ಹೆಸರಿಗೆ ಮಾತ್ರ ಆರೋಗ್ಯ ಕೇಂದ್ರ: ಇಲ್ಲಿ ಪ್ರಾಥಮಿಕ ಚಿಕಿತ್ಸೆಗೂ ಗತಿ ಇಲ್ಲ

0
132
  • ಸಾಜಿದ್ ಅಲಿ

ಕಲಬುರಗಿ: ಇಲ್ಲಿನ ನ್ಯೂ ರಹಿಮತ್ ನಗರ ಬಡಾವಣೆಯಲ್ಲಿರುವ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯವಸ್ಥೆಯ ಸುದ್ದಿ. ಇಡೀ ಕಲಬುರಗಿ ಜಿಲ್ಲೆಯ ಆರೋಗ್ಯ ವವ್ಯಸ್ಥೆಯನ್ನು ಪ್ರಶ್ನೆಸುವ ಸುದ್ದಿ ಇದಾಗಿದೆ.

8 ವರ್ಷದ ಯುವಕ ಬಿದ್ದು ಗಾಯ ಮಾಡಿಕೊಂಡ ಪೋಷಕರ ಜೊತೆ ಪ್ರಾಥಮಿಕ ಚಿಕಿತ್ಸೆಗೆ ಆಗಮಿಸಿದ ವೇಳೆ ಕೇಂದ್ರದ ಸಿಬ್ಬಂದಿಗಳು ಚಿಕಿತ್ಸೆ ನಿರಾಕರಿಸಿ, ಜಿಲ್ಲಾ ಆಸ್ಪತ್ರೆಗೆ ಹೋಗಿ ಎಂದು ಮರಳಿ ಸೂಚಿಸಿ ಕಳುಸಿರುವ ಘಟನೆ ಇಂದು ನಡೆದಿದೆ. ನಿನ್ನೆ ರಕ್ತ ಪರೀಕ್ಷೆ ಸೂಚಿದ ರೋಗಿ ರಕ್ತ ಪರೀಕ್ಷೆಗಾಗಿ ಪ್ರಯೋಗಾಲಯದ ಸಿಬ್ಬಂದಿಯಾಗಿ ಒಂದು ಗಂಟೆ ಕಳೆದರು ಪ್ರಯೋಗಾಲಯದ ಮುಂದೆ ಪ್ರತೀಕ್ಷೆ ಮಾಡುವಂತ ಘಟನೆ ನಡೆದಿತ್ತು.

Contact Your\'s Advertisement; 9902492681

ಪ್ರತಿದಿನ ಔಷಧಿ ಅಧಿಕಾರಿ ವಿಳಂಬವಾಗಿ ಬರುವುದು ಸಮಾನ್ಯವಾಗಿದೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷಧಿಗಳು ಪಡೆಯಲು ಗಂಟೆ ಗಂಟೆ ಕಾಯಬೇಕು. ಜೌಷಧ ನೀಡುವ ಅಧಿಕಾರಿ ತನ್ನ ಎಲ್ಲಾ ಕೆಲಸ ಕಾರ್ಯಾ ಮುಗಿಸಿ ಔಷಧಿ ವಿತರಿಸುವ ವರೆಗೆ ರೋಗಿಗಳು ಕಾಯಬೇಕು. ಹೆಚ್ಚು ಕೆಲವೊಂದು ಮಾತ್ರ ಕೊಟ್ಟು ಉಳಿದ ಔಷಧಿಗಳು ಶಾರ್ಟೇಜ್ ಇದೆ ಎಂದು ಕಳುಹಿಕೊಂಡು ಹೋಗುವ ನೋವು ಪ್ರತಿಯೊಂದು ರೋಗಿ ಅನುಭವಿಸುಬೇಕು. ಅಲ್ಲದೇ ಔಷಧಿಕಾರಿ ಜರನರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತಾರೆ ಎಂದು ಸಾಮಾಜಿಕ ಕಾರ್ಯಕರ್ತರಾದ ಮೊಹಮ್ಮದ್ ದಸ್ತಗೀರ್ ಆರೋಪಿಸಿದ್ದಾರೆ.

ಗರ್ಭೀಣಿಯರು ತಾಯಿ ಕಾರ್ಡ್ ಗಾಗಿ ಆರೋಗ್ಯ ಕೇಂದ್ರದ ಸುತ್ತಾಡಬೇಕು. ಆರೋಗ್ಯ ಕೇಂದ್ರದಲ್ಲಿ ನೈಟ್ ಡ್ಯೂಡಿ ನರ್ಸ್ ಗಳು ನಿಯೋಜಿಸಿದ್ದರೂ. ಇಲ್ಲಿ ಯಾರು ಇರುವುದಿಲ್ಲ. ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿ ತೆರಳುತ್ತಾರೆ. ಸಂಬಂಳ ಮಾತ್ರ ಪಡೆಯಲು ಮುಂದೆ ಬರುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿಸಿದರು.

ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ ಗಳಿಗಿಂತ ಜನಸ್ನೇಹಿ ಆಗಬೇಕಿದ್ದ ಆರೋಗ್ಯ ಕೇಂದ್ರಗಳು ಇಂತಹ ಹಲವು ಸಮಸ್ಯೆಗಳು ಉಳ್ಬಣಗೊಂಡು ಜನರಿಂದ ದೂರವಾಗುತ್ತಿರುವುದು ಮಾತ್ರ ಸತ್ಯವಾಗಿದೆ.

ಆರೋಗ್ಯ ಸಿಬ್ಬಂದಿಗಳು  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಳಿಗ್ಗೆ 9:30 ಹಾಜರಾಗಬೇಕು. ಕೇಂದ್ರಗಳಲ್ಲಿ ನೈಟ್ ವೈದ್ಯರು ಇರುವುದಿಲ್ಲ. ರೋಗಿಗಳ ಅನುಕೂಲಕ್ಕಾಗಿ ಡ್ಯೂಟಿ ನರ್ಸ್ ಗಳು ಇರುತ್ತಾರೆ. ನ್ಯೂ ರಹಿಮತ್ ನಗರ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿರುವ ಸಮಸ್ಯೆದ ಕುರಿತು ಮಾಹಿತಿ ಪಡೆಯುತೇನೆ. – ಶಿವಶರಣಪ್ಪ ಗಂಜಳಖೇಡ್, ಜಿಲ್ಲಾ ಆರೋಗ್ಯ ಅಧಿಕಾರಿ

ಇಂತಹ ಹಲವು ಘಟನೆಗಳು ನಿಮ್ಮ ಪ್ರದೇಶದಲ್ಲಿ ಕಂಡುಬಂದಿರೆ ನಮಗೆ ಕಳುಹಿಸಿ. ಜಿಲ್ಲೆಯ ಆರೋಗ್ಯ ವವ್ಯಸ್ಥೆ ಸುಧಾರಣೆ ನಮ್ಮ ಅಭಿಯಾನಕ್ಕೆ ಕೈ ಜೋಡಿಸಿ.  ಇ-ಮೀಡಿಯಾ ಲೈನ್ ತಂಡ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here