ಮಹಾಪರಿನಿರ್ವಾಣ ದಿನಾಚರಣೆಯ ಅಂಗವಾಗಿ ಮೈತ್ರಿ ಫೌಂಡೇಶನ್ ವತಿಯಿಂದ ರಕ್ತ ದಾನ ಶಿಬಿರ

0
17

ಕಲಬುರಗಿ: ಸಿದ್ದಾರ್ಥ ನಗರದಲ್ಲಿರುವ ಬುದ್ಧ ವಿಹಾರದಲ್ಲಿ ವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ೬೫ ನೇ ಮಹಾಪರಿನಿರ್ವಾಣ ದಿನಾಚರಣೆಯ ಅಂಗವಾಗಿ ಮೈತ್ರಿ ಫೌಂಡೇಶನ್ ವತಿಯಿಂದ ರಕ್ತ ದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಪೂಜ್ಯ ಬೌದ್ಧ ಬಿಕ್ಕು ವಿಶುದ್ಧಾನಂದ ಬಂತೆ ಅವರು ಬುದ್ಧ ವಂದನೆಯೊಂದಿಗೆ ಧಮ್ಮ ಪ್ರವಚನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜ್ಯೋತಿ ಬೆಳಗಿಸಿದರು.

ಚಿಂತಕರಾದ ಆರ್ ಕೆ ಹುಡುಗಿ ಅವರು ಬಾಬಾ ಸಾಹೇಬರ ಪರಿನಿರ್ವಾಣ ಕಾರ್ಯಕ್ರಮದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ರಕ್ತ ದಾನ ಶ್ರೇಷ್ಠ ದಾನ, ಪ್ರತಿಯೊಬ್ಬರು ರಕ್ತ ದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಜೀವ ಉಳಿಸಿದ ಸಾರ್ಥಕ ಭಾವ ದೊರೆಯುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಹೆಚ್‌ಕೆಇ ಸಂಸ್ಥೆ ಸದಸ್ಯ ಅರುಣಕುಮಾರ ಪಾಟೀಲ ಅವರು ಮಾತನಾಡಿ ಬಿ.ಆರ್.ಅಂಬೇಡ್ಕರ್ ಅವರ ಜೀವನವೇ ಒಂದು ಆದರ್ಶ, ಅವರು ತಮ್ಮ ಜೀವನದುದ್ದಕ್ಕೂ ಅನೇಕ ಸವಾಲುಗಳನ್ನು ಎದುರಿಸಿ, ಅವುಗಳನ್ನು ಸರಳವಾಗಿ ಎದುರಿಸಿ ಮೇಲೆ ಬಂದವರು. ಅನೇಕ ಶತಮಾನಗಳಿಂದಲೂ ತುಳಿಕ್ಕೊಳಗಾದವರಿಗೆ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಮಹಾನ್ ಮಾನವತಾವಾದಿ ಎಂದರು.

ದಕ್ಷಿಣ ಮತ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮೈತ್ರಿ ಫೌಂಡೇಶನ್‌ನ ಅಧ್ಯಕ್ಷ ಪ್ರಕಾಶ ಔರಾದರಕರ್, ಕಾರ್ಯದರ್ಶಿ ರೇಣುಕಾ ಸಿಂಗೆ, ಚೇಂಬರ್ ಆಫ್ ಕಾಮರ್ಸ್‌ನ ಕಾರ್ಯದರ್ಶಿ ಶರಣು ಪಪ್ಪಾ, ಬ್ಲೆಡ್ ಬ್ಯಾಂಕ್ ಸಿಬ್ಬಂದಿಗಳಾದ ವಿನೋದಕುಮಾರ ವಾಲಿ, ನಾಗೇಶ ಅಜಮನಿ, ಶ್ರಾವಣ ಕುಮಸಿ, ರಾಣೋಜಿ, ಗುಂಡುರಾವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here