ಬಿಸಿಯೂಟದಲ್ಲಿ ಹುಳು: ಪೋಷಕರು ಸೇರಿ ಊರಿನ ಗ್ರಾಮಸ್ಥರು ಆಕ್ರೋಶ

0
77

ಶಹಾಬಾದ: ಶಾಲೆಯಯ ಮಕ್ಕಳಿಗೆ ಊಣಬಡಿಸುತ್ತಿರುವ ಬಿಸಿಯೂಟದಲ್ಲಿ ಹುಳುಗಳು ಂಡು ಬಂದ ಪರಿಣಾಮ ಮಕ್ಕಳು ತಮ್ಮ ಪಾಲಕರಿಗೆ ತಿಳಿಸಿದ ಪರಿಣಾಮ ಶಾಲೆಯ ಮುಖ್ಯಗುರುಗಳಿಗೆ ಹಾಗೂ ಬಿಸಿಯೂಟದ ಸಿಬ್ಬಂದಿಗಳಿಗೆ ಮಕ್ಕಳ ಪೋಷಕರು ಮತ್ತು ಊರಿನ ಗ್ರಾಮಸ್ಥರು ಶಾಲೆಯ ಆವರಣದಲ್ಲಿ ಜಮಾಯಿಸಿ ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಳಾ(ಕೆ) ಗ್ರಾಮದಲ್ಲಿ ಬುಧವಾರದಂದು ನಡೆದಿದೆ.

ಶಾಲೆಯಲ್ಲಿ ಎಂದಿನಂತೆ ಬಿಸಿಯೂಟ ನೀಡಿದ್ದು, ಅದನ್ನು ತಿನ್ನಲು ಕುಳಿತುಕೊಂಡಾದ ಊಟದಲ್ಲಿ ಹುಳುಗಳು ಕಂಡು ಬಹಳಷ್ಟು ಮಕ್ಕಳು ಆಹಾರವನ್ನು ಎಲ್ಲೆಂದರಲ್ಲಿ ಚೆಲ್ಲಿದ್ದಾರೆ.ಕೆಲವು ಹುಡುಗರು ಶಾಲೆಯ ಪಕ್ಕದಲ್ಲೇ ವಾಸವಾಗರಿಉವ ಪಾಲಕರಿಗೆ ತಿಳಿಸಿದ್ದಾರೆ.

Contact Your\'s Advertisement; 9902492681

ಕೂಡಲೇ ಪಾಲಕರು ಹಾಗೂ ಗ್ರಾಮಸ್ಥರು ಗ್ರಾಪಂ ಅಧ್ಯಕ್ಷೆ ಸುಷ್ಮಾ ಮರಲಿಂಗ, ಗ್ರಾಪಂ ಸದಸ್ಯರಾದ ಶ್ರೀಕಾಂತ ಗಂಗಭೋ,ಮಹ್ಮದ್ ಫಯಾಜ್ ಅವರನ್ನು ಕರೆಯಿಸಿ ಆಹಾರವನ್ನು ಪರಿಶೀಲಿಸಿದ್ದಾರೆ.ಅನ್ನದಲ್ಲಿ ಹುಳುಗಳು ಕಂಡು ಮುಖ್ಯಗುರುಗಳಿಗೆ ಹಾಗೂ ಬಿಸಿಯೂಟದ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೇ ಶಾಲಾ ಮಕ್ಕಳಿಗೆ ಉತ್ತಮ ಆಹಾರ ನೀಡುವುದು ಶಿಕ್ಷಕರ ಕರ್ತವ್ಯ. ಆಹಾರ ತಯ್ಯಾರಿಸಿದ ನಂತರ ಒಮ್ಮೆ ಮುಖ್ಯಗುರುಗಳು ಪರಿಶೀಲಿಸಬೇಕೆಂಬುದು ನಿಯಮ.ಆದರೆ ಅದ್ಯಾವುದು ಮಾಡದೇ ನಿರ್ಲಕ್ಷ್ಯ ತೋರಿದ್ದೀರಿ.ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದರೇ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ತಿಂದರೆ ಮಕ್ಕಳಿಗೆ ಹೊಟ್ಟೆ ನೋವು, ತಲೆನೋವು, ಜ್ವರ, ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರೆ ಮಾಡಿ ಆಗಿರುವ ಘಟನೆ ಬಗ್ಗೆ ದೂರು ಸಲ್ಲಿಸಿದರು.

ಮುಖ್ಯಗುರುಗಳು ಹಾಗೂ ಸಿಬ್ಬಂದಿಗಳು ಈ ರೀತಿಯಾಗದಂತೆ ನೋಡಿಕೊಳ್ಳುತ್ತೆವೆ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಮಕ್ಕಳ ಆರೋಗ್ಯ ಕಾಪಾಡಬೇಕಾದದ್ದು ಶಿಕ್ಷಕರ ಜವಾಬ್ದಾರಿ. ಈ ರೀತಿಯಾದಂತಹ ಉದಾಸೀನದ ಉತ್ತರವನ್ನು ನೀಡುತ್ತಾ ಅವರ ಜೀವದ ಜೊತೆ ಚೆಲ್ಲಾಟ ಆಡಬಾರದು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಜರುಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here