ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ

0
10

ಕಲಬುರಗಿ: ಜಿಲ್ಲಾ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ದಿನಾಂಕ ೩೦ನೇ ನವೆಂಬರ್ ೨೦೨೧ ರಂದು ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಹಂತದ ಪರಿಸರ ಹಾಗೂ ಮಾಲಿನ್ಯದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಇದರಲ್ಲಿ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅಮೂಲ್ಯ ತಂದೆ ರಾಜಕುಮಾರ, ಮಮತಾ ತಂದೆ ಮಲ್ಲಿನಾಥ ಇವರು ಪ್ರಥಮ ಬಹುಮಾನ ಪಡೆದಿದ್ದಾರೆ ಹಾಗೂ ಶಬ್ದ ಮಾಲಿನ್ಯದಲ್ಲಿ ಅಕ್ಷತಾ ತಂದೆ ಬಸವರಾಜ, ಅಮೂಲ್ಯ ತಂದೆ ಚಂದ್ರಶೇಖರ ಜಿಲ್ಲೆಗೆ ವಿಶೇಷ ಪುರಸ್ಕಾರ ಪಡೆದ್ದಿದಾರೆ.

Contact Your\'s Advertisement; 9902492681

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ, ವೈಜ್ಞಾನಿಕ ವೃತ್ತಿ, ವೈಜ್ಞಾನಿಕ ದೃಷ್ಟಿಕೋನ, ವೈಜ್ಞಾನಿಕ ತತ್ವಗಳನ್ನು ಬೆಳೆಸುವಲ್ಲಿ ಹಾಗೂ ಮಕ್ಕಳಿಗೆ ಪ್ರೋತ್ಸಾಹಿಸಲು ಮಕ್ಕಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಸವರಾಜ ಭೀಮಳ್ಳಿ, ಉಪಾಧ್ಯಕ್ಷರಾದ ಎಂ.ವೈ.ಪಾಟೀಲ್, ಕಾರ್ಯದರ್ಶಿಗಳಾದ ಶಿವಪುತ್ರಪ್ಪ ಡೆಂಕಿ, ಪ್ರಾಚಾರ್ಯರಾದ ನಾಗೇಂದ್ರ ಬಡೀಗೆರ ಇವರುಗಳು ಮಕ್ಕಳಿಗೆ ಅಭಿನಂದಿಸಿದ್ದಾರೆ ಹಾಗೂ ವಿಜ್ಞಾನ ಶಿಕ್ಷಕಿಯರಾದ ಹರಷುಂ ಸದಾಫ್ ಹಾಗೂ ಸುಕನ್ಯಾ ಹಾಗೂ ಶಿಕ್ಷಕ ವರ್ಗ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here