ಜೇವರ್ಗಿ: ಜೇವರ್ಗಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಅದ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕರಿಗೊಳೇಶ್ವರ ಫರಹತಾಬಾದ ಇವರಿಗೆ ಗುಲಬರ್ಗಾ ವಿಶ್ವವಿದ್ಯಾಲಯವು ಪಿಎಚ್ಡಿ ಸಂಶೋಧನಾ ಮಾರ್ಗದರ್ಶಕರೆಂದು ಗುರುತಿಸಿ ಮಾನ್ಯತೆಯನ್ನು ನೀಡಿದೆ.
ಇಂದು ಕಾಲೇಜಿನಲ್ಲಿ ಡಾ. ಕರಿಗೊಳೇಶ್ವರ ಅವರ ಈ ಅತ್ಯುನ್ನತ ಶೈಕ್ಷಣಿಕ ಸಾಧನೆಯನ್ನು ಪ್ರಾಚಾರ್ಯರಾದ ಡಾ. ಪ್ರಭು ಶೆಟ್ಟಿ ಮೂಲಗೆ ಅವರು ಕೊಂಡಾಡಿ ಮನದುಂಬಿ ಅಭಿನಂದಿಸಿದರು. ಇದೊಂದು ಬಹು ಮಹತ್ವದ, ಅರ್ಥ ಪೂರ್ಣ ಕಾರ್ಯವಾಗಿದೆ. ನಮ್ಮ ಕಾಲೇಜಿಗೆ ಒಂದು ಗರಿ ಮೂಡಿದಂತಾಗಿದೆ. ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ ಎಂದರು. ಅವರು ಹತ್ತಾರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಸಂಶೋಧನೆಮಾಡಲು ಮಾರ್ಗದರ್ಶನ ಮಾಡಿ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. ಎಲ್ಲರ ಪರವಾಗಿ ಡಾ. ಕರಿಗೊಳೇಶ್ವರ ಅವರಿಗೆ . ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಕರಿಗೊಳೇಶ್ವರ ಅವರು ಪ್ರಾಂಶುಪಾಲರು ಮತ್ತು ಎಲ್ಲಾ ಸಹೋದ್ಯೋಗಿಗಳ ಸಹಕಾರದಿಂದಾಗಿ ನನಗೆ ಪಿಎಚ್ಡಿ ಸಂಶೋಧನಾ ಮಾರ್ಗದರ್ಶನದ ಮಾನ್ಯತೆ ದೊರೆತಿದೆ. ಅದಕ್ಕಾಗಿ ಪ್ರಾಚಾರ್ಯರು ಮತ್ತು ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಕೇಂದ್ರಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಮಾನ್ಯತೆ ನೀಡಿದೆ. ಇದು ನಮ್ಮ ಕಾಲೇಜಿಗೆ ಸಂದ ಗೌರವ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾದ ಶ್ರೀ ನೀಲಕಂಠರಾವ ಪಾಟೀಲ ಅವರು ಡಾ. ಕರಿಗೊಳೇಶ್ವರ ಅವರನ್ನು ಸನ್ಮಾನಿಸಿದರು. ಮನೋವಿಜ್ಞಾನ ಪ್ರಾಧ್ಯಾಪಕ ಡಾ. ಆರ್. ವೆಂಕಟರೆಡ್ಡಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ಹಿರಿಯ ಪ್ರಾಧ್ಯಾಪಕ ರಾದ ಡಾ. ಬಸವರಾಜ ಕೊಂಬಿನ ಮತ್ತು ಎಲ್ಲಾ ಸಹೋದ್ಯೋಗಿಗಳು ಹಾಜರಿದ್ದರು.