ಒಂದೇ ಕುಟುಂಬದ ಪತಿ-ಪತ್ನಿ ಇಬ್ಬರು ಸಾವು: ಕೋಲಿ ಸಮಾಜದ ನಿಯೋಗ ಭೇಟಿ

0
119

ಕಲಬುರಗಿ: ಒಂದೇ ಕುಟುಂಬದ ಪತಿ-ಪತ್ನಿ ಇಬ್ಬರು ಸಾವು: ಕೋಲಿ ಸಮಾಜದ ನಿಯೋಗ ಭೇಟಿ ಮಾಡಿ ಸಾಂತ್ವನ ಹೇಳಿದರು.

ಜೇವರ್ಗಿ ತಾಲೂಕಿನ ಕೋನ ಇಪ್ಪರಗಾ ಗ್ರಾಮದಲ್ಲಿ ಬಡ ಕೋಲಿ ಸಮಾಜದ ಶಿವಶರಣಪ್ಪ ಹಾಗೂ ಗುಂಡಮ್ಮ ಪತಿ-ಪತ್ನಿ ಇಬ್ಬರು ಕಲಬುರಗಿ ಇಂದ ತಮ್ಮ ಊರಿಗೆ ಹೋಗುವ ಸಂದರ್ಭದಲ್ಲಿ ಪಾರ್ಥ ಬಾದ್ ಹತ್ತಿರ ಇರುವ ಗಣೇಶ್ ಪೆಟ್ರೋಲ್ ಪಂಪ್ ಹತ್ತಿರ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ  19 ರಂದು ಹಿಂದುಗಡೆಯಿಂದ ಬಂದ ಯಲಗೋಡ ಶ್ರೀಗಳ ವಾಹನ ಡಿಕ್ಕಿ ಹೊಡೆದು ದುರ್ಮರಣಕ್ಕೀಡಾದ ಕುಟುಂಬಕ್ಕೆ ಕೂಲಿ ಸಮಾಜದ ಭೇಟಿ ನೀಡಿದ ನಿಯೋಗ ಕೋಲಿ ಸಮಾಜದ ಹಿರಿಯ ಮುಖಂಡರಾದ ಶಿವಲಿಂಗಪ್ಪ ಕಿನ್ನೂರು ಸಾಂತ್ವನ ಹೇಳಿ ಧೈರ್ಯ ತುಂಬಿದರು ಈ ಸಂದರ್ಭದಲ್ಲಿ ಸ್ವಾಮೀಜಿಗಳ ಅಚಾತುರ್ಯದಿಂದ ಈ ದುರ್ಘಟನೆ ನಡೆದಿದೆ ಕೂಡಲೇ ಬಡಕುಟುಂಬಕ್ಕೆ ಭೇಟಿ ನೀಡಿ ಆರ್ಥಿಕ ನೆರವು ನೀಡಬೇಕು ಮತ್ತು ಕುಟುಂಬಕ್ಕೆ ಸ್ವಾಮಿ ಸಾಂತ್ವಾನ ಹೇಳಬೇಕು ಇದನ್ನು ಮಾಡದೇ ಹೋದರೆ ಸ್ವಾಮೀಜಿಗಳ ವಿರುದ್ಧ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Contact Your\'s Advertisement; 9902492681

ಕುಟುಂಬಸ್ಥರಿಗೆ ಇಲ್ಲಿವರೆಗೆ ಯಾವುದೇ ರಾಜಕೀಯ ‌ಮುಖಂಡರಾಗಲಿ, ಜನಪ್ರತಿನಿಧಿಗಳಾಗಲಿ, ಶಾಸಕರಾಗಲಿ ,ಸಂಸದರಾಗಲಿ ಕನಿಷ್ಠ ಜಿಲ್ಲಾ ಪಂಚಾಯತ್ ಸದಸ್ಯರಾಗಲಿ ಯಾರು ಕೂಡ ಮೃತರ ಕುಟುಂಬಕ್ಕೆ ಸ್ವಂತಾನ ಹೇಳುವ ಕೆಲಸ ಮಾಡಿಲ್ಲ ಸಮಾಜವೇ ನಮ್ಮ ಜೀವಾಳ ಎಂದು ವೇದಿಕೆ ಮೇಲೆ ಅಬ್ಬರಿಸುವ ರಾಜಕೀಯ ಮುಖಂಡರು ಭೇಟಿ ನೀಡದೆ ಇರುವದು ವಿಪರ್ಯಾಸವೆ ಸರಿ. ಘಟನೆ ನಡೆದು ಒಂದು ತಿಂಗಳಾದರೂ ಇಲ್ಲಿಯವರೆಗೂ ಯಲಗೋಡ ಸ್ವಾಮೀಜಿಗಳು ಕೂಡ ಕುಟುಂಬಕ್ಕೆ ಸಂತಾನ ಹೇಳಿಲ್ಲ ಸೂಕ್ತ ಪರಿಹಾರ ಬಗ್ಗೆ ಮಾತನಾಡಿಲ್ಲ ಎಂದು ಭೇಟಿ ನೀಡಿದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಬಂದಾಗ ಕೋಲಿ ಸಮಾಜ ಮತ್ತು ಕೋಲಿ ಸಮಾಜದ ಜನರನ್ನು ನೆನಪು ಮಾಡಿಕೋಳುವ ಕೆಲ ಭ್ರಷ್ಟ ಕಲಬುರಗಿ ರಾಜಕೀಯ ಮುಖಂಡರು ಕೋಲಿ ಸಮಾಜದ ಜನ ಕಷ್ಟ ಅನುಭವಿಸುವಾಗ ನೆನಪಾಗುವುದಿಲ್ಲ ಎಂದು ಕೋಲಿ ಸಮಾಜ ಯುವ ಮುಖಂಡರಾದ ದೇವೆಂದ್ರ ಚಿಗರಹಳ್ಳಿ ಕಲಬುರಗಿ ಜಿಲ್ಲೆ ರಾಜಕೀಯ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ಕೋಲಿ ಸಮಾಜದ ಮುಖಂಡರು ಕೂಡಲೇ ಎಚ್ಚೆತ್ತುಕೊಂಡು ಬಡ ಕೋಲಿ ಸಮಾಜದ ಕುಟುಂಬಕ್ಕೆ ಸೂಕ್ತ ನ್ಯಾಯ ಹಾಗೂ ಪರಿಹಾರ ಒದಗಿಸಿ ಕೊಡುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆ ಸಮಾಜದ ಹೋರಾಟಗಾರರು ಚಿಂತಕರು ಹಿರಿಯ ಮುಖಂಡರು ಬಡ ಕೂಲಿ ಮಾಡಿ ಬದುಕುವ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಯುವ ಮುಖಂಡರಾದ ದೇವೇಂದ್ರ ಚಿಗರಹಳ್ಳಿ, ಬಸವರಾಜ್ ಮುಕಾ, ಚಂದ್ರಶೇಖರ್ ಫಿರೋಜಾಬಾದ್, ಅನಿಲ್ ಕಾಮಣ್ಣ ವಚ , ಚಂದ್ರಶೇಖರ್ ಜಮಾದಾರ್, ಮಾಂತೇಶ ಅವರಾದಿ ಇದ್ದರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here