ಕಾಯಿಲೆಗೆ ಹೆದರದಿರಿ ಮಾನಸಿಕವಾಗಿ ಸದೃಢರಾಗಿ :ದೊಶೆಟ್ಟಿ

0
105

ಸೇಡಂ: ಕಾಯಿಲೆ ಯಾವುದೇ ಇರಲಿ ಮಾನಸಿಕವಾಗಿ ಸದೃಢರಾದರೆ ನಿಮಗೆ ಯಾವ ಕಾಯಿಲೆಯು ಭಯಾನಕ ಅನಿಸೋದಿಲ್ಲ ಎಂದು ಮೂತ್ರ ಪಿಂಡ ತಜ್ಞ ಡಾ.ಮಂಜುನಾಥ ದೊಶೆಟ್ಟಿ ಹೇಳಿದರು.

ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿರುವ ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿ ಸ್ಮಾರಕ ಚಿರಾಯು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೋಗಕ್ಕೆ ಭಯ ಪಡುವ ಅಗತ್ಯವಿಲ್ಲ ಅತ್ಯಾಧುನಿಕ ಪರಿಕರಗಳು ಈಗಾಗಲೇ ಬಂದಿವೆ ಕಾಯಿಲೆ ಗುಣಪಡಿಸುವ ಶಕ್ತಿಯನ್ನು ಹೊಂದಿವೆ ಆದರೆ ನಾವು ದೃತಿಗೆಡದೆ ನಮಗೆ ಏನು ಆಗಿಲ್ಲ ಎಂಬ ಆತ್ಮಸ್ಥೈರ್ಯ ಇರಬೇಕು ಅದರಲ್ಲೇ 20 ಪ್ರತಿಷತ ಕಾಯಿಲೆಯನ್ನು ವಾಸಿ ಮಾಡಬಹುದಾಗಿದೆ.

Contact Your\'s Advertisement; 9902492681

ಇವತ್ತು ತಪಾಸಣೆಗೆ ನಮ್ಮಲ್ಲಿ ಬಂದ ಅನೇಕರಿಗೆ ತಮಗೆ ಬಿಪಿ ಶುಗರ್ ಹೃದಯ ಸಂಬಂಧಿ ಕಾಯಿಲೆ ಇದ್ದದ್ದು ಗೋತ್ತೆ ಇಲ್ಲ ಮುಂದಿನ ದಿನಗಳಲ್ಲಿ ಇನ್ನಷ್ಟು ಉಚಿತ ತಪಾಸಣೆ ನೀಡಲಿದ್ದೇವೆ ಅದರ ಸದುಪಯೋಗವನ್ನು ಇಲ್ಲಿನ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.

ಉಚಿತ ತಪಾಸಣೆಯಲ್ಲಿ 90ಕ್ಕೂ ಅಧಿಕ ಜನರಿಗೆ ಇಸಿಜಿ, ಬಿಎಂಐ, ಬಿಪಿ, ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳ ಉಚಿತ ತಪಾಸಣೆ ಮತ್ತು ಉಚಿತ ಔಷಧಿ ನೀಡಲಾಯಿತು.

ಈ ಸಂದರ್ಭದಲ್ಲಿ ಹೃದಯ ರೋಗ ತಜ್ಞ ಡಾ.ವೀರಾಜ ಕಲಬುರ್ಗಿ, ಡಾ.ಅಪರ್ಣ ಬಿರಾದಾರ, ಡಾ.ದತ್ತಣ್ಣ, ಪ್ರಟ್ಟಣದ ಮುಖಂಡ ಸಿದ್ದಪ್ಪ ತಳ್ಳಳ್ಳಿ, ಆಸ್ಪತ್ರೆಯ ವ್ಯವಸ್ಥಾಪಕ ನಾಗೇಶ ಸಾತ್ನೂರಕರ, ಲಾಬ್ ಟೇಕ್ನಿಷನ್ ಅನಿಲ, ಅಭಿಷೇಕ್, ಉಮೇಶ್ ಸೇರಿದಂತೆ ಇನ್ನಿತರ ಸಿಬ್ಬಂದಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here