ಕಾರ್ತಿಕ ಮಾಸದ ಸಮಾರೋಪ ಸೂಗುರೇಶ್ವರ ದೇವಸ್ಥಾನದಲ್ಲಿ ಸಂಗೀತ ದರ್ಬಾರ

0
12

ಸುರಪುರ: ನಗರದ ಶ್ರೀ ಸೂಗುರೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಂಗೀತ ದರ್ಬಾರ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ನಾಯಕ ಜೇವರ್ಗಿ ಮಾತನಾಡಿ,ಇಂದಿನ ಒತ್ತಡಮಯ ಜೀವನದಲ್ಲಿ ಜನರು ನೆಮ್ಮದಿಗಾಗಿ ಹುಡುಕುವಂತಾಗಿದ್ದು ಮನುಷ್ಯ ದೈಹಿಕ ಹಾಗೂ ಮಾನಸಿಕ ಒತ್ತಡದಿಂದ ಹೊರ ಬರಲು ಸಂಗೀತ ಒಂದು ವರದಾನವಾಗಿದ್ದು ಸಂಗೀತದಿಂದ ಮನಸ್ಸಿಗೆ ಆಹ್ಲಾದಕರವೆನಿಸಿ ಮಾನಸಿಕೆ ನೆಮ್ಮದಿ ತರುತ್ತದೆ ಎಂದರು.

Contact Your\'s Advertisement; 9902492681

ಇಂದು ಮೊಬೈಲ್,ಟಿವಿ, ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ಸಂಗೀತ ಇನ್ನೀತರ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹವಿಲ್ಲದೇ ಸೊರಗುತ್ತಿದ್ದು ಅನೇಕ ಜನ ಸಂಗೀತ ಕಲಾವಿದರಿಗೆ ಪ್ರತಿಭೆಗೆ ಅವಕಾಶವಿಲ್ಲದೇ ಸಮಾಜದಿಂದ ದೂರ ಉಳಿಯುವಂತಾಗಿದೆ ಎಂದು ಅಭಿಪ್ರಾಯಪಟ್ಟ ಅವರು ಸೂಗುರೇಶ್ವರ ದೇವಸ್ಥಾನದಲ್ಲಿ ಕಳೆದ ೫೩ ವರ್ಷಗಳಿಂದ ಸಂಗೀತ ದರ್ಬಾರ ಕಾರ್ಯಕ್ರಮವನ್ನು ಹಮ್ಮಿಕೊಂಡು ಧಾರ್ಮಿಕ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವದರ ಜೊತೆಗೆ ಈ ಭಾಗದ ಎಲೆಮರೆ ಕಾಯಿಯಂತಿರುವ ಸಂಗೀತ ಕಲಾವಿದರನ್ನು ಗುರುತಿಸಿ ಅವರನ್ನು ಹೊರ ಜಗತ್ತಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ದೇವಸ್ಥಾನದ ಅರ್ಚಕರಾದ ಕೊಟ್ರಯ್ಯಸ್ವಾಮಿ ಬಳ್ಳುಂಡಗಿಮಠ ಸಾನಿಧ್ಯ ವಹಿಸಿದ್ದರು, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಮಾಜಿ ಸದಸ್ಯ ಬಸವರಾಜ ಭಂಟನೂರ ಪ್ರಾಸ್ತಾವಿಕವಾಗಿ ಮಾತನಾಡಿ ಸಂಗೀತ ಜೀವನದ ದಿಕ್ಕನೇ ಬದಲಿಸುವ ಶಕ್ತಿಯನ್ನು ಹೊಂದಿದೆ ಜೀವನಪುರಿ ರಾಗವನ್ನು ಹಾಡುವದರ ಮೂಲಕ ಸಂಗೀತ ದಿಗ್ಗಜ ತಾನಸೇನ್ ಅವರು ಮರಣವನ್ನಪ್ಪಿದ್ದ ಮಗುವನ್ನು ಜೀವಂತವನ್ನಾಗಿಸಿದ ಉದಾಹರಣೆ ಇತಿಹಾಸದಿಂದ ತಿಳಿದು ಬರುತ್ತದೆ ಎಂದು ಹೇಳಿದರು.

