ಸುರಪುರ: ಕಳೆದ ಕೆಲ ತಿಂಗಳುಗಳ ಹಿಂದೆ ಕೊರೊನಾ ಸೊಂಕಿನಿಂದ ಮೃತಪಟ್ಟ ತಾಲೂಕಿನ ವಿವಿಧ ಗ್ರಾಮಗಳ ಸಂತ್ರಸ್ತರ ಕುಟುಂಬಗಳಿಗೆ ಸರಕಾರದ ನೆರವಿನ ಚೆಕ್ ವಿತರಣೆ ಮಾಡಲಾಯಿತು.ನಗರದ ಶಾಸಕರ ಗೃಹ ಕಚೇರಿಯಲ್ಲಿ ಶುಕ್ರವಾರ ತಲಾ ೧ ಲಕ್ಷ ರೂಪಾಯಿಗಳ ಚೆಕ್ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ),ತಹಸೀಲ್ದಾರ ಸುಬ್ಬಣ್ಣ ಜಮಖಂಡಿ,ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಬಸನಗೌಡ ಹಳ್ಳಿಕೋಟಿ,ಭಿಮಾಶಂಕರ ಬಿಲ್ಲವ್,ಭೀಮಣ್ಣ ಬೇವಿನಾಳ,ದೇವರಾಜ ಮಕಾಶಿ,ಬಲಭೀಮ ನಾಯಕ ದೇವಾಪುರ ಸೇರಿದಂತೆ ಅನೇಕರಿದ್ದರು.