ಮೊಟ್ಟೆ ವಿತರಣೆಯಲ್ಲಿ ಮತೀಯ ರಾಜಕಾರಣ: ಎಸ್ಎಫ್ಐ ಖಂಡನೆ

0
33

ರಾಯಚೂರು : ಮಕ್ಕಳ ಪೌಷ್ಟಿಕ ಆಹಾರ ಮೊಟ್ಟೆ ವಿತರಣೆಯಲ್ಲಿ ಮತೀಯವಾದಿ ರಾಜಕಾರಣದ ಮಾಡುತ್ತಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ತೀವ್ರವಾಗಿ ಖಂಡಿಸುತ್ತದೆ.

ಪ್ರತಿಯೊಂದು ಮಗುವಿಗೂ ಮೊಟ್ಟೆ ಹಾಗೂ ಪೌಷ್ಟಿಕ ಆಹಾರವನ್ನು ಸರ್ಕಾರ ಖಾತ್ರಿಗೊಳಿಸಬೇಕೆಂದು ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ. ಮೊಟ್ಟೆಗಳನ್ನು ತಿನ್ನದ ಮಕ್ಕಳಿಗೆ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ ಹೀಗಿರುವಾಗ ನಿನ್ನೆ ಬೀದರ್ ನಲ್ಲಿ ಕೆಲ ಸಂಘಟನೆಯಿಂದ ಮೊಟ್ಟೆ ವಿತರಣೆ ವಿರೋಧಿಸಿ ಪ್ರತಿಭಟನೆ ನಡೆಸಿ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗಿದೆ.

Contact Your\'s Advertisement; 9902492681

ಇಂತಹ ಒಂದು ವೇಳೆ ಇಂತಹ ಮತೀಯವಾದಿ ರಾಜಕಾರಣದ ಕಾರಣಗಳಿಗಾಗಿ ರಾಜ್ಯ ಸರ್ಕಾರ ಮೊಟ್ಟೆ ಆಹಾರವನ್ನು ಮೊಟಕುಗೊಳಿಸಿದರೆ ರಾಜ್ಯದಾದ್ಯಂತ ವಿದ್ಯಾರ್ಥಿಗಳನ್ನು ಬೀದಿಗಿಳಿಸಿ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಸ್ಎಫ್ಐ ಎಚ್ಚರಿಕೆ ನೀಡುತ್ತದೆ.

ನಮ್ಮ ಶೈಕ್ಷಣಿಕ ಕ್ಷೇತ್ರದ ನೈಜ ಸಮಸ್ಯೆಗಳನ್ನು ಮರೆಮಾಚಿ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ತಿನ್ನುವ ಆಹಾರದ ಹೆಸರಿನಲ್ಲಿ ಮತೀಯವಾದಿ ರಾಜಕಾರಣದ ಕ್ಷುಲ್ಲಕ ವಿವಾದಗಳನ್ನು ಸೃಷ್ಟಿಸುವ ಮೂಲಕ ಶಿಕ್ಷಣ ಕ್ಷೇತ್ರದವನ್ನು ಖಾಸಗೀಕರಣ, ವ್ಯಾಪಾರೀಕರಣ, ಕೋಮುವಾದೀಕರಣ, ಕೇಂದ್ರೀಕರಣವನ್ನು ತೀವ್ರಗೊಳಿಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ NEP ಯನ್ನು ಅಪ್ರಜಾಸತ್ತಾತ್ಮಕವಾಗಿ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿಗೊಳಿಸಿ ಬಡವರು, ತಳ ವರ್ಗದ ಮಕ್ಕಳನ್ನು ಅಕ್ಷರ ಮತ್ತು ಆಹಾರದ ಹಕ್ಕಿನಿಂದ ವಂಚಿಸುವ ವ್ಯವಸ್ಥಿತವಾದ ಹುನ್ನಾರ ಅಡಗಿದೆ ಇದು ದ್ರೋಹಿತನದ ಕೆಲಸ ಇದನ್ನು ಕೂಡಲೇ ಕೈ ಬಳಸಬೇಕೆಂದು ಎಸ್ಎಫ್ಐ ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ಜಿಲ್ಲಾಧ್ಯಕ್ಷರಾದ ರಮೇಶ ವೀರಾಪುರ, ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here