ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ ತಾಲೂಕು ಘಟಕ ರಚನೆ

0
14

ಸುರಪುರ: ಜಯ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯ ಸುರಪುರ ತಾಲೂಕು ಘಟಕವನ್ನು ರಚನೆ ಮಾಡಲಾಗಿದೆ.ನಗರದ ಟೈಲರ್ ಮಂಜುಲ್‌ನಲ್ಲಿ ಸೋಮವಾರ ನಡೆದ ಸಭೆಯಲ್ಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನೋರ್ ಮಾತನಾಡಿ,ಇಂದು ರಾಜ್ಯದ ಮುಂಚುಣಿ ಸಂಘಟನೆಗಳಲ್ಲಿ ನಮ್ಮ ಜಯ ಕರ್ನಾಟಕ ರಕ್ಷಣಾ ಸೇನೆ ಇದೆ,ನಮ್ಮ ರಾಜ್ಯಾಧ್ಯಕ್ಷರಾದ ಕೆ.ಸಿ ರಾಜಪ್ಪನವರು ನಾಡು ನುಡಿ ನೆಲ ಜಲ ಗಡಿ ಭಾಷೆಗೆ ಧಕ್ಕೆ ಬಂದಾಗ ಮೊದಲು ಧ್ವನಿ ಎತ್ತುವ ಮೂಲಕ ಕನ್ನಡ ವಿರೋಧಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ.

Contact Your\'s Advertisement; 9902492681

ಇಂತಹ ಸಂಘಟನೆಯೂ ಈಗಾಗಲೇ ಜಿಲ್ಲಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಸಂಘಟನೆಯನ್ನು ಉದ್ಘಾಟಿಸಲಾಗಿದೆ,ಆದರೆ ಸುರಪುರ ತಾಲೂಕು ಘಟಕ ರಚನೆ ಸ್ವಲ್ಪ ವಿಳಂಬವಾಗಿದೆ,ಈಗ ತಾಲೂಕು ಅಧ್ಯಕ್ಷರನ್ನಾಗಿ ವೆಂಕಟೇಶ ಹವಲ್ದಾರ ಅವರನ್ನು ನೇಮಕಗೊಳಿಸಲಾಗಿದೆ.ಈ ಮುಂದೆ ತಾಲೂಕಿನಲ್ಲಿ ಸಂಘಟನೆಯನ್ನು ಬೆಳೆಸುವ ಜೊತೆಗೆ ನಾಡು ನುಡಿ ಗಡಿ ಭಾಷೆಯ ವಿಚಾರ ಬಂದಾಗ ಸದಾಕಾಲ ಹೋರಾಟಕ್ಕೆ ಮುಂದಾಗುವಂತೆ ಹಾಗು ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಸಂಘಟನೆಯನ್ನು ಕಟ್ಟುವಂತೆ ಕರೆ ನೀಡಿದರು.

ನಂತರ ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಆದೇಶ ಪತ್ರವನ್ನು ನೀಡಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರನ್ನಾಗಿ ಬಸವರಾಜ ನಾಯಕ,ಉಪಾಧ್ಯಕ್ಷರನ್ನಾಗಿ ರಾಮದೇವರು,ಚಂದ್ರು ಮಂಗಿಹಾಳ,ಪ್ರಧಾನ ಕಾರ್ಯದರ್ಶಿಯನ್ನಾಗಿ ಬಸವರಾಜ ಕವಡಿಮಟ್ಟಿ,ಖಜಾಂಚಿಯನ್ನಾಗಿ ಪರಶು ನಾಯಕ ಮಂಗಿಹಾಳ,ಸಂಘಟನಾ ಸಂಚಾಲಕರನ್ನಾಗಿ ಮಾನಶಪ್ಪ ಸಿದ್ದಾಪುರ,ಸಂಘಟನಾ ಕಾರ್ಯದರ್ಶಿಯನ್ನಾಗಿ ವೆಂಕಟೇಶ ಬಂಡಿ ಹಾಲಬಾವಿ,ಕಾರ್ಯದರ್ಶಿ ಮಹೇಶ ಹೆಮನೂರು,ಸಹ ಕಾರ್ಯದರ್ಶಿ ದೇವರಾಜ ಅರಳಳ್ಳಿ, ಸದಸ್ಯರು ಮುತ್ತಪ್ಪ ಕಕ್ಕೇರಾ,ಖಾಜಾ ಹುಸೇನ್ ಇವರನ್ನು ನೇಮಕಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here