ಸರಕಾರ ಖಾಸಗಿ ಶಾಲೆಗಳಿಗೆ ಆರ್.ಟಿ.ಇ ಅವಕಾಶ ನೀಡಲಿ: ಆರ್.ಎಂ.ಜಿ.ನಾಯಕ

0
73

ಸುರಪುರ: ಸರಕಾರಿ ಶಾಲೆಗಳಲ್ಲಿ ಎಲ್ಲಾ ವಿಷಯಗಳಿಗೆ ಶಿಕ್ಷಕರಿಲ್ಲ,ಮಕ್ಕಳಿಗೆ ಸರಿಯಾದ ಅಭ್ಯಾಸವು ದೊರೆಯದೆ ಬಡವರ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಾರೆ.ಆದ್ದರಿಂದ ಸರಕಾರ ಆರ್.ಟಿ.ಇ ಸೌಲಭ್ಯವನ್ನು ಖಾಸಗಿ ಶಾಲೆಗಳಲ್ಲೂ ಕಲಿಯಲು ಮಕ್ಕಳಿಗೆ ಅವಕಾಶ ವದಗಿಸಬೇಕೆಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಸುಪ್ರೀಂ ಕೋರ್ಟಿಗೆ ಹೋಗಲಾಗುವುದು ಎಂದು ಒಕ್ಕೂಟದ ತಾಲ್ಲೂಕು ಅಧ್ಯಕ್ಷ ರಾಜಾ ಮದನಗೋಪಾಲ ನಾಯಕ ಮಾತನಾಡಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಒಕ್ಕೂಟದ ತಾಲ್ಲೂಕು ಸಮಿತಿ ಅಡಿಯಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ೧೨೭,ಶಹಾಪುರ ತಾಲ್ಲೂಕಿನಲ್ಲಿ ೧೧೫ ಹಾಗು ಯಾದಗಿರಿ ತಾಲ್ಲೂಕಿನಲ್ಲಿ ೮೯ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ.ಈ ಶಾಲೆಗಳಲ್ಲಿ ಹಿಂದಿನಂತೆ ಬಡವರ ಮಕ್ಕಳು ಆರ್.ಟಿ.ಇ ಅಡಿಯಲ್ಲಿ ಶಾಲೆ ಕಲೆಯಲು ಸರಕಾರ ಅವಕಾಶ ಮಾಡಿಕೊಡಬೇಕು.ಇದರಿಂದ ಬಡವರ ಮಕ್ಕಳಿಗು ಉತ್ತಮ ಶಿಕ್ಷಣ ದೊರಕಲಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆರ್.ಟಿ.ಇ ಸ್ಟೂಡೆಂಟ್ಸ್ ಆಂಡ್ ಪೇರೆಂಟ್ಸ್ ಅಶೋಷಿಯೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎನ್.ಯೋಗಾನಂದ ಮಾತನಾಡಿ,ಸರಕಾರ ೨೦೧೨ ರಿಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಜಾರಿಗೊಳಿಸಿ ಬಡವರ ಮಕ್ಕಳಿಗು ಖಾಸಗಿ ಶಾಲೆಗಳಲ್ಲಿ ಉತ್ತಮವಾದ ಶಿಕ್ಷಣ ದೊರೆಯುವಂತೆ ಮಾಡಿತ್ತು.ಆದರೆ ಈಗ ಅದನ್ನು ನಿಲ್ಲಿಸುವ ಮೂಲಕ ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕುತ್ತಿದೆ.ಇದನ್ನ ವಿರೋಧಿಸಿ ಹೈಕೋರ್ಟಲ್ಲಿ ದಾವೆ ಹೂಡಲಾಗಿತ್ತು.ಆದರೆ ಹೈಕೋರ್ಟ ಕೂಡ ಸರಕಾರದ ನಿಯಮ ಸರಿ ಎಂದು ತೀರ್ಪು ನೀಡಿದೆ.ಆದ್ದರಿಂದ ನಾವೆಲ್ಲ ಈಗ ಸುಪ್ರೀಂ ಕೋರ್ಟ ಮೆಟ್ಟಿಲೇರುವುದು ಅನಿವಾರ್ಯವಾಗಲಿದೆ ಎಂದರು.

ಒಕ್ಕೂಟದ ತಾಲ್ಲೂಕು ಗೌರವಾಧ್ಯಕ್ಷ ಸಿ.ಎನ್.ಭಂಡಾರಿ ಮಾತನಾಡಿ,ಬಡ ಕುಟುಂಬಗಳ ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ನಾವೆಲ್ಲ ಸುಪ್ರೀಂ ಕೋರ್ಟ ಮೊರೆ ಹೋಗುವುದು ಅನಿವಾರ್ಯವಾಗಿದೆ.ಆದ್ದರಿಂದ ಎಲ್ಲಾ ಖಾಸಗಿ ಶಾಲೆಗಳ ಮುಖ್ಯಸ್ಥರು ಇದಕ್ಕೆ ಸಹಕರಿಸುವಂತೆ ಕರೆ ನೀಡಿದರು.

ವೇದಿಕೆ ಮೇಲೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಬಸವರಾಜ ಜಮದ್ರಖಾನಿ,ರಾಮು ಸಗರ,ಶಿವಕುಮಾರ ದೇವದುರ್ಗ ಇದ್ದರು.ಸುರಪುರ,ಶಹಾಪುರ,ಹುಣಸಗಿ,ಗುರುಮಿಠಕಲ್,ಯಾದಗಿರಿ,ಜೇವರ್ಗಿ ಸೇರಿದಂತೆ ಅನೇಕ ಕಡೆಗಳ ಖಾಸಗಿ ಶಾಲೆಗಳ ಮುಖ್ಯಸ್ಥರು ಹಾಗು ಆರ್.ಟಿ.ಇ ಮಕ್ಕಳ ಪೋಷಕರು ಸಭೆಯಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here