ಸುರಪುರ: ಉತ್ತರ ಪ್ರದೇಶದ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷರಾಗಿದ್ದ ವಾಸೀಂ ರಿಜ್ವಿ ಎನ್ನುವ ವ್ಯಕ್ತಿಯು ಮುಸ್ಲೀಂ ಸಮುದಾಯದ ಅವಹೇಳನಕಾರಿ ಲೇಖನಗಳನ್ನು ಬರೆದಿದ್ದು ಇತನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಇವನ ಮೇಲೆ ಕ್ರಮ ಕೈಗೊಳ್ಳದ ಪೊಲೀಸ್ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸುರಪುರ ತಹಸೀಲ್ ಕಚೇರಿ ಮುಂದೆ ಮುಸ್ಲೀಂ ಸಮುದಾಯದ ಮುಖಂಡರು ಹಾಗು ಪ್ರಗತಿಪರ ಸಂಘಟನೆಗಳ ಮುಖಂಡರು ಸಾಂಕೇತಿಕ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮುಫ್ತಿ ಇಕ್ಬಾಲ್ ಸಾಬ್ ಒಂಟಿ,ಅಬ್ದುಲ್ ಗಫೂರ್ ನಗನೂರಿ,ಶೇಖ್ ಮಹಿಬೂಬ್ ಒಂಟಿ,ಮುನವರ್ ಸಾಬ್ ಅರಕೇರಿ,ಅಹ್ಮದ್ ಪಠಾಣ್,ಮಹ್ಮದ್ ನಿಜಾಮುದ್ದಿನ್,ಮಹ್ಮದ್ ಸೈಫುದ್ದಿನ್,ಮಹ್ಮದ್ ಕಮ್ರುದ್ದಿನ್,ಉಸ್ತಾದ ವಜಾಹತ್ ಹುಸೇನ್,ಸ ಅಹ್ಮದ್ ಶರೀಫ್,ಶಕೀಲ್ ಅಹ್ಮದ್,ಶಫಿರ್ ಉರ್ ರಹಮಾನ್,ರಾಹುಲ್ ಹುಲಿಮನಿ,ಅಬ್ದುಲ್ ಸಲೀಂ,ಮಾಳಪ್ಪ ಕಿರದಳ್ಳಿ,ದಾವೂದ್ ಪಠಾಣ್,ರಮೇಶ ಅರಕೇರಿ,ಅಹ್ಮದ್ ಹುಸೇನ್ ಸೇರಿದಂತೆ ಅನೇಕರಿದ್ದರು.