ಆಳಂದ: ಮಾಡಿಯಾಳ ಗ್ರಾಮದಲ್ಲಿ ವಿಧಾನಪರಿಷತ್ ಚುನಾವಣೆಯ ನಿಮಿತ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಿವಾನಂದ ಪಾಟೀಲ್ ಪರ ಮಾಜಿ ಶಾಸಕ ಬಿ.ಆರ್. ಪಾಟೀಲ್ ಮತಯಾಚಿಸಿ ಮಾತನಾಡಿದರು. ಕೆಎಂಎಪ್. ನಿದೇರ್ಶಕ ಈರಣ್ಣಾ ಝಳಕಿ, ಸಿದ್ದರಾಮ ಪ್ಯಾಟಿ ಇತರರಿದ್ದರು.
ಆಳಂದ: ಸರ್ಕಾರದ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ಪುರಸಭೆ, ಪಟ್ಟಣ ಮತ್ತು ಗ್ರಾಮ ಪಂಚಾಯತಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಸದನದಲ್ಲಿ ಮಾತನಾಡುವ ವ್ಯಕ್ತಿಗೆ ಮತ ನೀಡಿ ಚುನಾಯಿಸಬೇಕೆಂದು ಮಾಜಿ ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ವಿಧಾನಪರಿಷತ್ ಚುನಾವಣೆಯ ನಿಮಿತ್ತ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಶಿವಾನಂದ ಪಾಟೀಲ್ ಮರತೂರ ಅವರ ಪರ ಹಮಿಕೊಂಡ ಪ್ರಚಾರ ಕೈಗೊಂಡು ಮಾತನಾಡಿದರು.
ಶಿವಾನಂದ ಪಾಟೀಲ್ ಒಬ್ಬ ಸಾಮಾನ್ಯ ಕಾರ್ಯಕರ್ತ ಮತ್ತು ಗ್ರಾಮ ಪಂಚಾಯತದಿಂದ ಜಿಲ್ಲಾ ಪಂಚಾಯತವರೆಗೆ ಸ್ಪರ್ಧಿಸಿ ಜನ ಸೇವೆಗೈದಿದ್ದ ಅನುಭವವಿದೆ. ಆದರೆ ಅವರೋಬ್ಬ ಬಡ ಹಾಗೂ ಪ್ರ್ರಾಮಾಣಿಕ ವ್ಯಕ್ತಿ ಇವರನ್ನು ಯಾವುದೇ ಆಸೆ ಪಡದೆ ಹೆಚ್ಚಿನ ಮತ ನೀಡಬೇಕೆಂದು ಹೇಳಿದರು.
ಬಿ.ಜಿ. ಪಾಟೀಲ್ ಅವರು ಶ್ರೀಮಂತ ಅಭ್ಯರ್ಥಿ ಆದರೆ, ಕಳೆದ ಆರು ವರ್ಷದಲ್ಲಿ ಒಮ್ಮೆಯೂ ಸ್ಥಳೀಯ ಜನಪ್ರತಿನಿದಿಗಳ ಪರ ಮಾತನಾಡಿಲ್ಲ. ಯಾವುದೇ ಪಂಚಾಯತಿಗಳಿಗೆ ಭೇಟಿ ನೀಡಿಲ್ಲ. ಹೀಗಾಗಿ ಇವರಿಗೆ ಮತ ನೀಡಬಾರದು ಎಂದು ಹೇಳದರು. ಕೆಎಂಎಪ್ ನಿದೇರ್ಶಕ ಈರಣ್ಣಾ ಝಳಕಿ, ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ. ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜೈಚೈತ್ರಾ ವೇದಶೆಟ್ಟಿ ಮಾತನಾಡಿದರು.
ಸತೀಷ ಪನಶೆಟ್ಟಿ, ಸಂಗಣ್ಣಾ ಮುದ್ದಡಗಿ, ಬಿ.ಜಿ.ಮಡ್ಡಿತೊಟ್, ರೇವಣಸಿದ್ದಪ್ಪ ಶ್ರೀಗಣಿ, ಶಂಕರ ಬಿರಾದಾರ, ಪ್ರಭಾಕರ ಬಿರಾದಾರ, ಶಿವಾಯೋಗಿ ಕೌಲಗಿ, ಭೀಮಾಶಂಕರ ನವಲಿ, ಭೀಮಾಶಂಕರ ಖೊಂಬಿನ, ಭವಾನೆಪ್ಪ ಕೌಲಗಿ, ಹಣಮಂತ ನಡಗೇರಿ ಭಾಗವಹಿಸಿದರು.
ಇದೆ ಸಂದರ್ಭದಲ್ಲಿ ಯಳಸಂಗಿ, ಹಿತ್ತಲಶಿರೂರ, ಹಡಲಗಿ ಗ್ರಾಪಂಗಳಲ್ಲಿ ಬಿ.ಆರ್. ಪಾಟೀಲ ಅವರು ಬೆಂಬಲಿಗರೊಂದಿಗೆ ಪ್ರಚಾರ ಕೈಗೊಂಡರು.