ಅಂಗನವಾಡಿ ನೌಕರರ ಬೇಡಿಕೆಗಳಿಗಾಗಿ ಸಿಡಿಪಿಒ ಕಚೇರಿ ಮುಂದೆ ಪ್ರತಿಭಟನೆ

0
24

ಸುರಪುರ: ರಾಜ್ಯದಲ್ಲಿನ ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಮುಖಂಡರು ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಂಘದ ತಾಕೂಕು ಪ್ರಧಾನ ಕಾರ್ಯದರ್ಶಿ ಸುರೇಖಾ ಕುಲಕರ್ಣಿ ಮಾತನಾಡಿ,ಅಂಗನವಾಡಿ ನೌಕರರು ಕೊರೊನಾ ವಾರಿಯರ್ಸ್‌ಗಳಾಗಿ ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿದ್ದಾರೆ.ಇದರಿಂದ ೫೯ ಜನರು ಸಾವನ್ನಪ್ಪಿದ್ದು,೨೯೩ ಜನರು ಸೊಂಕಿನಿಂದ ಬಳಲಿದ್ದಾರೆ.

Contact Your\'s Advertisement; 9902492681

ಅನೇಕರು ಕುಟುಂಬದವರನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದಾರೆ.ಅಲ್ಲದೆ ಅಂಗನವಾಡಿ ನೌಕರರಿಗೆ ಇ-ಸರ್ವೇ,ಚುನಾವಣೆ ಕಾರ್ಯ,ವ್ಯಾಕ್ಸಿನ್ ಹಾಕುವುದು ಮತ್ತು ಅದರ ಸರ್ವೇಗಳು ಸೇರಿದಂತೆ ಅನೇಕ ಯೋಜನೆಗಳಲ್ಲಿ ಕೆಲಸ ಮಾಡುತ್ತೇವೆ.ಆದರೆ ಸರಕಾರ ಇದುವರೆಗೂ ಸಂಬಳವಾಗಲಿ ಬೇರೆ ಯಾವುದೇ ನೆರವು ನೀಡದೆ ವಂಚಿಸಿದೆ.ಇಂತಹ ಅನೇಕ ಬೇಡಿಕೆಗಳಿಗಾಗಿ ಜನೆವರಿ ೧೦ ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಮನೆ ಚಲೋ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

ನಂತರ ಶಿಶು ಅಭಿವೃಧ್ಧಿ ಯೋಜನಾಧಿಕಾರಿಗಳಿಗೆ ಬರೆದ ಮನವಿಯನ್ನು ಕಚೇರಿ ಸಿಬ್ಬಂದಿಗಳ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಬಸಮ್ಮ ಆಲ್ಹಾಳ,ಖಜಾಂಚಿ ರಾಧಾ ಲಕ್ಷ್ಮೀಪುರ,ಹುಣಸಗಿ ತಾಲೂಕು ಅಧ್ಯಕ್ಷ ನಸೀಮಾ ಮುದ್ನೂರು,ಫರವಿನ್ ಶರ್ಕಿಮೋಹಲ್ಲಾ,ಲಾವಣ್ಯವತಿ ಕೆ,ಬಸಮ್ಮ ಏವೂರು,ಅಂಜಳಮ್ಮ,ಗಿರಿಜಾ ಏವೂರು ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here