ವಿವಿಧೆಡೆ ನಡೆಯುವ ಕುರಿ ಕೋಣ ಬಲಿ ತಡೆಯಿರಿ: ಕ್ರಾಂತಿ

0
20

ಸುರಪುರ:ತಾಲೂಕಿನ ವಿವಿಧ ಗ್ರಾಮಗಳಲ್ಲಿ ದೇವರ ಹೆಸರಲ್ಲಿ ಕುರಿ ಕೋಣಗಳ ಬಲಿಯನ್ನು ಯಥೇಚ್ಛವಾಗಿ ನೀಡಲಾಗುತ್ತದೆ,ಆದ್ದರಿಂದ ಇದನ್ನು ತಡೆಯುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ತಿಳಿಸಿದರು.

ಭಾನುವಾರ ಬೆಳಿಗ್ಗೆ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಡಿವೈಎಸ್ಪಿ ಡಾ:ದೇವರಾಜ ಬಿ ಅವರನ್ನು ಭೆಟಿ ಮಾಡಿದ ಅನೇಕ ಮುಖಂಡರು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು,ಕುರಿ ಕೋಣಗಳನ್ನು ಸಾರ್ವಜನಿಕವಾಗಿ ಬಲಿ ನೀಡಬಾರದೆಂದು ಕಾನೂನು ಹೇಳುತ್ತದೆ ಆದರೆ ಗ್ರಾಮೀಣ ಭಾಗದಲ್ಲಿ ದೇವಮ್ಮ ಕೆಂಚಮ್ಮ ಮರಗಮ್ಮನ ಹೆಸರಲ್ಲಿ ಕುರಿ ಕೋಣಗಳನ್ನು ಬಲಿ ನೀಡಲಾಗುತ್ತದೆ.

Contact Your\'s Advertisement; 9902492681

ಈಗ ಸೋಮವಾರ ರಾತ್ರಿ ಮಾಲಗತ್ತಿ ಗ್ರಾಮದಲ್ಲಿ ಮತ್ತು ಬಾದ್ಯಾಪುರ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆ ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ಬಲಿಯನ್ನು ನೀಡುವ ಸಾಧ್ಯತೆ ಹೆಚ್ಚಾಗಿದೆ.ಆದ್ದರಿಂದ ತಾವುಗಳು ಈ ಗ್ರಾಮಗಳು ಸೇರಿದಂತೆ ಗ್ರಾಮ ದೇವತೆ ಜಾತ್ರೆ ಆಚರಣೆ ಮಾಡುವ ಗ್ರಾಮಗಳಲ್ಲಿ ನಡೆಯಲಿರುವ ಕುರಿ ಕೋಣ ಬಲಿಯನ್ನು ತಡೆಯಲು ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು,ಆಯಾ ಗ್ರಾಮಗಳಲ್ಲಿನ ನಮ್ಮ ಸಂಘಟನೆಯ ಕಾರ್ಯಕರ್ತರು ಫೋಟೊ ವೀಡಿಯೋಗಳನ್ನು ಹಾಕಲಿದ್ದು ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಮನವಿಯನ್ನು ಸ್ವೀಕರಿಸಿದ ಡಿವೈಎಸ್ಪಿ ಡಾ:ದೇವರಾಜ್ ಅವರು ನಿಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮಗಳಲ್ಲಿ ನಡೆಯುವ ಕುರಿ ಕೋಣ ಬಲಿಯನ್ನು ತಡೆಯಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಕುರಕುಂದಿ,ಮಹಾದೇವಪ್ಪ ಬಿಜಾಸಪುರ,ಮಾನಪ್ಪ ಬಿಜಾಸಪುರ,ಖಾಜಾ ಹುಸೇನ್ ಗುಡಗುಂಟಿ,ಹುಲಗಪ್ಪ ಜಾಂಗೀರ ಶೆಳ್ಳಗಿ,ದುರ್ಗಪ್ಪ ಅರಳಳ್ಳಿ,ಭೀಮಪ್ಪ ಲಕ್ಷ್ಮೀಪುರ,ಶಿವಪ್ಪ ಅಮ್ಮಾಪುರ,ಬಸವರಾಜ ಬೋನಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here