ಕುವೆಂಪುರವರು  ಈ ಶತಮಾನದ ಗಟ್ಟಿ ಸಾಹಿತ್ಯದ ಯುಗಪ್ರವರ್ತಕ ಕವಿ: ಪ್ರೊ. ಅಷ್ಠಗಿ

0
14

ಕಲಬುರಗಿ: ‘ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು’ ಎಂದು ಹೇಳಿದ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಕೇಳಿದರೆ ಪ್ರತಿ ಕನ್ನಡಿಗನ ಮನವು ಸಂತಸಗೋಳ್ಳುವುದು, ಏಕೆಂದರೆ  ಅವರು ಈ ಶತಮಾನದ ಯುಗಪ್ರವರ್ತಕ ಕವಿಯಾಗಿದ್ದು, ಕೇವಲ ಕನ್ನಡದ ಸಾಹಿತ್ಯವಷ್ಟೆ ಅಲ್ಲದೆ ಭಾರತೀಯ ಸಾಹಿತ್ಯ ಲೋಕದ ಉಸಿರು ಎಂದು ಕಲಬುರಗಿಯ ಚಿಂತಕ-ಲೇಖಕ  ಪ್ರೊ.ಯಶವಂತರಾಯ್ ಅಷ್ಠಗಿ ಯವರು ಅಭಿಪ್ರಾಯಪಟ್ಟರು.

ನಗರದ  ಎಂ ಎ ಟೆಂಗಳಿಕರ್ ಮಹಾವಿದ್ಯಾಲಯದಲ್ಲಿ, ಮಹಾವಿದ್ಯಾಲಯ ಹಾಗೂ ಕನ್ನಡಿಗರ ಸೇವಾದಳ-ಕರ್ನಾಟಕ  ಸಂಘಟನೆಯು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ರಾಷ್ಟ್ರಕವಿ ಕುವೆಂಪು ಅವರ 117ನೇ ಜನ್ಮದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ.ಅಷ್ಠಗಿ ವಿಶ್ವಮಾನವ ಸಂದೇಶ ನೀಡಿದ ಮಹಾಕವಿ ಕುವೆಂಪು ಅವರ ಸರಳ ಜೀವನ ಸರ್ವರಿಗೂ ಮಾದರಿಯಾಗಿದ್ದು, ಮಹಾಕವಿ  ಕುವೆಂಪುರವರು ಸಾಹಿತ್ಯ ಲೋಕಕ್ಕೆ ವಿಶೇಷವಾಗಿ  ನವೋದಯ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಅವರ  ಕಾದಂಬರಿಗಳು, ವಿಮರ್ಶೆ,ಕಾವ್ಯ ಮೀಮಾಂಸೆ-ಆತ್ಮಕಥನ,  ಶಿಶುಸಾಹಿತ್ಯ ಹೀಗೆ ಎಲ್ಲ ಪ್ರಕಾರಗಳಲ್ಲೂ ಕುವೆಂಪುರವರ ಸಾಹಿತ್ಯ ಸೇವೆ ಕಾಣಬಹುದು.

Contact Your\'s Advertisement; 9902492681

ಶ್ರೀರಾಮಾಯಣ ದರ್ಶನಂ ಮಹಾಕಾವ್ಯವೂ ಸೇರಿ 30ಕ್ಕೂ ಹೆಚ್ಚು  ಅವರ ಕಾವ್ಯ ಕೃತಿಗಳು ಪ್ರಸಿದ್ಧವಾಗಿವೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಕುವೆಂಪುರವರು ಬಾಲ್ಯದಲ್ಲಿಯೇ ಸಾಹಿತ್ಯದ ಸಹವಾಸ ಮಾಡಿದರು, ಮುಂದೆ ಅದೇ ಅವರನ್ನು ರಾಷ್ಟ್ರಕವಿಯನ್ನಾಗಿಸಿತು ಎಂದು ಪ್ರೊ. ಅಷ್ಠಗಿ ವ್ಯಾಖ್ಯಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಕಾರ್ಯದರ್ಶಿಗಳಾದ ಶ್ರೀಲಕ್ಷ್ಮಿ ಶುಭವರ್ಧನ ಟೆಂಗಳಿಕರ ಅವರು ವಹಿಸಿದ್ದರು, ಕಾಲೇಜಿನ ಪ್ರಾಂಶುಪಾಲರಾದ ಶಿವಕುಮಾರ ನಿರುಪಿಸಿದರು. ಕಾಲೇಜಿನ ಉಪನ್ಯಾಸಕ  ಮಂಜುನಾಥ  ವಂದಿಸಿದರು.

ಕನ್ನಡಿಗರ ಸೇವಾದಳ-ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ  ಶರಣು ಬಡಿಗೇರ, ವಿಭಾಗೀಯ ಅಧ್ಯಕ್ಷರಾದ  ಶಾಂತಕುಮಾರ ಧರ್ಮಾಪುರ ಮಾತನಾಡಿದರು. ಜಿಲ್ಲಾಧ್ಯಕ್ಷ ಪೃಥ್ವಿರಾಜ ರಾಂಪೂರ, ವಿಭಾಗೀಯ ಕಾರ್ಯಾಧ್ಯಕ್ಷ  ಆಕಾಶ ಹಳಕಟ್ಟಿ, ವೇದಿಕೆಯ ಮೇಲೆ ಇದ್ದರು. ವಿಧ್ಯಾರ್ಥಿಗಳು ಕುವೆಂಪುರವರ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಶರಣು ಜಾನೆ,ಕಿರಣ ತಳವಾರ ಹಾಗೂ ಕಾಲೇಜಿನ ಉಪನ್ಯಾಸಕರಾದ ಕವಿತಾ, ಜಯಶ್ರೀ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here