ಬೆಳಗಾವಿ ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸಕ್ಕೆ ಸುರಪುರದಲ್ಲಿ ಪ್ರತಿಭಟನೆ

0
23

ಸುರಪುರ: ಬೆಳಗಾವಿ ಜಿಲ್ಲೆಯ ಅನಗೋಳದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ಸುರಪುರದಲ್ಲಿ ಸಂಗೊಳ್ಳಿ ರಾಯಣ್ಣ ಯುವ ಸೇನೆ,ಜಯಕರ್ನಾಟಕ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿದೆ.

ನಗರದ ಹಳೆ ಬಸ್ ನಿಲ್ದಾಣದ ಬಳಿಯ ಶ್ರೀ ಮಹರ್ಷೀ ವಾಲ್ಮೀಕಿ ವೃತ್ತದಿಂದ ನೂರಾರು ಸಂಖ್ಯೆಯ ಪ್ರತಿಭಟನಾಕಾರರು ದರಬಾರ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಎಮ್‌ಇಎಸ್ ಮತ್ತು ಶಿವಸೇನೆ ಸಂಘಟನೆಗಳ ವಿರುಧ್ಧ ಘೋಷಣೆಗಳನ್ನು ಕೂಗಿದರು.

Contact Your\'s Advertisement; 9902492681

ನಂತರ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಹೋರಾಟಗಾರರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ,ಈ ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ತಮ್ಮ ಪ್ರಾಣ ಬಲಿದಾನಗೈದ ಮಹಾನ್ ಪುರುಷ ಸಂಗೊಳ್ಳಿ ರಾಯಣ್ಣನವರು.ಅಂತಹ ಮಹಾನ್ ವ್ಯಕ್ತಿಯ ಮೂರ್ತಿಯನ್ನು ಮಹಾರಾಷ್ಟ್ರದ ಗೂಂಡಾಗಳು ಧ್ವಂಸಗೊಳಿಸುವ ನಾಡದ್ರೋಹಿ ಕೃತ್ಯ ಎಸಗಿದ್ದಾರೆ.

ಅಲ್ಲದೆ ಕೊಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಸುಟ್ಟಿರುವುದು ಮತ್ತು ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್‌ಗಳ ಮೇಲೆ ಕಲ್ಲೆಸೆದಿರುವುದು ಮತ್ತು ಬೆಳಗಾವಿ ಭಾಗದಲ್ಲಿ ವಿಶ್ವಗುರು ಬಸವಣ್ಣನವರ ನಾಮಫಲಕಕ್ಕೆ ಅವಮಾನಿಸುವ ಮೂಲಕ ಕಿಡಿಗೇಡಿತನವನ್ನು ತೋರುತ್ತಿದ್ದಾರೆ. ಆದ್ದರಿಂದ ಅನೇಕ ವರ್ಷಗಳಿಂದ ನಾಡದ್ರೋಹಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಸಂಘಟನಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು ಹಾಗು ಸಂಗೊಳ್ಳಿ ರಾಯಣ್ಣನ ಮೂರ್ತಿ ಧ್ವಂಸಗೊಳಿಸಿದ ಹಾಗು ಬಸವಣ್ಣನವರ ನಾಮಫಲಕಕ್ಕೆ ಅವಮಾನಗೊಳಿಸಿದ ಗೂಂಡಾಗಳನ್ನು ಪತ್ತೆ ಮಾಡಿ ಗಡಿಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ರಂಗನಗೌಡ ಪಾಟೀಲ್ ದೇವಿಕೇರಾ,ರವಿಕುಮಾರ ನಾಯಕ ಬೈರಿಮಡ್ಡಿ,ರವಿಚಂದ್ರ ಆನಂದ ಸಾಹುಕಾರ,ಯಲ್ಲಪ್ಪ ಕಬಾಡಗೇರಾ,ಭಿಮರಾಯ ಮೂಲಿಮನಿ,ಸಿದ್ರಾಮ ಎಲಿಗಾರ,ಕಾಳಪ್ಪ ಕವಾತಿ,ನಿಂಗು ಐಕೂಡ,ಅನಿಲಗೌಡ,ಯಲ್ಲಪ್ಪ ಕಲ್ಲೋಡಿ,ವಾಸು ಕೆಂಗೂರಿ,ಪರಶುರಾಮ ಯಳಿಮೇಲಿ,ಮಾನಯ್ಯ ನಾಗರಾಳ,ವೆಂಕಟೇಶ ಕೊಳ್ಳಿ,ಬೀರಲಿಂಗ ಮಗ್ಗದ್,ಚಂದ್ರು ಎಲಿಗಾರ,ಜೆಟ್ಟೆಪ್ಪ ಸಾಹುಕಾರ,ಕೃಷ್ಣಾ ಬಾದ್ಯಾಪುರ,ಭೀಮರಾಯ ಪೂಜಾರಿ,ಜುಮ್ಮಣ್ಣ ಕೆಂಗೂರಿ,ರಾಜು ಕಟ್ಟಿಮನಿ,ಭೀಮು ಐಕೂರ,ತಿರುಪತಿ ದೇವತ್ಕಲ್,ಮಲ್ಲಣ್ಣ ಹುಬ್ಬಳ್ಳಿ,ಚನ್ನಪ್ಪ ಎಲಿಗಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here