ತು ಸಾರ್ವಜನಿಕರ ಹಿತರಕ್ಷಣೆ ಮಾಡಬೇಕು ಎಂಬುದು ಕಳಕಳಿಯ ಮನವಿ”

ಸಂಬಂಧಿಸಿದ ಇಲಾಖೆಯವರು ಈ ಬಗ್ಗೆ ನಿಗಾ ವಹಿಸಬೇಕು ಎಂಬುದು e-medialine ಕಳಕಳಿಯಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here