ಹಾವೇರಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ ಕಠಿಣ ಶಿಕ್ಷೆ

0
14
  • ಕುಶಲ

ಹಾವೇರಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಹಿಂಸೆ ನೀಡಿದ ಆರೋಪಿ ಭೀಮಪ್ಪ ಕೋಟೆಪ್ಪ ಹೊಳಲ ಎಂಬಾತನಿಗೆ ಐದು ವರ್ಷ ಕಠಿಣ ಸಜೆ ಹಾಗೂ ನಾಲ್ಕು ಸಾವಿರ ರೂ.ದಂಡ ವಿಧಿಸಿ ಜಿಲ್ಲಾ ವ ಸತ್ರ ಎಫ್.ಟಿ.ಎಸ್.ಸಿ-1(ಪೊಕ್ಸೊ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್.ಜ್ಯೋತಿಶ್ರೀ ಅವರು ತೀರ್ಪು ನೀಡಿದ್ದಾರೆ.

ಬೆಳವಿಗಿ ಗ್ರಾಮದಲ್ಲಿ 13 ಮಾರ್ಚ್ 2020 ರಂದು ರಾತ್ರಿ ಸಮಯದಲ್ಲಿ ಆರೋಪಿಯು ಬಾಲಕಿ ಆಟವಾಡುತ್ತಿದ್ದ ಸಮಯದಲ್ಲಿ ಲೈಂಗಿಕ ಹಿಂಸೆ ನೀಡಿದ್ದರಿಂದ ಹಾವೇರಿ ಪೊಲೀಸ್ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಸದರಿ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ವೃತ್ತ ನಿರೀಕ್ಷಕರು ನ್ಯಾಯಾಲಯಕ್ಕೆ ಆರೋಪಿತನ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Contact Your\'s Advertisement; 9902492681

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ವಿವಿಧ ಕಲಂಗಳಡಿ ನಾಲ್ಕು ಸಾವಿರ ದಂಡ, ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದು, ಭಾದಿತೆಗೆ ರೂ.50 ಸಾವಿರ ಪರಿಹಾರ ನೀಡಲು ತೀರ್ಪಿನಲ್ಲಿ ತಿಳಿಸಲಾಗಿದೆ.

ಸರ್ಕಾರದ ಪರವಾಗಿ ಜಿಲ್ಲಾ ವ ಸತ್ರ ಎಫ್.ಟಿ.ಎಸ್.ಸಿ-1(ಪೊಕ್ಸೊ) ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ವಿನಾಯಕ ಎಸ್.ಪಾಟೀಲ ಅವರು ವಾದ ಮಂಡಿಸಿದ್ದರು..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here