ಪೌಷ್ಟಿಕ ಆಹಾರ ಬಾಳೆಹಣ್ಣು ಮೊಟ್ಟೆ ಕೈಬಿಡಬೇಡಿ ಮಕ್ಕಳ ಕೂಟದ ಆಗ್ರಹ

0
21

ಜೇವರ್ಗಿ: ಕರ್ನಾಟಕ ರಾಜ್ಯದಲ್ಲಿ ಬಳಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ .ಹಾಗೂ ವೈಜ್ಞಾನಿಕವಾಗಿ ಮಕ್ಕಳ ಬುದ್ಧಿ ಹಾಗೂ ದೈಹಿಕವಾಗಿ ಅಭಿವೃದ್ಧಿಗೆ ಬಾಳೆಹಣ್ಣು ಹಾಗೂ ಮೊಟ್ಟೆ ವಿತರಿಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕೆಲವು ಮಠಾಧೀಶರು ಇದನ್ನು ಉರುಳಿಸುತ್ತಿದ್ದಾರೆ. ಮೊಟ್ಟೆ ವಿತರಣೆ ಬೇಡ ಎನ್ನುತ್ತಿರುವುದು ನಿಜವಾಗಿ ವಿಪರ್ಯಾಸದ ಸಂಗತಿ ಎಂದು ಸಾಮೂಹಿಕ ಸಂಘಟನೆಗಳ ಮಕ್ಕಳ ಕೂಟ ಒಕ್ಕೂಟದ ಸುಭಾಷ್ ಹೊಸಮನೆ ವಿಷಾದ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಈ ಕುರಿತಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಜೇವರ್ಗಿ ತಶಿಲ್ದಾರ್ ಅವರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು. ತಾಲೂಕಿನ ಮಹಿಳೆಯರು ಹಾಗೂ ಪ್ರಗತಿಪರ ದುಡಿಯುವ ಜನರು ಇದನ್ನು ಸ್ವಾಗತಿಸಿದ್ದಾರೆ ಸರಕಾರ ಇದನ್ನು ಮುಂದುವರೆಸಬೇಕು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆಯ ಸುಬಾಸ ಹೊಸಮನೆ, ಪರಶುರಾಮ ಬಡಿಗೇರ, ಜಯ ಭೀಮ್, ರೇವುನಾಯಕ್ ರೇವನೂರ್, ಮಹಿಳೆಯರು ಹಾಗೂ ವಿವಿಧ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here