ಸುರಪುರ: ಕಕ್ಕೇರಾ ಪುರಸಭೆ ವ್ಯಾಪ್ತಿಯ ವಾರ್ಡ ೧೧ ಗುಮೇದಾರ ದೊಡ್ಡಿಯ ಹಲವಾರು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸಿಬೇಕು ಹಾಗೂ ದಿನಬಳಕೆ ವಸ್ತಗಳ ದಿನಕಳದಂತೆ ದುಬಾರಿಯಾಗುತ್ತಿವೆ ಈ ಕುರಿತು ಜನರಿಗೆ ಮನವರಿಕೆ ಮಾಡಿ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಲು ಮನವೂಲಿಸಬೇಕು ಹಾಗೂ ಮುಂದೆ ಎಲ್ಲರು ಒಗಟ್ಟಗಿನಿಂದ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಿ ಮುಂಬರುವ ಎಲ್ಲ ಚುನಾವಣೆಗಳನ್ನು ಗೆಲ್ಲಿಸಲು ಶ್ರವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಂದ್ರಾಮಪ್ಪ ಗುಮೇದಾರ, ದಶರಥ , ನಾಗರಾಜ , ಅಂಬ್ರೇಶ , ಲಕ್ಷ್ಮಣ , ನಂದಪ್ಪ , ಮುದುಕಪ್ಪ , ಮಹಿಬೂಬು ಸಾಬ ಧಖನಿ, ರಫೀಕ ಹಸನಸಾಬ ಇನ್ನಿತರರು ಸೇರ್ಪಡೆಯಾದರು.
ವೆಂಕೋಬಯಾದವ, ಗುಂಡಪ್ಪ ಸೊಲ್ಲಾಪುರ, ಬುಚ್ಚಪ್ಪ ನಾಯಕ, ಬಸ್ಸಯ್ಯ ಸ್ವಾಮಿ, ಅಯ್ಯಪ್ಪ ಗುಮೇದಾರ, ಜೆಟ್ಟೆಪ್ಪ ದಳಾರ ಇನ್ನಿತರರು ಉಪಸ್ಥಿತರಿದ್ದರು.