ಕಲಬುರಗಿ: ನೂತನ ಶಿಕ್ಷಣ ನೀತಿಯ ಭಾಗವಾಗಿ ಜಾರಿಗೊಳಿಸಿದ ೪ ವರ್ಷದ ಪದವಿ ಕೋರ್ಸು ವಾಪಸ್ಸಿಗೆ ಆಗ್ರಹಿಸಿ ಎಐಡಿಎಸ್ಒ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಹಣಮಂತ ಎಸ್ ಎಚ್,ಸ್ನೇಹಾ ಕಟ್ಟಿಮನಿ, ತುಳಜಾರಾಮ ಎನ್ ಕೆ,ಶಿಲ್ಪಾ ಬಿಕೆ, ಅರುಣ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ವಿದ್ಯಾರ್ಥಿಗಳು ಇದ್ದರು.