ವೀರಶೈವ ಸಮಾಜದ ತಾಲೂಕ ಘಟಕ ಪದಾಧಿಕಾರಿಗಳ ನೇಮಕ

0
75

ಚಿಂಚೋಳಿ: ತಾಲೂಕಿನ ಹುಡದಳ್ಳಿ ಗ್ರಾಮದಲ್ಲಿ ವೀರಶೈವ ಸಮಾಜದ ತಾಲೂಕ ಘಟಕ ವತಿಯಿಂದ ಹುಡದಳ್ಳಿ ಗ್ರಾಮದ ವೀರಶೈವ ಸಮಾಜದ ಗ್ರಾಮ ಘಟಕದ ಅಧ್ಯಕ್ಷ ಉಪಾಧ್ಯಕ್ಷರ ಪದಾಧಿಕಾರಿಗಳ ನೇಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ದೇಶಿಸಿ ವೀರಶೈವ ಸಮಾಜದ ತಾಲೂಕ ಯುವ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ ಮಾತನಾಡಿ ಚಿಂಚೋಳಿ ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮದಲ್ಲಿ ವೀರಶೈವ ಸಮಾಜದ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ ತಾಲೂಕಿನಲ್ಲಿ ಮೊಟ್ಟಮೊದಲಿಗೆ ಹುಡದಳ್ಳಿ ಗ್ರಾಮದಲ್ಲಿ ವೀರಶೈವ ಸಮಾಜದ ಪದಾಧಿಕಾರಿಗಳಿಗೆ ಮಾಡಲಾಗಿದೆ.

Contact Your\'s Advertisement; 9902492681

ಹುಡದಳ್ಳಿ ಗ್ರಾಮದ ವೀರಶೈವ ಸಮಾಜದ ಮುಖಂಡರಾದ ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಅವರು ಕರ್ನಾಟಕ ಸರ್ಕಾರದ ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದ ಅದರಿಂದ ಅವರ ಗ್ರಾಮದಿಂದಲೇ ವೀರಶೈವ ಸಮಾಜದ ಪದಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಇಡೀ ಚಿಂಚೋಳಿ ತಾಲೂಕ ಪ್ರತಿಯೊಂದು ಗ್ರಾಮದಲ್ಲಿ ವೀರಶೈವ ಸಮಾಜದ ಪದಾಧಿಕಾರಿಗಳ ನೇಮಕ ಮಾಡುವ ಮುಖಾಂತರ ವೀರಶೈವ ಸಮಾಜದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಮತ್ತು ತಾಲೂಕಿನಲ್ಲಿ ವೀರಶೈವ ಸಮಾಜದ ಜನರಿಗೆ ಮೂಲಭೂತ ಸೌಕರ್ಯಗಳ ಬಹಳಷ್ಟು ಕೊರತೆ ಇದ್ದು, ಮುಂಬರುವ ದಿನಗಳಲ್ಲಿ ವೀರಶೈವ ಸಮಾಜದ ಬಾಂಧವರು ಒಗ್ಗೂಡಿ ನಮ್ಮ ವೀರಶೈವ ಸಮಾಜಕ್ಕೆ ಮೂಲಭೂತ ಸೌಕರ್ಯಗಳನ್ನು ಸರ್ಕಾರದಿಂದ ಏನು ಸಿಗಬೇಕು ಅದು ಅವುಗಳನ್ನು ನಮ್ಮ ಚಿಂಚೋಳಿ ತಾಲೂಕಿಗೆ ಪ್ರತಿಯೊಂದು ಗ್ರಾಮಗಳಲ್ಲಿ ಕೂಡ ಅಭಿವೃದ್ಧಿಪಡಿಸುವ ಚಿಂಚೋಳಿ ತಾಲೂಕ ವೀರಶೈವ ಸಮಾಜವು ಗುರಿ ಹೊಂದಿದ್ದೇವೆ ಎಂದೂ ಅವರು ಹೇಳಿದರು.

ನೂತನವಾಗಿ ವೀರಶೈವ ಸಮಾಜದ ಹುಡದಳ್ಳಿ ಗ್ರಾಮ ಘಟಕದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ, ವೀರಶೈವ ಸಮಾಜದ ಹುಡದಳ್ಳಿ ಗ್ರಾಮ ಘಟಕದ ಉಪಾಧ್ಯಕ್ಷರಾಗಿ ಕೈಲಾಸ ಬಿರಾದರ, ಕಾರ್ಯದರ್ಶಿಗಳಾಗಿ ನಾಗಯ್ಯ ಸ್ವಾಮಿ, ಖಜಾಂಚಿಗಳಾಗಿ ಬಾಬುರಾವ ಬಿರಾದಾರ, ಸಹಕಾರ್ಯದರ್ಶಿಗಳಾಗಿ ಬಸವರಾಜ ದಂಡಿನ್, ನಾಗೇಂದ್ರ ಕೊಂಡ, ಬಸಯ್ಯಸ್ವಾಮಿ, ಹುಡದಳ್ಳಿ ಗ್ರಾಮ ಘಟಕದ ಸದಸ್ಯರಾದ ವಿಜಯಕುಮಾರ ಬಿರಾದರ್, ಶಿವರಾಜ ಪೊಲೀಸ್ ಪಾಟೀಲ, ಗುಂಡಪ್ಪ ಜಾಡರ್, ಮಾಂತಯ್ಯ ಸ್ವಾಮಿ, ಶ್ರೀಮಂತ ಹಾರಕುಡ, ಸಿಂಡಪ್ಪ ಮರಪಳಿ, ಜಗಪ್ಪ ಜಾಡರ್, ಉದಯಕುಮಾರ್ ಬಿರಾದರ, ವೀರೇಶ ಮಾಲಿ ಪಾಟೀಲ್, ನಾಗಪ್ಪ ಪೊಲೀಸ್ ಪಾಟೀಲ,ಅವರನ್ನು ನೇಮಕ ಮಾಡಲಾಯಿತು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಚಿಂಚೋಳಿಯ ವೀರಶೈವ ಸಮಾಜದ ಮುಖಂಡರಾದ ಉಮಾ ಪಾಟೀಲ್,ಶರಣು ಪಾಟೀಲ ಮೋತಕಪಲ್ಲಿ, ಪವನ ಪಾಟೀಲ ಹುಡದಳ್ಳಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here