ಪ್ರಮುಖರಾದ ಸುನೀಲ್ ಸರಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು,ಪಿ.ಎಸ್.ಐ ಚಿತ್ರಶೇಖರ, ಸಂಗೀತ ಕಲಾವಿದ ದೀಪಕಸಿಂಗ್ ಹಜೇರಿ ತಾಳಿಕೋಟಿ, ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದಭದಲ್ಲಿ ಅಧ್ಯಾತ್ಮಿಕ ವಿಜ್ಞಾನಿ ಸಮ್ಮೋಹಿನಿ ಮತ್ತು ಯೋಗ ಚಿಕಿತ್ಸಾ ತಜ್ಞೆ ಡಾ.ಸರ್ವಮಂಗಳಾ ಖಾನಾಪುರಿ, ಹೋತಪೇಟ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಚನ್ನಬಸವರಾಜೇಶ್ವರಿ ಪಾಣಿ, ಸಂಗೀತ ಸಾಧಕರಾದ ಯಮುನೇಶ ಯಾಳಗಿ, ಮೋಹನರಾವ ಮಾಳದಕರ, ಸುರೇಶ ಅಂಬೂರೆ, ರಮೇಶ ಕುಲಕರ್ಣಿ, ಶಿಕ್ಷಕ ಶರಣಬಸವ ಯಾಳವಾರ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಂಗೀತ ಕಲಾವಿದರಾದ ಸೈದಪ್ಪ ಗವಾಯಿಗಳು ಕಲಬುರಗಿ, ಶಿವಶರಣಯ್ಯಸ್ವಾಮಿ ಬಳ್ಳುಂಡಗಿಮಠ, ಸಿದ್ದಯ್ಯಸ್ವಾಮಿ ಪಡದಳ್ಳಿ, ಲಕ್ಷ್ಮೀಕಾಂತ ಹೂಗಾರ ಕಲಬುರಗಿ, ಶಾರದಾ ಮದರಿ, ಪ್ರಿಯಾಂಕ ವಿಶ್ವಕರ್ಮ, ನಮೃತಾ ಯಾದವ್, ಭೂಮಿಕಾ ಸ್ಥಾವರಮಠ, ದೀಪಿಕಾ ಸ್ಥಾವರಮಠ, ಅನನ್ಯಾ ಸ್ಥಾವರಮಠ, ಪದ್ಮಾಕ್ಷಿ ಶಹಾಪುರಕರ, ಅಕ್ಷತಾ ಸ್ಥಾವರಮಠ,ಶರಣಪ್ಪ ಕಮ್ಮಾರ, ಶಂಕರ ಆಲೂರ, ನರಸಿಂಹ ಭಂಡಿ, ಚಂದ್ರಹಾಸ ಮಿಠ್ಠಾ, ಶ್ರೇಯಾ ಪಾಟೀಲ ಹಾಗೂ ತಬಲಾ ಕಲಾವಿದರಾದ ರಾಜಶೇಖರ ಗೆಜ್ಜಿ, ಸುರೇಶ ಅಂಬೂರೆ,ಉಮೇಶ ಯಾದವ್, ರಮೇಶ ಕುಲಕರ್ಣಿ,ರವಿಸ್ವಾಮಿ ಗೋಟೂರು, ಅವಿನಾಶ ಕಟ್ಟಿಮನಿ ಮುಂತಾದ ಕಲಾವಿದರಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು, ಪ್ರಮುಖರಾದ ಸೂಗುರೇಶ ಮಡ್ಡಿ, ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪ ಮಠ, ನಾಗರಾಜ ಜಮದ್ರಖಾನಿ, ಚಂದ್ರಕಾಂತ ಬಳ್ಳುಂಡಗಿಮಠ, ಚಂದ್ರಶೇಖರ ಅಜಾದ ಪಾಣಿ, ಮಹೇಂದ್ರ ಅಂಗಡಿ ಇತರರು ಉಪಸ್ಥಿತರಿದ್ದರು. ವಿನೋದ ಬಳ್ಳುಂಗಡಿಮಠ ಸ್ವಾಗತಿಸಿದರು ಶರಣಬಸವ ಯಾಳವಾರ ನಿರೂಪಿಸಿದರು ಶಂಭುಸ್ವಾಮಿ ಬಳ್ಳುಂಡಗಿಮಠ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here