ಶಹಾಬಾದ: ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲರು ಸ್ವಂತ ಬಲದಿಂದ ಹಣವಂತರಾಗಿದ್ದಾರಲ್ಲದೇ, ಗುಣವಂತರು ಇದ್ದಾರೆ.ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಬಿಜೆಪಿ ಚಿತ್ತಾಪೂರ ಮಂಡಲ ಅಧ್ಯಕ್ಷ ನೀಲಕಂಠ ಪಾಟೀಲ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯ ಮಾಡಿ, ಅನುದಾನವನ್ನು ಎತ್ತಿಹಾಕಿ ರಾಜಕೀಯಕ್ಕೆ ಬಿ.ಜಿ.ಪಾಟೀಲರು ಬಂದಿಲ್ಲ. ಅವರು ಸ್ವಂತ ತೋಳ್ಬಲದ ಮೂಲಕ ಪರಿಶ್ರಮ ಪಟ್ಟು ಹಣವುಳ್ಳವರಾಗಿದ್ದಾರೆ.ಅಲ್ಲದೇ ಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದಾರೆ ಹೊರತು ಹಣ ಮಾಡಲು ಬಂದಿಲ್ಲ ಎಂಬುದನ್ನು ಮತದಾರರು ಅರಿಯಬೇಕು.ಯಾವುದೇ ಗ್ರಾಪಂಗೆ ಬೇಟಿ ನೀಡಿಲ್ಲ.ಅನುದಾನ ಒದಗಿಸಿಲ್ಲ ಎನ್ನುವ ಮಾತು ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡಿದ್ದಾರೆ.ಈ ಹಿಂದೆ ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಯಾವ ಗ್ರಾಪಂ ಬೇಟಿ ನೀಡಿದ್ದಾರೆ.
ಅಲ್ಲದೇ ಬಿ.ಜಿ.ಪಾಟೀಲರು ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯರಾಗಿ ಚಿತ್ತಾಪೂರ ತಾಲೂಕಿನ ಭಂಕಲಗಾ ಗ್ರಾಮದ ಸಿಸಿ ರಸ್ತೆ ನಿರ್ಮಾಣಕ್ಕೆ ೬ ಲಕ್ಷ ರೂ. ದಿಗ್ಗಾಂವ ಸಿಸಿ ರಸ್ತೆ ೩ಲಕ್ಷ ರೂ.ಅಲ್ಲೂರ(ಬಿ) ಸಿಸಿ ರಸ್ತೆಗೆ ೩ ಲಕ್ಷ ರೂ. ಸಮುದಾಯ ಭವನಕ್ಕೆ ೩ ಲಕ್ಷ ರೂ, ಸಾತನೂರ ಸಿಸಿ ರಸ್ತೆಗೆ ೩ ಲಕ್ಷ ರೂ, ಭಂಕೂರ ಗ್ರಾಮದಲ್ಲಿ ಸಿಸಿ ರಸ್ತೆಗೆ ೩ ಲಕ್ಷ ರೂ. ಈಶ್ವರ ದೇವಸ್ಥಾನದ ಅಭಿವೃದ್ಧಿಗೆ ೬ ಲಕ್ಷ ರೂ. ಚರಂಡಿ ನಿರ್ಮಾಣಕ್ಕೆ ೬ ಲಕ್ಷ ರೂ, ಮುತ್ತಗಾ ಗ್ರಾಮದ ಸಿಸಿ ರಸ್ತೆ ನಿರ್ಮಾಣಕ್ಕೆ ೩ ಲಕ್ಷ ರೂ,ದಂಡಗುಂಡ ದೇವಸ್ಥಾನ ಅಭಿವೃದ್ಧಿಗೆ ೧೫ ಲಕ್ಷ ರೂ., ಪೇಠಸಿರೂರ ಗ್ರಾಮದ ಸಿಸಿ ರಸ್ತೆಗೆ ೩ ಲಕ್ಷ ರೂ, ತೊನಸನಹಳ್ಳಿ ಗ್ರಾಮದ ಬಸ್ ಸೆಲ್ಟರ್ ನಿರ್ಮಾಣಕ್ಕೆ ೩ ಲಕ್ಷ ರೂ, ಮುಗುಳನಾಗಾವ ಪಶು ಆಸ್ಪತ್ರೆಯ ಕಂಪೌಂಡ ವಾಲಗೆ ೩ ಲಕ್ಷ ರೂ, ಮಾಡಬೂಳ ಗ್ರಾಮಲ್ಲಿ ೩ ಲಕ್ಷ ರೂ, ಗುಂಡುಗುರ್ತಿ ವಿದ್ಯುತ್ ದೀಪ ಹಾಗೂ ಶಾಲಾ ಕಂಪೌಂಡಗೆ ೩ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದಾರೆ.
ಹೀಗೆ ಅನೇಕ ಗ್ರಾಮಗಳಿಗೆ ಅನುದಾನ ಒದಗಿಸುವ ಮೂಲಕ ಹಿಂದೆಂದೂ ವಿಧಾಣ ಪರಿಷತ್ ಸದಸ್ಯರೊಬ್ಬರು ಇಷ್ಟೊಂದು ಅನುದಾನ ನೀಡಿದ ಉದಾಹರಣೆಗಳಿಲ್ಲ.ಆದರೆ ಗೊತ್ತಿಲ್ಲದೇ ಹಾರಿಗೆ ಹೇಳಿಕೆ ನೀಡುತ್ತಿರುವುದು ಮಾತ್ರ ಅಸಮಂಜಸವಾದುದು. ರಾಷ್ಟ್ರದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ.ಬಿಜೆಯತ್ತ ಮತದಾರರು ಒಲವು ಇರುವುದರಿಂದ ಬಿ.ಜಿ.ಪಾಟೀಲರ ಗೆಲುವು ಖಚಿತ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.