ಶಹಾಬಾದ: ನಗರದ ಎಸ್.ಜಿ.ವರ್ಮಾ ಹಿಂದಿ ಮಾಧ್ಯಮ ಪ್ರೌಢ ಶಾಲೆ, ಎಸ್.ಎಸ್.ನಂದಿ ಪ್ರೌಢಶಾಲೆ ಹಾಗೂ ಸಿ.ಎ.ಇಂಗಿನಶೆಟ್ಟಿ ಕಾಲೇಜಿನ ಮಕ್ಕಳಿಗೆ ಸಮುದಾಯ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಕೋವಿಡ್ ಲಸಿಕೆಯನ್ನು ಹಾಕಲಾಯಿತು.
ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಮಹ್ಮದ್ ಅಬ್ದುಲ್ ರಹೀಮ್ ಮಾತನಾಡಿ, ಕೋವಿಡ್ ಲಸಿಕೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನುಂಟು ಮಾಡಿ ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ದೇಹಕ್ಕೆ ನೀಡುತ್ತದೆ.ಆದ್ದರಿಂದ ಕೊರೊನಾ ವೈರಾಣುವಿನಿಂದ ರಕ್ಷಣೆ ಪಡೆಯಲು ಲಸಿಕೆ ಪಡೆಯುವುದು ಅತ್ಯವಶ್ಯಕ. ೧೮ ವ?ದ ಮೇಲ್ಪಟ್ಟ ಎಲ್ಲರಿಗೂ ಈಗಾಗಲೇ ಕೋವಿಡ್ ಲಸಿಕೆ ಹಾಕಲಾಗಿದೆ.
ಸದ್ಯ ೧೫ ರಿಂದ ೧೮ ವ?ಗಳ ವಯೋಮಾನದ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಗುತ್ತಿದೆ ವಿದ್ಯಾರ್ಥಿಗಳ ಆರೋಗ್ಯ ದೃಷ್ಠಿಯಿಂದ ಸರ್ಕಾರವು ಪ್ರೌಢ ಶಾಲಾ ಹಂತದ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆಹಾಕಿಸಲು ಮುಂದಾಗಿದೆ.ಈ ವ್ಯಾಕ್ಸಿನ ಹೆಮ್ಮಾರಿ ಕೋರೋನಾ ವೈರಸ್ ತಗುಲಿದರೂ ಯಾವುದೇ ರೀತಿಯ ತೊಂದರೆಯಾಗದಂತೆ ತಡೆಗಟ್ಟುವಂತಹ ಸಾಮಥ್ರ್ಯ ಹೊಂದಿದೆ. ಪ್ರಥಮ ಡೋಸ್ ತೆಗೆದುಕೊಂಡ ೨೮ ದಿನಗಳ ನಂತರ ಎರಡನೇ ಡೋಸ್ ಲಸಿಕೆ ಪಡೆಯಬೇಕು.
ಶಾಲೆಯಿಂದ ಗೈರು ಉಳಿದ ವಿದ್ಯಾರ್ಥಿಗಳಿದ್ದರೂ ಕೂಡಾ ಹತ್ತಿರದ ಪ್ರಾಥಮಿಕ ಚಿಕೀತ್ಸಾ ಕೇಂದ್ರವಾಗಲಿ, ಅಥವಾ ಹತ್ತಿರದ ಯಾವುದೇ ಶಾಲೆಯಲ್ಲಿ ಲಸಿಕೆ ನೀಡುತ್ತಿದ್ದರೂ ಅಲ್ಲಿಯಾದರೂ ಹಾಕಿಸಿಕೊಳ್ಳಬಹುದಾಗಿದೆ ಒಟ್ಟಾರೆ ಎಲ್ಲ ಮಕ್ಕಳು ವ್ಯಾಕ್ಸಿನ್ ಪಡೆದುಕೊಂಡು ಉತ್ತಮ ಆರೋಗ್ಯವಂತರಾಗಿ, ಶಿಕ್ಷಣವಂತರಾಗಿ ಸದೃಢ ದೇಶ ಕಟ್ಟುವ ಮಕ್ಕಳಾಗಿ ಹೊರಹೊಮ್ಮಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಯುಸುಫ್ ನಾಕೇದಾರ, ವಾಣಿಶ್ರೀ, ಪದ್ಮಾ ಇತರರು ಇದ್ದರು.