ಅನಧಿಕೃತ ನೀರಿನ ಘಟಕಗಳ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹ

0
52

ಶಹಾಬಾದ: ಅನಧಿಕೃತ ನೀರಿನ ಘಟಕಗಳ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಜೆಸ್ಕಾಂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಅಫರೋಜ ನೀರು ಶುದ್ಧಿಕರಣ ಘಟಕದ ವತಿಯಿಂದ ಜೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಲಾಯಿತು.

ಅಫರೋಜ ಶುದ್ಧಿಕರಣ ಘಟಕದ ಮಾಲೀಕರಾದ ಶೇಖ ಬಾಬು ಉಸ್ಮಾನ (ಗೋವಾ ಬಾಬು)ಮಾತನಾಡಿ, ನಗರದಲ್ಲಿ ಅನಧಿಕೃತ ನೀರಿನ ಘಟಕಗಳು ತಲೆ ಎತ್ತಿವೆ.ಅಲ್ಲದೇ ಸರ್ಕಾರದಿಂದ ಮಾನ್ಯತೆಯಿಲ್ಲದೇ ಕಾರ್ಯಕನಿರ್ವಹಿಸುತ್ತಿವೆ.ಈ ಬಗ್ಗೆ ಕ್ರಮಕೈಗೊಳ್ಳಬೇಕಾದ ಅಧಿಕಾರಿ ವರ್ಗದವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಅಲ್ಲದೇ ಈ ಬಗ್ಗೆ ಅನೇಕ ಬಾರಿ ದೂರು ಸಲ್ಲಿಸಿದರೂ ನಗರಸಭೆಯ ಹಾಗೂ ಜೆಸ್ಕಾಂ ಅಧಿಕಾರಿಗಳು ಒಬ್ಬರ ಮೇಲೆ ಇನ್ನೊಬ್ಬರು ಹಾಕಿ ಕೈತೊಳೆದುಕೊಳ್ಳುತ್ತಿದ್ದಾರೆ ಹೊರತು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.

Contact Your\'s Advertisement; 9902492681

ಅಲ್ಲದೇ ಮಾನ್ಯತೆ ಪಡೆದ ನಾವು ಐಎಸ್‌ಐ ಮಾನ್ಯತೆ ಪಡೆದುಕೊಳ್ಳಲು ಸಾಕಷ್ಟು ಹಣ ವ್ಯಯಿಸಿದ್ದೆವೆ.ತಿಂಗಳಾದರೆ ತೆರಿಗೆ ಕಟ್ಟಬೇಕು.ಆದರೆ ಈ ಮಧ್ಯೆ ಯಾವುದೇ ಮಾನ್ಯತೆ ಪಡೆಯದೇ, ತೆರಿಗೆ ನೀಡದೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅನಧಿಕೃತ ಘಟಕಗಳು ಕಾರ್ಯನಿರ್ವಹಿಸುತ್ತಿದ್ದರೂ ಅಧಿಕಾರಿ ವರ್ಗ ಮೌನ ವಹಿಸಿರುವುದು ಗೊತ್ತಾಗುತ್ತಿಲ್ಲ.ಕೂಡಲೇ ಕ್ರಮಕೈಗೊಳ್ಳದಿದ್ದರೇ ಇನ್ನೂ ಉಗ್ರವಾದ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ತಹಸೀಲ್ದಾರ ಸುರೇಶ ವರ್ಮಾ ಹಾಗೂ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಿವಶಾಲ ಪಟ್ಟಣಕರ,ಆಂಜನೆಯ ಕುಸಾಳೆ,ಪುನೀತ ಹಳ್ಳಿ,ಕಿರಣ ಜಿಡಗಿಕರ, ಮರಲಿಂಗ ಗಡೆಸೂಗೂರ, ಶಿವನಾಗ,ಶರಣು ತಲವಾರ, ಶೆಕ ಸುಫಿಯಾನ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here