ಕಬ್ಬಡಿ ತಂಡಕ್ಕೆ ಗುತ್ತೇದಾರ ಪದವಿ ಕಾಲೇಜಿನ ಸುಧಾ ಆಯ್ಕೆ

0
16

ಆಳಂದ: ಪಟ್ಟಣದ ಎಸ್‌ಆರ್‌ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ವೆಂಕಯ್ಯ ಕೂಸಯ್ಯ ಗುತ್ತೇದಾರ ಪದವಿ ಕಾಲೇಜಿನ ವಿದ್ಯಾರ್ಥಿನಿ ಸುಧಾ ರಾಠೋಡ ಅಂತರ ವಿಶ್ವವಿದ್ಯಾಲಯಗಳ ಕಬ್ಬಡಿ ಪಂದ್ಯಾವಳಿಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಮಹಿಳಾ ಕಬ್ಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾಳೆ ಎಂದು ಕಾಲೇಜಿನ ಪ್ರಾಚಾರ್ಯ ಕಲ್ಯಾಣಿ ಸಾವಳಗಿ ತಿಳಿಸಿದ್ದಾರೆ.

ಡಿ. ೨೬ ರಿಂದ ೨೯ರ ವರೆಗೆ ಕೇರಳದ ಕಾರೈಕುಡಿಯ ಅಳಗಪ್ಪ ವಿಶ್ವವಿದ್ಯಾಲಯಲ್ಲಿ ಜರುಗಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಮಹಿಳಾ ಕಬ್ಬಡ್ಡಿ ತಂಡದಲ್ಲಿ ಗುಲ್ಬರ್ಗಾ ವಿವಿಯನ್ನು ವಿದ್ಯಾರ್ಥಿನಿ ಸುಧಾ ಪ್ರತಿನಿಧಿಸಲಿದ್ದಾಳೆ.

Contact Your\'s Advertisement; 9902492681

ವಿದ್ಯಾರ್ಥಿನಿಯ ಆಯ್ಕೆಗೆ ಸಂಸ್ಥೆಯ ಅಧ್ಯಕ್ಷರೂ ಹಾಗೂ ಶಾಸಕರಾದ ಸುಭಾಷ್ ಆರ್ ಗುತ್ತೇದಾರ, ಸಂಸ್ಥೆಯ ಕಾರ್ಯದರ್ಶಿ ಹರ್ಷಾನಂದ ಗುತ್ತೇದಾರ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here