ಬಿಜಿ ಪಾಟೀಲರು ಸಿರಿವಂತರು, ಪಂಚಾಯ್ತಿ ವ್ಯವಸ್ಥೆ ಬಗ್ಗೆ ಏನೇನೂ ಗೊತ್ತಿಲ್ಲದವರು: ಡಾ. ಅಜಯ್ ಸಿಂಗ್

0
67

ಕಲಬುರಗಿ: ಕಲಬುರಗಿ- ಯಾದಗಿರಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಣದಲ್ಲಿರುವ ಕಾಂಗ್ರೆಸ್ ಪಕ್ಷದ ಹುರಿಯಾಳು ಸಿವಾನಂದ ಪಾಟೀಲ್ ಮರತೂರ್ ಅವರ ಪರವಾಗಿ ವಿದಾನಸಭೆ ವಿರೋಧ ಪಕ್ಷದ ಮುಕ್ಯ ಸಚೇತಕ ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಬುಧವಾರ ಇಡೀದಿನ ಜೇವರ್ಗಿ ಮತಕ್ಷೇತ್ರದಲ್ಲಿ ಬರುವ ಯಡ್ರಾಮಿ ವ್ಯಾಪ್ತಿಯ ಹಲವಾರು ಗ್ರಾಮ ಪಂಚಾಯ್ತಿತಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಯಡ್ರಾಮಿ ತಾಲೂಕಿನ ಸುಂಬಡ, ವಡಗೇರಾ, ಕಾಚಾಪುರ, ಮಳ್ಳಿ, ಅ¯್ಲÁಪುರ, ಮಾಗಣಗೇರಾ, ಕುಳಗೇರಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸದಸ್ಯರನ್ನು ಉz್ದÉೀಶಿಸಿ ಮಾತನಾಡಿದ ಡಾ. ಅಜಯ್ ಸಿಂಗ್ ಅವರು ಬಿಜೆಪಿಯ ಬಿಜಿ ಪಾಟೀಲರು ಸಿರಿವಂತರು, ಆದರೆ ಹಣವೇ ಎಲ್ಲವು ಅಲ್ಲವಲ್ಲ, ಪಂಚಾಯ್ತಿಯ ಹಂತದಲ್ಲಿನ ಅದಿಕಾರ ವಿಕೇಂದ್ರೀಕರಣದ ಬಗ್ಗೆ ಸ್ಪಂದಿಸುವ ಮನೋಭಾವ ಅವರಲ್ಲಿಲ್ಲ. ಅಂತಹ ಮನೋಭಾವನೆ ಇರುವವರು ಕಾಂಗ್ರೆಸ್ ಹುರಿಯಾಳು ಶಿವಾನಂದ ಪಾಟೀಲರು. ನಿಮ್ಮೆಲ್ಲ ಸಮಸ್ಯೆಗೆ ಪರಿಹಾರ ನೀಡುವ ಗುಣ ಶಿವಾನಂದರ ಬಳಿ ಇರೋದರಿಂದ ಈ ಬಾರಿ ಕೈ ಬಲಪಡಿಸುವಂತೆ ಕರೆ ನೀಡಿದರು.

Contact Your\'s Advertisement; 9902492681

ಶಿವಾನಂದ ಪಾಟೀಲ ಮರತೂರ ಪಂಚಾಯ್ತಿ ಎಲ್ಲಾ ಹಂತಗಳಿಂದ ಬಂದವರು, ಬಿಜಿ ಪಾಟೀಲರು ಹಣ ಬಲದಿಂದ ಪರಿಷತ್‍ಗೆ ಹೋದವರು. ಈ ಬಾರಿ ಶಿವಾನಂದರಿಗೆ ಗೆಲ್ಲಿಸಿ ಸಾಮಾನ್ಯ ವ್ಯಕ್ತಿಯೂ ಪರಿಷತ್‍ಗೆ ಹೋಗಬಹುದು ಎಂಬುದನ್ನು ನಾವು ನೀವೆಲ್ಲರೂ ಸಾಬೀತು ಪಡಿಸೋಣ ಎಂದು ಡಾ. ಅಜಯ್ ಸಿಂಗ್ ಪಂಚಾಯ್ತಿ ಸದಸ್ಯರಿಗೆ ಕರೆ ನೀಡುತ್ತ ಹುರಿದುಂಬಿಸಿದರು.

ಜೇವರ್ಗಿ ಕಾಂಗ್ರೆಸ್ ಹಿರಿಯ ಮುಖಂಡರಾದ ರುಕ್ಕುಂ ಪಟೇಲ್ ಇಜೇರಿ, ರಾಜಶೇಖರ್ ಸಿರಿ, ಶಾಂತಗೌಡ ವಡಗೇರಾ ಗೊಲಾಳಪ್ಪಗೋಡ ಮಾಗಣಗೇರ, ಗುರಲಿಂಗಪ್ಪ ಗೌಡ ಮಾಗಣಗೇರ, ಚಂದ್ರಶೇಖರ್ ಪುರಾಣಿಕ್, ಮಲ್ಲನಗೌಡ ಕುಳಗೇರಾ, ಚಂದ್ರಕಾಂತಗೌಡ ಮಾಗಣಗೇರಾ, ವಿಜಯಕುಮಾರ್ ಪಾಟೀಲ್ ಕಲ್ಲಹಂಗರಗಾ, ಸೇರಿದಂತೆ ಸ್ಥಳೀಯ ಮುಖಂಡರು  ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here