ಕಲಬುರಗಿಯಲ್ಲಿ ಪ್ರಥಮ ವ್ಯಾಸ್ಕೂಲರ್ ಕ್ಲಿನಕ್‍ಗೆ ಚಾಲನೆ

0
113

ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾದ ಕಲಬುರಗಿ ಜಿಲ್ಲೆ ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರದ ಹಬ್ ಆಗಿ ಪರಿವರ್ತನೆಯಾಗುತ್ತಿದೆ. ರಕ್ತನಾಳಗಳಿಗೆ ಸಂಬಂಧಿಸದಂತೆ ತೊಂದರೆ ಉಂಟಾದಾಗ ದೂರದ ಸ್ಥಳಗಳಾದ ಬೆಂಗಳುರು ಅಥವಾ ಹೈದ್ರಾಬಾದ್‍ಗೆ ತೆರಳಿ ಚಿಕಿತ್ಸೆ ಪಡೆಯಬೇಕಾಗಿತ್ತು.

ಜಿಲ್ಲೆಯಲ್ಲಿ ಡಾ.ವಿಶಾಲ್ ವಿ.ಹುಡಗಿ ಅವರು ಆರಂಭಿಸಿರುವÀ ವ್ಯಾಸ್ಕೂಲರ್ ಕ್ಲಿನಿಕ್‍ನ ಮೂಲಕ ನಮ್ಮ ಜಿಲ್ಲೆ ವೈದ್ಯಕೀಯ ಕ್ಷೇತ್ರದಲ್ಲಿ ಅಮೋಘ ಸಾಧನೆಯತ್ತ ಸಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಶಾಸಕ ಹಾಗೂ ಕೆಕೆಆರ್‍ಡಿಬಿ ಅಧ್ಯಕ್ಷರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ ಹೇಳಿದರು.

Contact Your\'s Advertisement; 9902492681

ನಗರದ ಗಾಜಿಪುರ ಬಡಾವಣೆ ವಿಜಯ ಲಾಡ್ಜ್ ಸಮೀಪ ನೂತನವಾಗಿ ಆರಂಭಿಸಲಾದ ಜಿಲ್ಲೆಯ ಪ್ರಥಮ ವ್ಯಾಸ್ಕೂಲರ್ ಕ್ಲಿನಿಕ್‍ಗೆ ಸೋಮವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಡಾ.ವಿಶಾಲ್ ವಿ.ಹುಡಗಿ ಅವರು ಈ ಕ್ಷೇತ್ರದಲ್ಲಿ ವಿಶೇಷ ಪರಿಣಿತಿಯನ್ನು ಪಡೆದಿದ್ದಾರೆ. ಅವರು ಮೆಟ್ರೋಪಾಲಿಟಿನ್ ನಗರಗಳಲ್ಲಿ ತಮ್ಮ ಕ್ಲಿನಿಕ್ ಆರಂಭಿಸಿ ಸಾಕಷ್ಟು ಸಂಪಾದಿಸಬಹುದಿತ್ತು. ಆದರೆ ನಮ್ಮ ಭಾಗದ ಜನರಿಗೆ ವ್ಯಾಸ್ಕೂಲರ್ ಆಸ್ಪತ್ರೆಯ ಅವಶ್ಯಕತೆಯನ್ನು ಅರಿತು ಅದನ್ನು ಆರಂಭಿಸುವ ಮೂಲಕ ಜಿಲ್ಲೆ ಹಾಗೂ ಸುತ್ತ-ಮುತ್ತಲಿನ ಜಿಲ್ಲೆಗಳ ಜನರಿಗೆ ಅನಕೂಲ ಮಾಡಿಕೊಟ್ಟಿರುವುದಕ್ಕೆ ಅಭಿನಂದನಾರ್ಹರು. ನಾಳಗಳಿಗೆ ಸಂಬಂಧಿಸಿದ ತೊಂದರೆಯಿದ್ದವರು ಇದರ ಸದುಪಯೋಗವನ್ನು ಮಾಡಿಕೊಳ್ಳಲು ಸಲಹೆ ನೀಡಿದರು.

ಕ್ಲಿನಿಕ್ ಮುಖ್ಯಸ್ಥ ಡಾ.ವಿಶಾಲ್ ವಿ.ಹುಡಗಿ ಮಾತನಾಡಿ, ವ್ಯಾರಿಕೋಸ್ ವೇನ್ಸ್, ಕೈ-ಕಾಲು ಗ್ಯಾಂಗೀನ್‍ಗಾಗಿ ಆಂಜಿಯೋಪ್ಲ್ಯಾಸ್ಟಿ/ಸ್ಟೆಂಟಿಂಗ್, ಕಾಲಿನ ಗ್ಯಾಂಗ್ರಿನ್‍ಗಾಗಿ ಬೈಪಾಸ್ ಸರ್ಜರಿ, ಡಯಾಬಿಟಿಕ್ ಪೂಟ್ ಅಲ್ಸರ್, ಡಯಾಲಿಸ್‍ಗಾಗಿ ಎಲ್ಲಾ ಶಸ್ತ್ರಚಿಕಿತ್ಸೆಗಳು, ರಕ್ತನಾಳ ವಿರೂಪತೆ ಮತ್ತು ಹೆಪ್ಪುಗಟ್ಟುವಿಕೆಯ ಚಿಕಿತ್ಸೆ ನಮ್ಮ ಕ್ಲಿನಿಕ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ವಿವರ ನೀಡಿದರು.

ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ವೈದ್ಯ ದಂಪತಿಗಳಿಗೆ ಸತ್ಕರಿಸಿ ಗೌರವಿಸಲಾಯಿತು. ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ಡಾ.ಅಜಯಸಿಂಗ್, ಹೈ.ಕ.ಶಿ. ಸಂಸ್ಥೆ ಅಧ್ಯಕ್ಷರಾದ ಡಾ.ಭೀಮಾಶಂಕರ ಬಿಲಗುಂದಿ, ಮುಖಂಡರಾದ ಅಪ್ಪು ಕಣಕಿ, ವಿಜಯಕುಮಾರ ಸೇವಾಲಾನಿ, ಪ್ರಮುಖರಾದ ಎಚ್.ಬಿ.ಪಾಟೀಲ, ಸುನೀಲಕುಮಾರ ವಂಟಿ, ಬಸವರಾಜ ಹೆಳವರ ಯಾಳಗಿ, ಸೂರ್ಯಕಾಂತ ಸಾವಳಗಿ, ವಿನೋದ ಪಡನೂರ್, ಶ್ರೀನಿವಾಸ ಬುಜ್ಜಿ, ವೀರಪ್ಪ ಹುಡಗಿ, ಗೀತಾ ವಿ.ಹುಡಗಿ, ಡಾ.ಸಂಧ್ಯಾ, ಡಾ.ವಿನೋದ, ಡಾ.ಪ್ರಶಾಂತ, ಡಾ.ಲಕ್ಷ್ಮೀ, ಡಾ.ಪ್ರಿಯಾಂಕಾ, ವೀರೇಶ ದಂಡೋತಿ, ನಾಗೇಂದ್ರ ಕಲ್ಯಾಣಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here