ಶಹಾಬಾದ: ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಸಿ.ಎ.ಇಂಗಿನಶೆಟ್ಟಿ , ಮರಗೋಳ ಕಾಲೇಜು ಹಾಗೂ ಮಿನಿ ರೋಸ್ ಶಾಲೆಯ ಮಕ್ಕಳಿಗೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಅಜೀಮ ಪ್ರೇಮಜಿ ಫೌಂಡೇಶನ ಮತ್ತು ಮಾರ್ಗದರ್ಶಿ ಸಂಸ್ಥೆ ಹಾಗೂ ಸಹರಾ ಸಂಯುಕ್ತಾಶ್ರಯದಲ್ಲಿ ೧೫ರಿಂದ ೧೮ ವ?ದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡುವ ಮಹಾಭಿಯಾನ ಸೋಮವಾರ ನಡೆಸಲಾಯಿತು.
ಈ ಸಂದರ್ಭದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ನಗರಸಭೆಯ ಪೌರಾಯುಕ್ತೆ ಅಂಜಲಿ ಗಿರೀಶ ಕಂಬಾನೂರ, ಕೋವಿಡ್‌ನಿಂದ ಮಕ್ಕಳಿಗೆ ರಕ್ಷಣೆ ನೀಡುವ ಮಹತ್ವದ ಕ್ರಮದ ಭಾಗವಾಗಿ ರಾಜ್ಯಾದ್ಯಂತ ಸೋಮವಾರದಿಂದ ೧೫ರಿಂದ ೧೮ ವ?ದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡುವ ಮಹಾಭಿಯಾನ ನಡೆಯುತ್ತಿದೆ. ರಾಜ್ಯ ಮತ್ತು ದೇಶದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅಭಿಯಾನಕ್ಕೆ ಹೆಚ್ಚಿನ ಮಹತ್ವ ದೊರೆತಿದ್ದು, ಎಲ್ಲಾ ವಿದ್ಯಾರ್ಥಿಗಳು ಲಸಿಕೆಯನ್ನು ತಪ್ಪದೇ ಪಡೆದುಕೊಳ್ಳಬೇಕೆಂದು ಹೇಳಿದರು.
ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ಮಹಾಮಾರಿ ಕೊರೊನಾ ಹಾಗೂ ಒಮಿಕ್ರಾನ್ ವೈರಸ್ ದೇಶ ಹಾಗೂ ರಾಜ್ಯದಲ್ಲಿ ವ್ಯಾಪಕವಾಗಿ ಹರಡಲು ಪ್ರಾರಂಭಿಸಿದೆ.ಆದ್ದರಿಂದ ೧೫ ರಿಂದ ೧೮ ವರ್ಷದ ಮಕ್ಕಳಿಗೆ ಈ ಲಸಿಕೆ ಅಭಿಯಾನ ಸರ್ಕಾರ ಆಯೋಜಿಸಿದೆ.ಇದು ನಿಮ್ಮೆಲ್ಲರ ಸಂರಕ್ಷಣೆಗಾಗಿ ಎಂಬುದು ಮರೆಯಬಾರದು.ಇದರಿಂದ ಯಾವುದೇ ರೀತಿ ಅಡ್ಡ ಪರಿಣಾಮಗಳಿಲ್ಲ. ಲಸಿಕೆ ಪಡೆಯಲು ಯಾವುದೇ ರೀತಿ ಹಿಂದೇಟು ಹಾಕಬೇಡಿ. ಹತ್ತು ಹಲವು ಸುಳ್ಳು ಸುದ್ದಿ ಹರಿದಾಡಿದರೂ ಭಯಗೊಳ್ಳದಿರಿ.ನಿಮ್ಮ ಹಾಗೂ ಕುಟುಂಬದ ಸ್ವಾಸ್ಥ್ಯದ ಜತೆಗೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ನಮೆಮಲ್ಲರ ಜವಾಬ್ದಾರಿ.ಅದಕ್ಕಾಗಿ ಪ್ರತಿಯೊಬ್ಬರೂ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಕೊಂಡು ಇತರರಿಗೂ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಬ್ದುಲ್ ರಹೀಮ್, ೨೦೦೭ರಲ್ಲಿ ಅಥವಾ ಅದಕ್ಕಿಂತ ಮೊದಲು ಹುಟ್ಟಿದ ಮಕ್ಕಳಿಗೆ ಲಸಿಕೆ ಮೊದಲನೇ ಡೋಸ್ ಪಡೆದ ೨೮ ದಿನಗಳ ನಂತರ ಎರಡನೇ ಡೋಸ್ ಲಸಿಕೆ ನೀಡಲಾಗುವುದು ಎಂದು ಹೇಳಿದರು.
ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ, ಡಾ.ಶಂಕರ ಮಾತನಾಡಿ, ಸಿಆರ್‌ಸಿ ಅಯುಬ್, ಸಿಎ ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ, ಮರಗೋಳ ಕಾಲೇಜಿನ ಪ್ರಾಂಶುಪಾಲ ಅನೀಲಕುಮಾರ ಕೊಪ್ಪಳಕರ್, ರಾಜಕುಮಾರ ಬಾಸೂತ್‌ಕರ್,ರಮೇಶ ವಾಲಿ, ಸಾಯಿಬಣ್ಣ ಗುಡ್ಲಾ, ಶರಣು ಹಲಕರ್ಟಿ,ಪ್ರವೀಣ ರಾಜನ್, ಸೌರಭ ವ್ಯಾಸ, ಚನ್ನಬಸಪ್ಪ ಕೊಲ್ಲೂರ್,ಸುಧೀರ ಕುಲಕರ್ಣಿ, ಮಹ್ಮದ್ ಇರ್ಫಾನ್,ಶರಣಮ್ಮ, ವಾಣಿಶ್ರೀ, ರೇಣುಕಾ, ಮಲ್ಲಣ್ಣ ಹಲಕರ್ಟಿ,ರಿಜ್ವಾನ್, ಶಂಕರ ವಾಲೀಕಾರ ಇತರರು ಇದ್ದರು.
ನಗರದ ಮರಗೋಳ ಕಾಲೇಜು ಹಾಗೂ ಮಿನಿ ರೋಸ್ ಶಾಲೆಯ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕಲಾಯಿತು.