ಸುರಪುರ: ನಗರದಲ್ಲಿ ಸ್ಲಂ ಬೋರ್ಡ್ ವತಿಯಿಂದ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿ ವರ್ಷಗಳಾದರು ಪೂರ್ಣಗೊಳಿಸದೆ ಕಡೆಗಣಿಸಲಾಗಿದೆ.ಆದ್ದರಿಂದ ಕೂಡಲೇ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಯುವ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ನಗರದ ತಹಸೀಲ್ ಕಚೇರಿ ಮುಂದೆ ಗುರುವಾರ ಮದ್ಹ್ಯಾನ ಸಾಂಕೇತಿಕ ಪ್ರತಿಭಟನೆ ನಡೆಸಿದ ಮುಖಂಡರು ಮಾತನಾಡಿ,ನಗರದಲ್ಲಿನ ಸ್ಲಂ ಬೋರ್ಡ್‌ನಿಂದ ಬಡವರಿಗೆ ಮನೆಗಳು ಮಂಜೂರಾಗಿ ನಿರ್ಮಿಸುತ್ತಿದ್ದಾರೆ.ಅಲ್ಲದೆ ಪ್ರತಿ ಫಲಾನುಭವಿಯಿಂದ ೨೫ ಸಾವಿರ ರೂಪಾಯಿಗಳಂತೆ ಮೂರು ಕಂತಿನ ೭೫ ಸಾವಿರ ರೂಪಾಯಿಗಳನ್ನು ಕಟ್ಟಿಸಿಕೊಳ್ಳಲಾಗಿದೆ.ಆದರೆ ಹಣ ಕಟ್ಟಿದ ಫಲಾನುಭವಿಗಳಿಗೆ ಇದುವರೆಗೂ ಮನೆಗಳನ್ನು ನಿರ್ಮಿಸಿ ಕೊಟ್ಟಿಲ್ಲ.ಅಲ್ಲದೆ ಮನೆಗಳ ನಿರ್ಮಾಣಕ್ಕೆ ಬಳಸಿರುವ ಕಚ್ಚಾ ವಸುಗಳು ಕಳಪೆ ಗುಣಮಟ್ಟದವುಗಳಾಗಿವೆ ಎಂದು ಆರೋಪಿಸಿದರು.
ಆದ್ದರಿಂದ ಕೂಡಲೇ ಮನೆಗಳ ನಿರ್ಮಾಣದಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು,ಈ ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿದಲ್ಲಿ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ಸಿರಸ್ತೆದಾರರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಗೌರವಾಧ್ಯಕ್ಷ ರಾಜಾ ಚೆನ್ನಪ್ಪ ನಾಯಕ,ಉಪಾಧ್ಯಕ್ಷ ಸಚಿನ್ ಕುಮಾರ ನಾಯಕ,ಖಜಾಂಚಿ ಮಂಜುನಾಥ,ಕಾರ್ಯದರ್ಶಿ ಮಹ್ಮದ ರಫೀಕ್ ಮುಖಂಡರಾದ ಅಬೀದ್ ಹುಸೇನ್ ಪಗಡಿ,ಅಮಜದ್ ಹುಸೇನ ಸೇರಿದಂತೆ ಅನೇಕರಿದ್ದರು.